ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಮೈ ಭಾರತ್‌ ಪೋರ್ಟಲ್‌ನಲ್ಲಿ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಕ್ರೀಡಾ ಇಲಾಖೆಯು ‘ಖೇಲೋ ಭಾರತ್‌:  ಫ್ರಮ್‌ ಮ್ಯಾನುಫ್ಯಾಕ್ಚರಿಂಗ್‌ ಟು ಪೋಡಿಯಂ ಫಿನಿಶ್‌ ಕ್ವಿಜ್‌’ ಅನ್ನು ಪ್ರಾರಂಭಿಸಿದೆ


ರಸಪ್ರಶ್ನೆ ಸ್ಪರ್ಧೆ 2026 ರ ನವೆಂಬರ್‌ 4 ರಿಂದ 20 ರವರೆಗೆ ತೆರೆದಿರುತ್ತದೆತ; ಇದರಲ್ಲಿ ಭಾಗವಹಿಸುವವರ ಪೈಕಿ ಅಗ್ರ 100 ಮಂದಿಗೆ ಫಿಟ್‌ ಇಂಡಿಯಾ ಸರಕುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ

ಪ್ರಕಟಣಾ ದಿನಾಂಕ: 04 NOV 2026 3:20PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕ್ರೀಡಾ ಇಲಾಖೆಯು ಇಂದು ಅಂದರೆ 2026 ನವೆಂಬರ್‌ 4ರಂದು ಮೈ ಭಾರತ್‌ ಪೋರ್ಟಲ್‌ನಲ್ಲಿ‘ಖೇಲೋ ಭಾರತ್‌: ಫ್ರಮ್‌ ಮ್ಯಾನುಫ್ಯಾಕ್ಚರಿಂಗ್‌ ಟು ಪೋಡಿಯಂ ಫಿನಿಶ್‌ ಕ್ವಿಜ್‌’ ಅನ್ನು ಪ್ರಾರಂಭಿಸಿದೆ. ದೇಶದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ದೇಶೀಯ ಕ್ರೀಡಾ ಸರಕುಗಳ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಏಷ್ಯನ್‌ ಗೇಮ್ಸ್‌ 2026 ಮತ್ತು ಏಷ್ಯನ್‌ ಪ್ಯಾರಾ  ಫ್ರಮ್‌ 2026ರಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ಸಾಧನೆಗಳನ್ನು ಆಚರಿಸಲು ಭಾರತ ಸರ್ಕಾರದ ಉಪಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ರಸಪ್ರಶ್ನೆ ಹೊಂದಿದೆ.

ರಸಪ್ರಶ್ನೆಯು 2026ರ ನವೆಂಬರ್‌ 20 ರವರೆಗೆ ತೆರೆದಿರುತ್ತದೆ ಮತ್ತು ಉತ್ಪಾದನೆ ಮತ್ತು ನಾವೀನ್ಯತೆಯಿಂದ ಅಂತಾರಾಷ್ಟ್ರೀಯ ಕ್ರೀಡಾ ಶ್ರೇಷ್ಠತೆಯವರೆಗೆ ಭಾರತದ ಬೆಳೆಯುತ್ತಿರುವ ಕ್ರೀಡಾ ಪರಿಸರ ವ್ಯವಸ್ಥೆಯ ಬಗ್ಗೆ ಕಲಿಯಲು ನಾಗರಿಕರು, ವಿದ್ಯಾರ್ಥಿಗಳು, ಯುವಕರು, ವೃತ್ತಿಪರರು ಮತ್ತು ಕ್ರೀಡಾ ಉತ್ಸಾಹಿಗಳನ್ನು ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಭಾರತದ ದೇಶೀಯ ಕ್ರೀಡಾ ಸರಕುಗಳ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 1,856.67 ಕೋಟಿ ರೂ.ಗಳ ವೆಚ್ಚದೊಂದಿಗೆ ಖೇಲೋ ಇಂಡಿಯಾ ಕ್ರೀಡಾ ಸರಕುಗಳ ಉತ್ಪಾದನಾ ಯೋಜನೆಯನ್ನು ರಸಪ್ರಶ್ನೆಯು ಬಿಂಬಿಸುತ್ತದೆ. ಇದರ ಎರಡು ಘಟಕಗಳು - ಪ್ರೋತ್ಸಾಹಕಗಳು ಮತ್ತು ಮಧ್ಯಸ್ಥಿಕೆಗಳು - ಹೂಡಿಕೆ ಬೆಂಬಲ, ಉತ್ಪಾದನಾ ವಲಯಗಳು, ಅಸ್ತಿತ್ವದಲ್ಲಿರುವ ಕ್ಲಸ್ಟರ್‌ಗಳು, ಉತ್ಪಾದನಾ ಪ್ರೋತ್ಸಾಹಕಗಳು, ಪ್ರಮಾಣೀಕರಣ ಮತ್ತು ಪರೀಕ್ಷೆ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಸ್ಟಾರ್ಟ್‌- ಅಪ್‌ಗಳು ಮತ್ತು ಬ್ರ್ಯಾಂಡಿಂಗ್‌ ಮತ್ತು ಜನ ಸಂಪರ್ಕ ಕಾರ್ಯಕ್ರಮಗಳನ್ನು ಒಳಗೊಂಡಿವೆ. ಈ ಕ್ರಮಗಳು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು, ಉದ್ಯೋಗವನ್ನು ಸೃಷ್ಟಿಸಲು, ರಫ್ತುಗಳನ್ನು ಹೆಚ್ಚಿಸಲು ಮತ್ತು ಭಾರತೀಯ ಕ್ರೀಡಾ ಸರಕುಗಳ ತಯಾರಕರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಪ್ರಯತ್ನಿಸುತ್ತವೆ.

ಜಪಾನ್‌ ನ ಐಚಿ-ನಗೋಯಾದಲ್ಲಿನಡೆದ 20ನೇ ಏಷ್ಯನ್‌ ಗೇಮ್ಸ್‌ 2026 ಮತ್ತು 5ನೇ ಏಷ್ಯನ್‌ ಪ್ಯಾರಾ  ಗೇಮ್ಸ್‌ 2026 ರಲ್ಲಿಭಾರತದ ಭಾಗವಹಿಸುವಿಕೆಯನ್ನು ರಸಪ್ರಶ್ನೆಯು ಒಳಗೊಂಡಿದೆ. 65 ಖೇಲೋ ಇಂಡಿಯಾ ಕ್ರೀಡಾಪಟುಗಳು, 203 ಟಾಫ್ಸ್‌ ಬೆಂಬಲಿತ ಕ್ರೀಡಾಪಟುಗಳು ಮತ್ತು 310 ಮೊದಲ ಬಾರಿಗೆ ಪಾಲ್ಗೊಂಡ ಕ್ರೀಡಾಪಟುಗಳು ಸೇರಿದಂತೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು 36 ವಿಭಾಗಗಳು ಮತ್ತು 255 ಸ್ಪರ್ಧೆಗಳಲ್ಲಿ501 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ. ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ, 33 ಖೇಲೋ ಇಂಡಿಯಾ ಕ್ರೀಡಾಪಟುಗಳು, 47 ಟಾಫ್ಸ್‌ ಕ್ರೀಡಾಪಟುಗಳು, ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳ ಆರು ಕ್ರೀಡಾಪಟುಗಳು ಮತ್ತು 61 ಮೊದಲ ಬಾರಿಗೆ ಪಾಲ್ಗೊಂಡ ಕ್ರೀಡಾಪಟುಗಳು ಸೇರಿದಂತೆ 11 ವಿಭಾಗಗಳು ಮತ್ತು 177 ಸ್ಪರ್ಧೆಗಳಲ್ಲಿ168 ಕ್ರೀಡಾಪಟುಗಳೊಂದಿಗೆ ಭಾರತ ಭಾಗವಹಿಸಿತು. ಈ ತಂಡಗಳು ಏಷ್ಯನ್‌ ಗೇಮ್ಸ್‌ನಲ್ಲಿ31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸಿದ್ದವು ಮತ್ತು ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ25 ಕ್ರೀಡಾಪಟುಗಳನ್ನು ಪ್ರತಿನಿಧಿಸಿದ್ದವು.

ಈ ವಿಷಯಗಳ ಮೂಲಕ, ರಸಪ್ರಶ್ನೆಯು ದೃಢವಾದ ದೇಶೀಯ ಕ್ರೀಡಾ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತದ ಹೆಚ್ಚುತ್ತಿರುವ ಉಪಸ್ಥಿತಿಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತದೆ. ತಳಮಟ್ಟದ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ, ಕ್ರೀಡಾ ಪ್ರತಿಭೆಗಳನ್ನು ಗುರುತಿಸುವಲ್ಲಿಮತ್ತು ಪೋಷಿಸುವುದು, ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವಲ್ಲಿಮತ್ತು ಕ್ರೀಡಾಪಟುಗಳು ಕ್ರೀಡಾ ಉತ್ಕೃಷ್ಟತೆಯತ್ತ ಸಾಗಲು ಮಾರ್ಗಗಳನ್ನು ಸೃಷ್ಟಿಸುವಲ್ಲಿಖೇಲೋ ಇಂಡಿಯಾದ ಪಾತ್ರವನ್ನು ಇದು ಬಿಂಬಿಸುತ್ತದೆ.

ಯಾವುದೇ ನಿರ್ದಿಷ್ಟ ಲಿಂಗ, ಶೈಕ್ಷಣಿಕ ಅರ್ಹತೆ ಅಥವಾ ರಾಜ್ಯ ಆಧಾರಿತ ಅರ್ಹತಾ ನಿರ್ಬಂಧಗಳಿಲ್ಲದೆ ವಯಸ್ಸನ್ನು ಲೆಕ್ಕಿಸದೆ ಎಲ್ಲಾಭಾರತೀಯ ನಾಗರಿಕರಿಗೆ ರಸಪ್ರಶ್ನೆ ಮುಕ್ತವಾಗಿದೆ. ಭಾಗವಹಿಸುವವರು 20 ಪ್ರಶ್ನೆಗಳಿಗೆ ಉತ್ತರಿಸಲು 15 ನಿಮಿಷಗಳ ಕಾಲಾವಕಾಶವನ್ನು ಹೊಂದಿರುತ್ತಾರೆ. ರಸಪ್ರಶ್ನೆಯನ್ನು ಪ್ರಯತ್ನಿಸುವ ಮೊದಲು ಮೈ ಭಾರತ್‌ ಪೋರ್ಟಲ್‌ನಲ್ಲಿ ಲಭ್ಯವಿರುವ ಉಲ್ಲೇಖ ಸಾಮಗ್ರಿಗಳನ್ನು ಪರಿಶೀಲಿಸಲು ಅವರನ್ನು ಪ್ರೋತ್ಸಾಹಿಸಲಾಗುತ್ತದೆ.

ರಸಪ್ರಶ್ನೆ ಫಲಿತಾಂಶಗಳ ಆಧಾರದ ಮೇಲೆ ಅಗ್ರ 100 ಸ್ಪರ್ಧಿಗಳು ಫಿಟ್‌ ಭಾರತ ಸರಕುಗಳನ್ನು ಪಡೆಯುತ್ತಾರೆ. ಟೈ ಆದ ಸಂದರ್ಭದಲ್ಲಿ, ಕಂಪ್ಯೂಟರ್‌ ಆಧಾರಿತ ಲಾಟರಿ ವ್ಯವಸ್ಥೆಯನ್ನು ಬಳಸಲಾಗುತ್ತದೆ. ರಸಪ್ರಶ್ನೆಯನ್ನು ಪೂರ್ಣಗೊಳಿಸಿದ ನಂತರ ಸ್ಪರ್ಧಿಗಳು ಸರಿಯಾದ ಉತ್ತರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಈ ರಸಪ್ರಶ್ನೆ ಮೈ ಭಾರತ್‌ ಪೋರ್ಟಲ್‌ನಲ್ಲಿ ಲಭ್ಯವಿದೆ: https://mybharat.gov.in/quizzes/yuva/detail/F4bPGADIB1E_OFqlCIFJWA/

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತದ ನಾಗರಿಕರು, ವಿದ್ಯಾರ್ಥಿಗಳು, ಯುವಕರು ಮತ್ತು ಕ್ರೀಡಾ ಉತ್ಸಾಹಿಗಳನ್ನು ರಸಪ್ರಶ್ನೆಯಲ್ಲಿ ಭಾಗವಹಿಸಲು ಮತ್ತು ಕ್ರೀಡಾ ಉತ್ಪಾದನೆಯನ್ನು ಬಲಪಡಿಸಲು, ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಮತ್ತು ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸಲು ಭಾರತದ ಉಪಕ್ರಮಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಆಳಗೊಳಿಸಲು ಆಹ್ವಾನಿಸುತ್ತದೆ.

ರಸಪ್ರಶ್ನೆ ವಿವರಗಳು

  • ರಸಪ್ರಶ್ನೆ ಶೀರ್ಷಿಕೆ: ಖೇಲೋ ಭಾರತ್‌: ಉತ್ಪಾದನೆಯಿಂದ ಪೋಡಿಯಂ ಫಿನಿಶ್‌ ರಸಪ್ರಶ್ನೆಯವರೆಗೆ
  • ರಸಪ್ರಶ್ನೆ ಅವಧಿ:  2026ರ ನವೆಂಬರ್‌ 4ರಿಂದ ನವೆಂಬರ್‌ 20ರವರೆಗೆ
  • ಅವಧಿ: 15 ನಿಮಿಷಗಳು
  • ಪ್ರಶ್ನೆಗಳ ಸಂಖ್ಯೆ: 20
  • ಅರ್ಹತೆ: ವಯಸ್ಸನ್ನು ಲೆಕ್ಕಿಸದೆ ಎಲ್ಲಭಾರತೀಯ ನಾಗರಿಕರು ಅರ್ಹ
  • ಬಹುಮಾನಗಳು: ಅಗ್ರ 100 ಸ್ಪರ್ಧಿಗಳಿಗೆ ಫಿಟ್‌ ಇಂಡಿಯಾ ಮರ್ಚಂಡೈಸ್‌ ಬಹುಮಾನ

 

*****


(ಪ್ರಕಟಣೆ ಐ.ಡಿ.: 2332684) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Telugu , Malayalam