ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣುತೆಯ ದೃಷ್ಟಿಕೋನಕ್ಕೆ ದೃಢವಾಗಿ ಬದ್ಧವಾಗಿರುವ ಗೃಹ ಸಚಿವಾಲಯ, ಯುಎಪಿಎ ಅಡಿಯಲ್ಲಿ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆಯಾಗಿ ಪರಿಗಣಿಸಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐ ಆರ್ ಎಫ್)  ಮೇಲಿನ ನಿಷೇಧವನ್ನು ವಿಸ್ತರಿಸಿದೆ


ಪರಾರಿಯಾಗಿರುವ ಭಯೋತ್ಪಾದಕ ಪ್ರಚಾರಕ ಡಾ. ಜಾಕಿರ್ ನಾಯಕ್ ನೇತೃತ್ವದ ಈ ಸಂಘಟನೆಯು ಕೋಮು ದ್ವೇಷವನ್ನು ಪ್ರಚೋದಿಸುವುದು, ವೈರತ್ವವನ್ನು ಬೆಳೆಸುವುದು ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವುದು ಸೇರಿದಂತೆ ಭಾರತ ವಿರೋಧಿ ದುಷ್ಟ ಸಂಚುಗಳಲ್ಲಿ ತೊಡಗಿಸಿಕೊಂಡಿದೆ

ಈ ಗುಂಪು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿಷಕಾರಿ ಸಿದ್ಧಾಂತವನ್ನು ಹರಡುತ್ತಿರುವುದು, ಹಿಂಸಾತ್ಮಕ ಅಶಾಂತಿಗೆ ಪ್ರಚೋದನೆ ನೀಡುತ್ತಿರುವುದು, ಪರಾರಿಯಾಗಿರುವ ಭಯೋತ್ಪಾದಕರನ್ನು ಮತ್ತೆ ಒಗ್ಗೂಡಿಸಲು ಪ್ರೋತ್ಸಾಹಿಸುತ್ತಿರುವುದು ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತಿರುವುದು ಕಂಡುಬಂದಿದೆ

ಪ್ರಕಟಣಾ ದಿನಾಂಕ: 13 NOV 2026 1:41PM by PIB Bengaluru

ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣುತೆಯ ದೃಷ್ಟಿಕೋನಕ್ಕೆ ದೃಢವಾಗಿ ಬದ್ಧವಾಗಿರುವ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಕಾನೂನುಬಾಹಿರ ಸಂಘಟನೆಯಾಗಿ ಪರಿಗಣಿಸಿ ಅದರ ಮೇಲಿನ ನಿಷೇಧವನ್ನು ವಿಸ್ತರಿಸಿದೆ.

ಗೃಹ ಸಚಿವರ ಕಚೇರಿಯ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದೆ; “ಭಯೋತ್ಪಾದನೆ ಮತ್ತು ದೇಶವಿರೋಧಿ ಚಟುವಟಿಕೆಗಳ ವಿರುದ್ಧ ಮೋದಿ ಅವರ ಶೂನ್ಯ ಸಹಿಷ್ಣುತೆಯ ದೃಷ್ಟಿಕೋನಕ್ಕೆ ದೃಢವಾಗಿ ಬದ್ಧವಾಗಿರುವ ಗೃಹ ಸಚಿವಾಲಯವು, ಈ ಮೂಲಕ ಯುಎಪಿಎ ಅಡಿಯಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಸಂಘಟನೆಯಾಗಿ ಪರಿಗಣಿಸಿ ಅದರ ಮೇಲಿನ ನಿಷೇಧವನ್ನು ವಿಸ್ತರಿಸುತ್ತದೆ. ಪರಾರಿಯಾಗಿರುವ ಭಯೋತ್ಪಾದಕ ಪ್ರಚಾರಕ ಡಾ. ಜಾಕಿರ್ ನಾಯಕ್ ನೇತೃತ್ವದ ಈ ಸಂಘಟನೆಯು ಕೋಮು ದ್ವೇಷವನ್ನು ಪ್ರಚೋದಿಸುವುದು, ವೈರತ್ವವನ್ನು ಬೆಳೆಸುವುದು ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವುದು ಸೇರಿದಂತೆ ಭಾರತ ವಿರೋಧಿ ದುಷ್ಟ ಸಂಚುಗಳಲ್ಲಿ ತೊಡಗಿಸಿಕೊಂಡಿದೆ. ಈ ಗುಂಪು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿಷಕಾರಿ ಸಿದ್ಧಾಂತವನ್ನು ಹರಡುತ್ತಿರುವುದು, ಹಿಂಸಾತ್ಮಕ ಅಶಾಂತಿಗೆ ಪ್ರಚೋದನೆ ನೀಡುತ್ತಿರುವುದು, ಪರಾರಿಯಾಗಿರುವ ಭಯೋತ್ಪಾದಕರನ್ನು ಮತ್ತೆ ಒಗ್ಗೂಡಿಸಲು ಪ್ರೋತ್ಸಾಹಿಸುತ್ತಿರುವುದು ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತಿರುವುದು ಕಂಡುಬಂದಿದೆ.”

 

*****


(ಪ್ರಕಟಣೆ ಐ.ಡಿ.: 2335789) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali-TR , Bengali , Assamese , Gujarati , Tamil