ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸರದಾರ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ 'ರಾಷ್ಟ್ರೀಯ ಏಕತಾ ದಿವಸ'ದಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೊಸದಿಲ್ಲಿಯಲ್ಲಿ 'ರನ್ ಫಾರ್ ಯೂನಿಟಿ'ಗೆ (ಏಕತೆಗಾಗಿ ಓಟ) ಚಾಲನೆ ನೀಡಿದರು


ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದಾಗಿನಿಂದ, ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿವಸ'ವನ್ನಾಗಿ ಆಚರಿಸುತ್ತಾ ಬಂದಿದ್ದೇವೆ

ಸರ್ದಾರ್ ಸಾಹೇಬರು ಭಾರತದ ಇತಿಹಾಸವನ್ನು ಬದಲಾಯಿಸಿದ್ದಲ್ಲದೆ, ಅದರ ಭೌಗೋಳಿಕ ಸ್ವರೂಪವನ್ನೂ ಮರುರೂಪಿಸಿದರು; ಅನೇಕ ಸಂಸ್ಥಾನಗಳನ್ನು ಒಗ್ಗೂಡಿಸುವ ಕಠಿಣ ಕಾರ್ಯವನ್ನು ಕೈಗೊಳ್ಳುವ ಮೂಲಕ, ಇಂದು ನಾವು ಕಾಣುತ್ತಿರುವ ಏಕೀಕೃತ ಭಾರತದ ನಕ್ಷೆಯನ್ನು ಸರ್ದಾರ್ ಪಟೇಲ್ ಅವರು ರೂಪಿಸಿದರು

ಸರ್ದಾರ್ ಸಾಹೇಬ್ ಅವರು ಭಾರತದ ಭೌಗೋಳಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಏಕೀಕರಣಕ್ಕಾಗಿ ಯಶಸ್ವಿ ಪ್ರಯತ್ನಗಳನ್ನು ನಡೆಸಿದ್ದಲ್ಲದೆ, ಇಡೀ ರಾಷ್ಟ್ರವನ್ನು ಒಗ್ಗೂಡಿಸಿ ಒಂದೇ ಸೂತ್ರದಲ್ಲಿ ಪೋಣಿಸಿದರು

ಕೇವಲ 1,218 ದಿನಗಳಲ್ಲಿ, ಸರ್ದಾರ್ ಸಾಹೇಬ್ ಅವರು ಅವಿಭಜಿತ ಭಾರತವನ್ನು ರೂಪಿಸಿದರು; ಅನೇಕ ನಾಯಕರು ತಮ್ಮ ಇಡೀ ಜೀವಮಾನದಲ್ಲಿ ಸಾಧಿಸಲಾಗದಿದ್ದನ್ನು ಅವರು ಸಾಧಿಸಿ ತೋರಿಸಿದರು

ಈ ವರ್ಷ, ಮಾರ್ಚ್ 31 ರಂದು, ದೇಶವು ನಕ್ಸಲಿಸಂನಿಂದ ಮುಕ್ತವಾಯಿತು ಮತ್ತು ಮಾದಕವಸ್ತು ಮುಕ್ತ ರಾಷ್ಟ್ರವಾಗುವತ್ತ ಹೆಜ್ಜೆ ಹಾಕಿತು

2029 ರ ಡಿಸೆಂಬರ್ 31 ರೊಳಗೆ ದೇಶವನ್ನು ಸಂಪೂರ್ಣವಾಗಿ ಮಾದಕವಸ್ತು ಮುಕ್ತವನ್ನಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ; 'ವಿಕಸಿತ ಭಾರತ'ದ (ಅಭಿವೃದ್ಧಿ ಹೊಂದಿದ ಭಾರತದ) ಮೊದಲ ಹಂತವೇ 'ಮಾದಕವಸ್ತು ಮುಕ್ತ ಭಾರತ'ವಾಗಿದೆ

ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸುವುದು ದೇಶದ ಯುವಜನರಿಗೆ ಮತ್ತು ಅವರ ಭವಿಷ್ಯಕ್ಕೆ ಅತ್ಯಂತ ದೊಡ್ಡ ಸಾಧನೆಯಾಗಲಿದೆ

ದೇಶದ ಭಾಷಾ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈವಿಧ್ಯತೆಯೇ ನಮ್ಮ ಅತಿ ದೊಡ್ಡ ಶಕ್ತಿಯಾಗಿದೆ

ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಮೂಲಕ ನಾವು ನಾಗರಿಕ ಹಾಗೂ ರಾಷ್ಟ್ರೀಯ ನವೋದಯವನ್ನು ಕಂಡೆವು; ಈ ದೇವಾಲಯವನ್ನು ಪುನರ್ನಿರ್ಮಿಸುವ ಕಲ್ಪನೆಯನ್ನು ಸ್ವತಃ ಸರ್ದಾರ್ ಸಾಹೇಬರೇ ಹೊಂದಿದ್ದರು

ಸರ್ದಾರ್ ಸಾಹೇಬರು ಮಾಡಿದ ಕೆಲಸಗಳಿಗೆ ಸಲ್ಲಬೇಕಾದ ಗೌರವವನ್ನು ನೀಡದೆ, ಅವರನ್ನು ಕಡೆಗಣಿಸಲು ಮತ್ತು ಜನಮಾನಸದಿಂದ ಮರೆಮಾಡಲು ವಿರೋಧ ಪಕ್ಷಗಳು ಹಲವು ವರ್ಷಗಳ ಕಾಲ ಪ್ರಯತ್ನಿಸಿದವು; ಆದರೆ ಸೂರ್ಯನ ಬೆಳಕನ್ನು ಯಾರಿಂದಲೂ ಮರೆಮಾಡಲು ಸಾಧ್ಯವಿಲ್ಲ

ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಮೋದಿಜೀ ಅವರು ಕಲ್ಪನೆ ಮಾಡಿ, ಅಡಿಪಾಯ ಹಾಕಿದ ‘ಏಕತೆಯ ಪ್ರತಿಮೆ’ಯು, ಸರ್ದಾರ್ ಸಾಹೇಬರ ಗಗನಚುಂಬಿ ವ್ಯಕ್ತಿತ್ವವನ್ನು ಇಡೀ ದೇಶದ ಮುಂದೆ ಅನಾವರಣಗೊಳಿಸಿದೆ

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ‘ರಾಷ್ಟ್ರೀಯ ಏಕತಾ ದಿವಸ’ದ ಸಂದರ್ಭದಲ್ಲಿ ದೇಶವಾಸಿಗಳಿಗೆ ಏಕತೆಯ ಪ್ರತಿಜ್ಞೆಯನ್ನು ಬೋಧಿಸಿದರು

ಇಂದು, ಪ್ರಧಾನಮಂತ್ರಿ ಮೋದಿ ಅವರು ಇದೇ ಸ್ಥಳದಿಂದ ದೇಶಾದ್ಯಂತದ ಪೊಲೀಸ್ ಪಡೆಗಳ ಪರೇಡ್‌ನ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ ಮತ್ತು ಸಂದೇಶ ನೀಡಲಿದ್ದಾರೆ

ಪ್ರಕಟಣಾ ದಿನಾಂಕ: 31 OCT 2026 2:09PM by PIB Bengaluru

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ 'ರಾಷ್ಟ್ರೀಯ ಏಕತಾ ದಿವಸ'ದ ಸಂದರ್ಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಹೊಸದಿಲ್ಲಿಯಲ್ಲಿ 'ರನ್ ಫಾರ್ ಯೂನಿಟಿ'ಗೆ (ಏಕತೆಗಾಗಿ ಓಟ) ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವರು ದೇಶದ ನಾಗರಿಕರಿಗೆ 'ಏಕತಾ ಪ್ರತಿಜ್ಞೆ'ಯನ್ನು ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ತರನ್‌ಜಿತ್ ಸಿಂಗ್ ಸಂಧು, ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ, ದಿಲ್ಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಹಾಗೂ ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RED1.jpeg

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾದಾಗಿನಿಂದಲೂ ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿವಸ್' ಆಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು. ಇಂದು ಸರ್ದಾರ್ ಸಾಹಬ್ ಅವರ 151 ನೇ ಜನ್ಮ ದಿನವಾಗಿದೆ. ಅವರು ಭಾರತದ ಇತಿಹಾಸವನ್ನು ಪರಿವರ್ತಿಸಿದ್ದಲ್ಲದೆ ಅದರ ಭೌಗೋಳಿಕತೆಯನ್ನು ರೂಪಿಸಿದ ಮಹಾನ್ ವ್ಯಕ್ತಿತ್ವ. ಹಲವಾರು ರಾಜಪ್ರಭುತ್ವದ ರಾಜ್ಯಗಳು ಮತ್ತು ರಾಜಮನೆತನಗಳನ್ನು ಒಂದುಗೂಡಿಸುವ ಪ್ರಯಾಸಕರ ಕಾರ್ಯವನ್ನು ಕೈಗೊಳ್ಳುವ ಮೂಲಕ, ಸರ್ದಾರ್ ಸಾಹಬ್ ಅವರು ಇಂದು ನಾವು ನೋಡುತ್ತಿರುವ ಏಕೀಕೃತ ಭಾರತದ ನಕ್ಷೆಯನ್ನು ರಚಿಸಿದರು. ಸರ್ದಾರ್ ಸಾಹಬ್ ಅವರು ಭಾರತದ ಭೌಗೋಳಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಏಕೀಕರಣಕ್ಕಾಗಿ ಯಶಸ್ವಿ ಪ್ರಯತ್ನಗಳನ್ನು ಮಾಡಿದ್ದಲ್ಲದೆ, ರಾಷ್ಟ್ರವನ್ನು ಒಗ್ಗೂಡಿಸಿದರು, ಅದನ್ನು ಏಕ, ಒಗ್ಗಟ್ಟಿನ ಘಟಕವಾಗಿ ಜೋಡಿಸಿದರು ಎಂದು ಅವರು ಹೇಳಿದರು.

RED2.jpeg

ದೇಶವು ಸ್ವಾತಂತ್ರ್ಯ ಪಡೆದಾಗ, ಭಾರತವು ವಿಘಟನೆಯಾಗುತ್ತದೆ ಎಂದು ಜಗತ್ತು ಭವಿಷ್ಯ ನುಡಿದಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಾತಂತ್ರ್ಯದ ನಂತರದ ಕೇವಲ 1,218 ದಿನಗಳಲ್ಲಿ, ಸರ್ದಾರ್ ಪಟೇಲ್ ಅವರು ಅಖಂಡ ಭಾರತವನ್ನು ನಿರ್ಮಿಸುವ ಮೂಲಕ ಅನೇಕರು ಅಸಾಧ್ಯವೆಂದು ಭಾವಿಸಿದ್ದನ್ನು ಸಾಧಿಸಿದರು. ಇಂದು, ಸರ್ದಾರ್ ಪಟೇಲ್ ಅವರ ಕಲ್ಪನೆಯ ಭಾರತವು ವಿಶ್ವದ ಮುಂದೆ ಹೆಮ್ಮೆಯಿಂದ ನಿಂತಿದೆ ಎಂದರು.

ಈ ವರ್ಷದ ಮಾರ್ಚ್ 31 ರಂದು ದೇಶವು ನಕ್ಸಲ್ ವಾದವನ್ನು ತೊಡೆದುಹಾಕಿತು ಮತ್ತು ಈಗ ಮಾದಕ ದ್ರವ್ಯ ಮುಕ್ತ ರಾಷ್ಟ್ರವಾಗುವ ಹಾದಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮಾದಕ ವಸ್ತು ಮುಕ್ತ ಭಾರತದ ರಚನೆಯು ಪ್ರಧಾನಮಂತ್ರಿ ಮೋದಿಯವರ 'ವಿಕಸಿತ ಭಾರತ'ದ ದೃಷ್ಟಿಕೋನದ ಅಡಿಪಾಯದ ಹೆಜ್ಜೆಯಾಗಿದೆ ಎಂದು ಅವರು ಒತ್ತಿ ಹೇಳಿದರು. 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರವನ್ನು ಶಾಶ್ವತವಾಗಿ ಭಾರತದೊಂದಿಗೆ ವಿಲೀನಗೊಳಿಸಿದಂತಹ ಮಹತ್ವದ ಮೈಲಿಗಲ್ಲುಗಳನ್ನು ಪ್ರಧಾನಮಂತ್ರಿ ಮೋದಿಯವರ ಅಧಿಕಾರಾವಧಿಯಲ್ಲಿ ಸಾಧಿಸಲಾಗಿದೆ ಎಂದು ಅವರು ಹೇಳಿದರು. ನಕ್ಸಲಿಸಂನ ನಿರ್ಮೂಲನೆ; ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯ ಅನುಷ್ಠಾನ ಅದರ ಜೊತೆಗೆ ಮಾದಕ ವಸ್ತು ಮುಕ್ತ ಭಾರತದ ಸಾಕ್ಷಾತ್ಕಾರವು ಎಲ್ಲಕ್ಕಿಂತ ಮಹತ್ವದ ಸಾಧನೆಯಾಗಿದೆ - ಇದು ರಾಷ್ಟ್ರದ ಯುವಜನರು ಮತ್ತು ಭಾರತದ  ಭವಿಷ್ಯಕ್ಕೆ ಬಹಳ ದೊಡ್ಡ  ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಶಾ ಹೇಳಿದರು

RED3.jpeg

ನಮ್ಮ ದೇಶದ ಭಾಷಾ, ಸಾಂಸ್ಕೃತಿಕ ಮತ್ತು ಪಾರಂಪರಿಕ  ವೈವಿಧ್ಯತೆಯು ನಮ್ಮ ದೌರ್ಬಲ್ಯವಲ್ಲ, ಬದಲು ಶಕ್ತಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದು ಸರ್ದಾರ್ ಪಟೇಲ್ ಅವರ ಸಂದೇಶ ಮತ್ತು ನಾವು ಅನುಸರಿಸಬೇಕಾದ ಮಾರ್ಗವೂ ಇದಾಗಿದೆ ಎಂದು ಅವರು ಹೇಳಿದರು. ನಮ್ಮ ಭಾಷಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯು ನಮ್ಮ ಶಕ್ತಿಯಾಗಿದೆ. ಸಂವಾದ, ನಂಬಿಕೆ ಮತ್ತು ಅಂತರ್ಗತ/ಒಳಗೊಳ್ಳುವ  ಮನಸ್ಥಿತಿಯ ಮೂಲಕ, ನಾವು ಕಳೆದ 80 ವರ್ಷಗಳಲ್ಲಿ ಹಂಚಿಕೆಯ ರಾಷ್ಟ್ರೀಯ ಗುರುತನ್ನು ನಿರ್ಮಿಸಿದ್ದೇವೆ. ನಮ್ಮ ಭಾಷೆಗಳು, ಉಡುಗೆ-ತೊಡುಗೆ, ಸಾಂಸ್ಕೃತಿಕ ನಂಬಿಕೆಗಳು ಮತ್ತು ಧರ್ಮಗಳು ಭಿನ್ನವಾಗಿದ್ದರೂ, ನಮ್ಮ ರಾಷ್ಟ್ರವು ಸದಾ ಒಗ್ಗಟ್ಟಿನಿಂದ ಉಳಿದಿದೆ ಎಂದರು.

ಸೋಮನಾಥ ದೇವಾಲಯದ ಪುನರ್ನಿರ್ಮಾಣವು ನಾಗರಿಕತೆ ಮತ್ತು ರಾಷ್ಟ್ರೀಯ ಪುನರುತ್ಥಾನದ ಅನುಭವವಾಗಿ ಕಾರ್ಯನಿರ್ವಹಿಸಿತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸೋಮನಾಥ ದೇವಾಲಯದ ನಿರ್ಮಾಣದ ಕಲ್ಪನೆಯನ್ನು ಕಂಡವರು ಸರ್ದಾರ್ ಪಟೇಲ್. ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ್' ಉಪಕ್ರಮಗಳು ವಿಶ್ವದ ಆರ್ಥಿಕತೆಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ನಮಗೆ ಮಾರ್ಗದರ್ಶನ ನೀಡುತ್ತಿವೆ ಎಂದವರು ನುಡಿದರು.

RED4.jpeg

ಸರ್ದಾರ್ ಸಾಹೇಬರು ನೀಡಿದ ಕೊಡುಗೆಗಳಿಗೆ ಹಲವು ವರ್ಷಗಳ ಕಾಲ ಅರ್ಹವಾದ ಮನ್ನಣೆ ಸಿಗಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರತಿಪಕ್ಷಗಳು ನಿರಂತರವಾಗಿ ಸರ್ದಾರ್ ಸಾಹೇಬ್ ಅವರ ಸ್ಮರಣೆಯನ್ನು ಅಳಿಸಲು ಪ್ರಯತ್ನಿಸಿದವು, ಆದರೆ ಸೂರ್ಯನ ಬೆಳಕನ್ನು ಮರೆಮಾಚಲು ಸಾಧ್ಯವಾಗದು, ಹಾಗೆಯೇ ಅವರ ಪರಂಪರೆಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರು 'ಏಕತಾ ಪ್ರತಿಮೆ' - ಅತ್ಯುನ್ನತ ಸ್ಮಾರಕವನ್ನು ರೂಪಿಸಿದರು - ಆ ಮೂಲಕ ಸರ್ದಾರ್ ಸಾಹಬ್ ಅವರ ಮಹಾನ್ ವ್ಯಕ್ತಿತ್ವದ ವರ್ಚಸ್ಸನ್ನು ಇಡೀ ರಾಷ್ಟ್ರಕ್ಕೆ ಪ್ರಸ್ತುತಪಡಿಸಿದರು ಎಂದೂ ಅವರು ಹೇಳಿದರು. ಇಂದು, ಅದೇ ಸ್ಥಳದಿಂದಲೇ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರುವ ದೇಶಾದ್ಯಂತದ ಪೊಲೀಸ್ ಪಡೆಗಳ ಮೆರವಣಿಗೆಯಲ್ಲಿ ಗೌರವ ವಂದನೆ ಸ್ವೀಕರಿಸಲಿದ್ದಾರೆ ಎಂದು ಶ್ರೀ ಶಾ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2330924) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Tamil , Malayalam