ಪ್ರಕಟಣಾ ದಿನಾಂಕ:
10 NOV 2026 9:13AM by PIB Bengaluru
ಗೋವರ್ಧನ ಪೂಜೆಯ ಶುಭ ಸಂದರ್ಭದಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ಸರ್ವರಿಗೂ ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯನ್ನು ಹಾರೈಸುತ್ತಾ, ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ನವ ಚೈತನ್ಯ ಮತ್ತು ಉತ್ಸಾಹವನ್ನು ತುಂಬಲಿ ಎಂದು ಆಶಿಸಿದ್ದಾರೆ ಹಾಗೂ ಭಗವಾನ್ ಶ್ರೀ ಕೃಷ್ಣನನ್ನು ಸ್ತುತಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
"सभी देशवासियों को गोवर्धन पूजा की बहुत-बहुत शुभकामनाएं। यह पावन पर्व आप सभी के जीवन में नई ऊर्जा और नए उत्साह का संचार करे। सभी के सुख, सौभाग्य और समृद्धि का विस्तार हो, यही मंगलकामना है।
आभीरनगरीप्राणप्रियं सत्यपराक्रमम् ।
स्वभृत्यभयभेत्तारं गोवर्धनधरं भजे ॥"
ಗೋವರ್ಧನ ಪರ್ವತವನ್ನು ಎತ್ತಿಹಿಡಿದವನೂ, ಬ್ರಜವಾಸಿಗಳಿಗೆ ಪ್ರಿಯನೂ, ಅಚಲವಾದ ಪರಾಕ್ರಮವುಳ್ಳವನೂ ಹಾಗೂ ತನ್ನ ಭಕ್ತರ ಭಯವನ್ನು ಹೋಗಲಾಡಿಸುವವನೂ ಆದ ಶ್ರೀಕೃಷ್ಣನನ್ನು ನಾನು ಆರಾಧಿಸುತ್ತೇನೆ.
*****