ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಪ್ರಕಟಣಾ ದಿನಾಂಕ:
10 NOV 2026 6:13PM by PIB Bengaluru
ಸರ್ಕಾರದ ಸಾರ್ವಜನಿಕ ಖರೀದಿ ನೀತಿಯಡಿಯಲ್ಲಿ SC/ST MSE ಗಳಿಂದ ಕಡ್ಡಾಯವಾವಾಗಿ 4% ರಷ್ಟು CPSE ಗಳ ಖರೀದಿ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ (CPSEs) ನವೆಂಬರ್ 5, 2026 ರಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಒಂದು ದುಂಡು ಮೇಜಿನ ಚರ್ಚೆಯನ್ನು ನಡೆಸಲಾಯಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯವರಾದ ಶ್ರೀಮತಿ ಮರ್ಸಿ ಎಪಾವೊ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. GeM ನ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಅಜಿತ್ ಚವಾಣ್, NSIC ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಸ್. ಎಸ್. ಆಚಾರ್ಯ ಹಾಗೂ ಸಚಿವಾಲಯ, ಸಾರ್ವಜನಿಕ ಉದ್ಯಮಗಳ ಇಲಾಖೆ ಮತ್ತು NSIC ಯ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ, SC/ST MSE ಗಳನ್ನು ಬೆಂಬಲಿಸಲು ತಮ್ಮ ಒಪ್ಪಿಗೆಯನ್ನು ಹಂಚಿಕೊಂಡರು.

BHEL, BEL, NTPC, AAI, BEML, Coal India Ltd ಸೇರಿದಂತೆ ಒಟ್ಟು 30 ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಈ ದುಂಡು ಮೇಜಿನ ಚರ್ಚೆಯಲ್ಲಿ ಭಾಗವಹಿಸಿದ್ದವು. ಈ ಚರ್ಚೆಯು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆ, ಮತ್ತು NSSHO ಗಳು, GeM ಮತ್ತು CPSE ಗಳ ನಡುವೆ ಸಮನ್ವಯವನ್ನು ಹೇಗೆ ಸಾಧಿಸುವುದು ಎಂಬುದರ ಮೇಲೆ ಕೇಂದ್ರೀಕೃತವಾಗಿತ್ತು.
ತಮ್ಮ ಭಾಷಣದಲ್ಲಿ, ಶ್ರೀಮತಿ ಮರ್ಸಿ ಎಪಾವೊ ಅವರು, ರಾಷ್ಟ್ರೀಯ ಎಸ್ಸಿ-ಎಸ್ಟಿ ಹಬ್ (NSSHO) ಯೋಜನೆಯಡಿ SC/ST MSE ಗಳನ್ನು ಉತ್ತೇಜಿಸಲು ಮತ್ತು ಅವರಿಗೆ ಬೆಂಬಲ ನೀಡಲು ಕೈಗೊಂಡ ವಿವಿಧ ಉಪಕ್ರಮಗಳನ್ನು ಎತ್ತಿ ತೋರಿಸಿದರು. ಇದು ಸಾರ್ವಜನಿಕವಾಗಿ SC/ST MSE ಗಳ ಪಾಲನ್ನು ನಿರಂತರವಾಗಿ ಹೆಚ್ಚಿಸಲು ಕಾರಣವಾಗಿದೆ. 2025-26ರ ಹಣಕಾಸು ವರ್ಷದಲ್ಲಿ, ಈ ಯೋಜನೆ ಪ್ರಾರಂಭವಾದಾಗಿನಿಂದ SC/ST MSE ಗಳಿಂದ ಸಾರ್ವಜನಿಕ ಸಂಗ್ರಹಣೆಯಲ್ಲಿ 36 ಪಟ್ಟು ಹೆಚ್ಚು ಹೆಚ್ಚಳವಾಗಿದೆ. SC/ST MSE ಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ನೆಟ್ವರ್ಕ್ ಸಾಧಿಸಲು ಹೊಸ ಉಪಕ್ರಮವಾದ ಉದ್ಯಮಿ ಜಾಗೃತಿ ಮತ್ತು ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮದ (EA & SVDP) ಬಗ್ಗೆ ಅವರು ಮತ್ತಷ್ಟು ಮಾಹಿತಿ ನೀಡಿದರು. ಈ ಗುರಿಯನ್ನು ಸಾಧಿಸಲು ಆಂತರಿಕ ಕ್ರಿಯಾ ಯೋಜನೆಯನ್ನು ರೂಪಿಸಲು ಮತ್ತು ಮಾರಾಟಗಾರರ ನೋಂದಣಿ/ಸೇವೆ ಹೊಂದಾಣಿಕೆ, SC/ST MSE ಗಳೊಂದಿಗೆ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಪ್ರಾದೇಶಿಕ/ಸ್ಥಳೀಯ ಸಂಪರ್ಕ ಮತ್ತು ಅವರನ್ನು ಕೈಹಿಡಿದು ನಡೆಸುವ ಬೆಂಬಲದ ವಿಷಯದಲ್ಲಿ ಸಹಾಯ ಒದಗಿಸುವಂತೆ ಅವರು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಒತ್ತಾಯಿಸಿದರು.

ಸಾರ್ವಜನಿಕ ಖರೀದಿ ಚೌಕಟ್ಟಿನಡಿಯಲ್ಲಿ ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸಲು ಮತ್ತು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲು MSME ಸಚಿವಾಲಯದ ಮಹತ್ವದ ಕೊಡುಗೆಯನ್ನು GeM ನ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಅಜಿತ್ ಚವಾಣ್ ಅವರು ಶ್ಲಾಘಿಸಿದರು. ಟೆಂಡರ್ ಭಾಗವಹಿಸುವಿಕೆಯಲ್ಲಿ SC/ST MSE ಗಳಿಗೆ ಸಹಾಯ ಮಾಡಲು ತೆಗೆದುಕೊಂಡ ವಿವಿಧ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ವಿಶೇಷವಾಗಿ ಸೇವೆಗಳು ಮತ್ತು ಉದ್ಯಮದ ಅಭಿವೃದ್ದಿಯಲ್ಲಿ, ವಿಶೇಷವಾಗಿ ಸೇವೆಗಳ ಮೂಲಕ, ಖರೀದಿ ಅವಕಾಶಗಳಿಗೆ ಸಮಾನ ಅವಕಾಶ ನೀಡಲು ವಿವಿಧ ವಲಯಗಳ ಮಾರಾಟಗಾರರನ್ನು ತೊಡಗಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಹ್ಯಾಂಡ್ಹೋಲ್ಡಿಂಗ್ ಬೆಂಬಲಕ್ಕಾಗಿ GeM ನೇಮಿಸಿದ ನೋಡಲ್ ಅಧಿಕಾರಿಯ ಸೇವೆಗಳನ್ನು ಬಳಸಿಕೊಳ್ಳುವಂತೆ ಅವರು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಪ್ರೋತ್ಸಾಹಿಸಿದರು.

ಉತ್ತಮವಾಗಿ ಕಾರ್ಯನಿರ್ವಹಿಸುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಸಂವಹನ ನಡೆಸಲು, ಅವುಗಳ ಆಂತರಿಕ ಸವಾಲುಗಳನ್ನು ಪರಿಹರಿಸಲು, CPSE ಗಳಿಗೆ ಅವಕಾಶವನ್ನು ಒದಗಿಸಿತು. SC/ST ಮತ್ತು ಮಹಿಳಾ ಸ್ವಾಮ್ಯದ MSE ಗಳಿಂದ ಸಂಗ್ರಹಣೆಯನ್ನು ಬಲಪಡಿಸಲು ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮಗಳು, ಸಾಮರ್ಥ್ಯ-ವರ್ಧನಾ ಉಪಕ್ರಮಗಳು ಮತ್ತು ಡಿಜಿಟಲ್ ಸೌಲಭ್ಯ ಬೆಂಬಲದ ಮೂಲಕ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು NSSH ನಡುವಿನ ವರ್ಧಿತ ಸಹಯೋಗಕ್ಕಾಗಿ ಮಾರ್ಗಗಳನ್ನು ಗುರುತಿಸುವುದರ ಮೇಲೆ ಕೂಡಾ ಚರ್ಚೆ ಕೇಂದ್ರೀಕೃತವಾಗಿತ್ತು.
*****