ಪ್ರಕಟಣಾ ದಿನಾಂಕ:
07 NOV 2026 6:50PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ದೀಪಾವಳಿ ಹಬ್ಬದ ಮುನ್ನಾದಿನದಂದು ನಾಗರಿಕರಿಗೆ ಶುಭ ಹಾರೈಸಿದ್ದಾರೆ.
ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, "ದೀಪಾವಳಿಯ ಈ ಶುಭ ಸಂದರ್ಭದಲ್ಲಿ, ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಹಾಗೂ ಶುಭ ಹಾರೈಕೆಗಳು" ಎಂದು ತಿಳಿಸಿದ್ದಾರೆ.
ರಾವಣನ ಎದುರು ವಿಜಯ ಸಾಧಿಸಿದ ನಂತರ ಭಗವಾನ್ ಶ್ರೀರಾಮನು ಅಯೋಧ್ಯೆಗೆ ಮರಳಿದಾಗ ಆನಂದಮಯ ಸಂಭ್ರಮಾಚರಣೆಗಳು ನಡೆದವು. ಭಗವಾನ್ ಶ್ರೀರಾಮನು ದೀಪಗಳ ಮನೋಹರ ಸಾಲಂಕೃತ ಸಾಲುಗಳನ್ನು ಕಣ್ತುಂಬಿಕೊಂಡನು. ಇದು ದೀಪಾವಳಿಯ ಸಾಂಸ್ಕೃತಿಕ ಮತ್ತು ಭಕ್ತಿಪೂರ್ವಕ ಮಹತ್ವವನ್ನು ಹೊಂದಿದೆ. ಈ ಹಬ್ಬವು 'ರಾಮರಾಜ್ಯ'ದ ಶುಭಾರಂಭದ ಸಂಕೇತವೂ ಆಗಿದೆ.
ದೀಪಾವಳಿ ಹಬ್ಬವು ನಕಾರಾತ್ಮಕ ಪ್ರವೃತ್ತಿಗಳ ಮೇಲೆ ಸದ್ಗುಣಗಳ ವಿಜಯವನ್ನು ಗುರುತಿಸುತ್ತದೆ. ಇದು ಸಂಕಷ್ಟಗಳ ಕೊನೆಯಾಗುವಿಕೆ ಹಾಗೂ ಸಂತೋಷಭರಿತ ಮತ್ತು ಸಮೃದ್ಧ ಜೀವನದ ಆರಂಭದ ಸೂಚಕವೂ ಸಹ ಆಗಿದೆ. ಈ ಸಂದರ್ಭದಲ್ಲಿ, ಜನರು ಶುಭಾರಂಭ ಹಾಗೂ ಕ್ಷೇಮಕ್ಕಾಗಿ ಭಗವಾನ್ ಗಣೇಶನನ್ನು ಮತ್ತು ಸಮೃದ್ಧಿಗಾಗಿ ಮಾತೆ ಮಹಾಲಕ್ಷ್ಮಿಯನ್ನೂ ಪೂಜಿಸುವರು. ಎಲ್ಲರೂ ಸಂತೋಷವಾಗಿರಲಿ ಎಂದು ಪ್ರಾರ್ಥಿಸುವರು.
ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಲಭಿಸಲಿ ಎಂದು ಹಾರೈಸುತ್ತೇನೆ. ನಾವು ಪರಿಸರವನ್ನು ಸಂರಕ್ಷಿಸೋಣ, ಸಾಮರಸ್ಯದಿಂದ ಬಾಳೋಣ ಮತ್ತು ಭಾರತೀಯ ಮೌಲ್ಯಗಳಿಂದ ಪ್ರೇರಿತರಾದ ನಮ್ಮ ದೇಶಪ್ರೇಮಿ ಯುವಜನರು, 'ವಿಕಸಿತ ಭಾರತ'ವನ್ನು ನಿರ್ಮಿಸುವ ಕಾರ್ಯದಲ್ಲಿ ಉತ್ಸಾಹದಿಂದ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.
*****