ಪ್ರಕಟಣಾ ದಿನಾಂಕ:
15 NOV 2026 12:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರಗಳ ಮುಖ್ಯಸ್ಥರಾಗಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕುರಿತು ಪಾಠಗಳನ್ನು ಅಧ್ಯಯನ ಮಾಡಿ ಕಲಿಯಲು ನೀತಿ ಆಯೋಗವು ನವೆಂಬರ್ 17, 2026 ರಂದು ಐದು ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯನ್ನು ಪ್ರಾರಂಭಿಸಲಿದೆ. ಈ ಸರಣಿಯು ಸಾರ್ವಜನಿಕ ನಾಯಕತ್ವದ ಈ ಕಾಲು ಶತಮಾನದ ಅಧ್ಯಯನವನ್ನು ನಡೆಸುತ್ತದೆ. ಈ ಉಪಕಾರದಲ್ಲಿ ಈ ಮಹಾ ಪ್ರಯಾಣದ ಭಾಗವಾಗಿದ್ದ ಇತರ ಸಾಧಕರ ಅನುಭವಗಳನ್ನು ಕೂಡ ದಾಖಲಿಸುತ್ತದೆ ಮತ್ತು ಅವುಗಳನ್ನು ಎಲ್ಲರಿಗೂ ಪ್ರಯೋಜನಕಾರಿ ಜ್ಞಾನವಾಗಿ ಪರಿವರ್ತಿಸುತ್ತದೆ, ಹಾಗೂ ಇದರಿಂದ ಲಭ್ಯವಾಗುವ ಪಠ್ಯ - ಪಾಠಗಳು ರಾಷ್ಟ್ರದ ಹಂಚಿಕೆಯ ಜ್ಞಾನದ ಭಾಗವಾಗುತ್ತವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಅಕ್ಟೋಬರ್ 7, 2001 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಕಚೇರಿಯಲ್ಲಿ ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಅವರು ಮೇ 2014 ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ಈಗ ಅವರು ಸತತ ಮೂರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 7, 2026 ರಂದು ಇಪ್ಪತ್ತೈದು ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಇದು ಭಾರತದಲ್ಲಿ ಚುನಾಯಿತ ಸರ್ಕಾರಗಳ ಮುಖ್ಯಸ್ಥರಾಗಿ ಅತಿ ಹೆಚ್ಚು ಕಾಲದ ನಿರಂತರ ಅಧಿಕಾರಾವಧಿಯನ್ನು ಸೂಚಿಸುತ್ತದೆ. ಈ ಅವಧಿಯುದ್ದಕ್ಕೂ, ಆಡಳಿತವು ಪ್ರಧಾನ ಸೇವಕನ ಕಲ್ಪನೆಯಲ್ಲಿ ಆಧಾರವಾಗಿದೆ, ಅದರ ಅಡಿಯಲ್ಲಿ ಪ್ರತಿಯೊಂದು ಸರ್ಕಾರಿ ಕಚೇರಿಯು ನಾಗರಿಕರಿಗೆ ಸೇವೆ ಸಲ್ಲಿಸಲು ಅಸ್ತಿತ್ವದಲ್ಲಿದೆ. ಅಂತ್ಯೋದಯವು ಕೊನೆಯ ವ್ಯಕ್ತಿಯಲ್ಲಿ ಪ್ರಗತಿಯ ಅಳತೆಯನ್ನು ನಿಗದಿಪಡಿಸಿದೆ. ಜನ್ ಭಾಗೀದಾರಿ ಅಭಿವೃದ್ಧಿಯನ್ನು ಜನರ ಚಳುವಳಿಯನ್ನಾಗಿ ಮಾಡಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ ತತ್ವವು ಇದನ್ನು ಹಂಚಿಕೆಯ ರಾಷ್ಟ್ರೀಯ ಕಾರ್ಯಚಟುವಟಿಕೆಯಾಗಿ ಮತ್ತಷ್ಟು ಬಲಪಡಿಸುತ್ತಿದೆ. 2047 ರ ವೇಳೆಗೆ ವಿಕಸಿತ ಭಾರತದ ಗುರಿಯು ಈ ವಿಧಾನವನ್ನು ದೀರ್ಘ ದಿಗಂತವನ್ನು ಒದಗಿಸಿದೆ, ಪ್ರತಿಯೊಂದು ಸಂಸ್ಥೆಯು ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಸಮೀಪಿಸುತ್ತಿದ್ದಂತೆ ಯೋಜನೆ ಮತ್ತು ಕಾರ್ಯನಿರ್ವಹಿಸುವಂತೆ ಕೇಳುತ್ತದೆ.
ಈ ಪ್ರಮಾಣದಲ್ಲಿ ಆಡಳಿತ ನಡೆಸುವ ಬಗ್ಗೆ ಭಾರತ ಕಲಿತಿರುವ ಹೆಚ್ಚಿನ ವಿಷಯಗಳು ಈ ನಿರ್ಧಾರಗಳನ್ನು ತೆಗೆದುಕೊಂಡ ಮತ್ತು ನಿರ್ವಹಿಸಿದ ಅಧಿಕಾರಿಗಳು, ಸಂಸ್ಥೆಗಳು ಮತ್ತು ನಾಗರಿಕರ ಅನುಭವದಲ್ಲಿವೆ. ಈ ಸರಣಿಯು ಅವರ ನೇರ ಖಾತೆಗಳನ್ನು ದಾಖಲಿಸುತ್ತದೆ ಮತ್ತು ಶೈಕ್ಷಣಿಕ ಕಠಿಣತೆಯೊಂದಿಗೆ ಅವುಗಳನ್ನು ಪರಿಶೀಲಿಸುತ್ತದೆ. ನಾಗರಿಕ ಸೇವಕರು, ತರಬೇತಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕೇಸ್ ಸ್ಟಡೀಸ್, ಸಂಶೋಧನಾ ಪ್ರಬಂಧಗಳು ಮತ್ತು ಬೋಧನಾ ಸಾಮಗ್ರಿಗಳನ್ನು ಒಳಗೊಂಡಂತೆ ಸಾಂಸ್ಥಿಕ ಕಲಿಕಾ ಸಾಮಗ್ರಿಗಳಾಗಿ ಅವುಗಳನ್ನು ಅಭಿವೃದ್ಧಿಪಡಿಸುತ್ತದೆ.
ಐದು ರಾಷ್ಟ್ರೀಯ ಕಾರ್ಯಾಗಾರಗಳು ಈ ಕೆಳಗಿನ ಆಡಳಿತ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ: ನವೆಂಬರ್ 2026 ರಲ್ಲಿ "ದೂರದೃಷ್ಟಿಯ ಪರಿಕಲ್ಪನೆಯಾಗಿ (ಮಿಷನ್) ನಾಯಕತ್ವ", ಜನವರಿ 2027 ರಲ್ಲಿ "ವಿತರಣೆಯಾಗಿ ಆಡಳಿತ", ಏಪ್ರಿಲ್ 2027 ರಲ್ಲಿ "ಸೇರ್ಪಡೆಯಾಗಿ ಅಭಿವೃದ್ಧಿ", ಜುಲೈ 2027 ರಲ್ಲಿ "ನಾಗರಿಕತೆಯ ಗುರುತು" ಮತ್ತು ಸೆಪ್ಟೆಂಬರ್ 2027 ರಲ್ಲಿ "ಜಾಗತಿಕ ಶಕ್ತಿಯಾಗಿ ಭಾರತ".
ಮೊದಲ ರಾಷ್ಟ್ರೀಯ ಕಾರ್ಯಾಗಾರ, "ಮಿಷನ್ ಆಗಿ ನಾಯಕತ್ವ", ನವೆಂಬರ್ 17, 2026 ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಇದು ನಾಯಕತ್ವವು ಯಾವ ನಿರ್ದಿಷ್ಟ ನಿರ್ಧಾರಗಳಲ್ಲಿ ಗೋಚರಿಸುತ್ತದೆ ಮತ್ತು ಆ ನಿರ್ಧಾರಗಳನ್ನು ನಾಗರಿಕರಿಗೆ ಫಲಿತಾಂಶಗಳಾಗಿ ಹೇಗೆ ಅನುವಾದಿಸಲಾಗುತ್ತದೆ ಎಂಬುದರ ಮೂಲಕ ಅಧ್ಯಯನ ಮಾಡುತ್ತದೆ. ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅನುರಾಗ್ ಜೈನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಸ್ವಾಗತಿಸಲಿದ್ದಾರೆ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ಲಹಿರಿ ಅವರು ಆರಂಭಿಕ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಸಂಸ್ಥಾಪಕ ಶ್ರೀ ಉದಯ್ ಕೊಟಕ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ ಅವರು ಕಾರ್ಯಾಗಾರದ ಚೌಕಟ್ಟನ್ನು ರೂಪಿಸಲಿದ್ದಾರೆ.
ಮಹತ್ವದ ನಿರ್ಧಾರಗಳಲ್ಲಿ ನೇರವಾಗಿ ಭಾಗಿಯಾದ ನಾಲ್ಕು ಜನರಿಂದ ಬಂದ ಮಾಹಿತಿಗಳು ದಿನದ ತಿರುಳಾಗಲಿವೆ. ಈ ಕಾರ್ಯಕ್ರಮದಲ್ಲಿ , ಗುಜರಾತ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ರಾಜೀವ್ ಟೋಪ್ನೋ ಅವರು 2001 ರ ಭೂಕಂಪದ ನಂತರ ಕಚ್ ನ ಪುನರ್ನಿರ್ಮಾಣದ ಕುರಿತು ಮಾತನಾಡಲಿದ್ದಾರೆ. ಮಾಜಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಯು.ಪಿ.ಎಸ್.ಸಿ.ಯ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರೀತಿ ಸುದಾನ್ ಅವರು ಕೋವಿಡ್ -19 ಸಾಂಕ್ರಾಮಿಕದ ಪ್ರತಿಕ್ರಿಯೆಯ ಕುರಿತು ಮಾತನಾಡಲಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಅವರು ಲಖ್ಪತಿ ದೀದಿ ಕುರಿತು ಮಾತನಾಡಲಿದ್ದಾರೆ. ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಬಾಹ್ಯಾಕಾಶ ಆರ್ಥಿಕತೆಯ ಮುಕ್ತತೆಯ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ ನಾಯಕತ್ವ" ಎಂಬ ವಿಷಯದ ಕುರಿತು ಚರ್ಚೆಯನ್ನು ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ನಡೆಸಲಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಮತ್ತು ಇಂಧನ ಸಚಿವ ಶ್ರೀ ಅರವಿಂದ್ ಕುಮಾರ್ ಶರ್ಮಾ, ಭಾರತೀಯ ನಿರ್ವಹಣಾ ಸಂಸ್ಥೆ ಅಹಮದಾಬಾದ್ ಇದರ ಪ್ರೊ. ವಿಶಾಲ್ ಗುಪ್ತಾ, ನೀತಿ ಆಯೋಗದ ಡಿಸ್ಟಿಂಗ್ವಿಶ್ಡ್ ಫೆಲೋ ಶ್ರೀಮತಿ ದೇಬ್ಜಾನಿ ಘೋಷ್ ಮತ್ತು ಹರ್ಡೋಯ್ ನ ಜಂಟಿ ಮ್ಯಾಜಿಸ್ಟ್ರೇಟ್ ಶ್ರೀಮತಿ ನಾರಾಯಣಿ ಭಾಟಿಯಾ ಅವರು ಭಾಷಣಕಾರರ ತಂಡಗಳಲ್ಲಿ ಸೇರಿದ್ದಾರೆ.
ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರು ಕಾರ್ಯಾಗಾರವನ್ನು ಸಮಾರೊಪಗೊಳಿಸಲಿದ್ದು, ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಕರ್ಮಯೋಗಿ ಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ. ಸಂಕಲ್ಪದ ಮೂಲಕ, ದೇಶಾದ್ಯಂತ ನಾಗರಿಕ ಸೇವಕರು ತಮ್ಮದೇ ಆದ ನಾಯಕತ್ವ ಅಭ್ಯಾಸದಲ್ಲಿ ನಿರ್ದಿಷ್ಟ ಬದಲಾವಣೆಗೆ ಬದ್ಧರಾಗುತ್ತಾರೆ.
ಕಾರ್ಯಾಗಾರದಲ್ಲಿ ಸುಮಾರು 900 ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ, ಅವರಲ್ಲಿ 250 ಜನರು ನೇರವಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 150 ಸರ್ಕಾರಿ ಅಧಿಕಾರಿಗಳು ಸೇರಿದ್ದಾರೆ. ಭಾಗವಹಿಸುವವರಲ್ಲಿ ಪ್ರಮುಖ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ 25 ವಿದ್ಯಾರ್ಥಿಗಳು ಮತ್ತು 50 ಸಮುದಾಯ ಪಾಲುದಾರರು ಮತ್ತು ರಾಷ್ಟ್ರೀಯ ಪ್ರಮುಖ ಯೋಜನೆಗಳ ಫಲಾನುಭವಿಗಳು ಸೇರಿದ್ದಾರೆ. ಸಾಮರ್ಥ್ಯ ನಿರ್ಮಾಣ ಆಯೋಗದ ಅಮೃತ್ ಜ್ಞಾನ ಕೋಶ್ ಉಪಕ್ರಮದ ಅಡಿಯಲ್ಲಿ ತರಬೇತಿ ಪಡೆದ 25 ಕೇಸ್ ಫೆಸಿಲಿಟೇಟರ್ ಗಳು ಈ ಕಾರ್ಯಕ್ರಮದ ವಿವಿಧ ವೇದಿಕೆಗಳ ತಂಡ- ಗುಂಪು ಚರ್ಚೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಕಾರ್ಯಕಲಾಪಗಳನ್ನು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಪ್ರಸಾರ ಮಾಡಲಾಗುತ್ತದೆ.
*****