ಪ್ರಕಟಣಾ ದಿನಾಂಕ:
08 NOV 2026 7:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಭದ್ರತಾ ಪಡೆಗಳ ಸಮರ್ಪಣೆಯಿಂದ ಸಾಧ್ಯವಾಗಿರುವ ಬಸ್ತಾರ್ ನಲ್ಲಿ ದೀಪಾವಳಿಯ ಉತ್ಸಾಹವನ್ನು ಈ ಆಚರಣೆಗಳು ಪ್ರತಿಬಿಂಬಿಸುತ್ತವೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ನಕ್ಸಲಿಸಂ ಈಗ ಇತಿಹಾಸವಾಗಿದೆ ಮತ್ತು ಅಭಿವೃದ್ಧಿಯೇ ಮುಂದಿನ ಮಾರ್ಗವಾಗಿದೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಈ ಸಂದರ್ಭವನ್ನು ವಿಶೇಷ ಮತ್ತು ಸ್ಮರಣೀಯ ಎಂದು ಬಣ್ಣಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;\
"ಬಸ್ತಾರ್ ನಲ್ಲಿ ದೀಪಾವಳಿ... ನಮ್ಮ ಭದ್ರತಾ ಪಡೆಗಳಿಗೆ ಧನ್ಯವಾದಗಳು!
ನಕ್ಸಲಿಸಂ ಒಂದು ಇತಿಹಾಸ.
ಅಭಿವೃದ್ಧಿಯೇ ಮುಂದಿನ ದಾರಿ.
ಇಂದು ವಿಶೇಷ ಮತ್ತು ಸ್ಮರಣೀಯವಾಗಿತ್ತು."
"ಬಸ್ತರ್‌ನಲ್ಲಿ ದೀಪಾವಳಿಯ ಉತ್ಸಾಹ ಪೂರ್ಣವಾಗಿ ಪ್ರದರ್ಶನಗೊಂಡಿದೆ!"
*****