ಶಿಕ್ಷಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ (ಎನ್.ಐ.ಇ.ಪಿ.ಎ.) ಹೊಸ ಶೈಕ್ಷಣಿಕ ಕಟ್ಟಡವನ್ನು ಕೇಂದ್ರ ಶಿಕ್ಷಣ ಸಚಿವರು ಉದ್ಘಾಟಿಸಿದರು


ಶೈಕ್ಷಣಿಕ ಯೋಜನೆ, ಸಂಶೋಧನೆ ಮತ್ತು ಎನ್.ಇ.ಪಿ. 2020 ಅನುಷ್ಠಾನವನ್ನು ಮುಂದುವರಿಸುವಲ್ಲಿ ಎನ್.ಐ.ಇ.ಪಿ.ಎ. ಪಾತ್ರವನ್ನು ಉಲ್ಲೇಖಿಸಿದ ಶ್ರೀ ಪ್ರಲ್ಹಾದ್ ಜೋಶಿ

ಪ್ರಕಟಣಾ ದಿನಾಂಕ: 29 OCT 2026 6:49PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ (ಎನ್.ಐ.ಇ.ಪಿ.ಎ.) ಹೊಸ ಶೈಕ್ಷಣಿಕ ಕಟ್ಟಡ ಮತ್ತು ಮುಖ್ಯ ಪ್ರವೇಶ ದ್ವಾರವನ್ನು ಉದ್ಘಾಟಿಸಿದರು. ಹೊಸ ಕಟ್ಟಡವು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಗೆ (ಎನ್.ಐ.ಇ.ಪಿ.ಎ.) ತನ್ನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ಅದರ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.

 "ಸಂಸ್ಕೃತದ 'ಶರೀರಾಮದ್ಯಂ ಖಲು ಧರ್ಮ ಸಾಧನಂ' ಎಂಬ ಮಾತಿನಂತೆ - ಒಬ್ಬರ ಕರ್ತವ್ಯಗಳನ್ನು ನಿರ್ವಹಿಸಲು ಆರೋಗ್ಯಕರ ದೇಹವು ಅತ್ಯಗತ್ಯ. ಅದೇ ರೀತಿ, ಪ್ರಮುಖ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಲವಾದ ಮೂಲಸೌಕರ್ಯ ಅತ್ಯಗತ್ಯ. ಇಂದು ಸಮರ್ಪಿಸಲಾದ ಹೊಸ ಕಟ್ಟಡವು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಗೆ (ಎನ್.ಐ.ಇ.ಪಿ.ಎ.) ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಈ ರೀತಿಯ ಪ್ರಯತ್ನಗಳನ್ನು ವೇಗಗೊಳಿಸುವ ಅಗತ್ಯ ಹೆಚ್ಚುತ್ತಿದೆ" ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020ರ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವಲ್ಲಿ, ಅನುಷ್ಠಾನದ ಸವಾಲುಗಳನ್ನು ಗುರುತಿಸುವಲ್ಲಿ ಮತ್ತು ಅವುಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಲ್ಲಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ (ಎನ್.ಐ.ಇ.ಪಿ.ಎ.)ಯ ಪಾತ್ರವನ್ನು ಶ್ರೀ ಜೋಶಿ ಉಲ್ಲೇಖಿಸಿದರು. ಎನ್.ಇ.ಪಿ. 2020 ರ ಅಡಿಯಲ್ಲಿ ಕಲ್ಪಿಸಲಾಗಿರುವಂತೆ ಮೌಖಿಕ ಕಲಿಕೆಯಿಂದ ಪರಿಕಲ್ಪನಾ ತಿಳುವಳಿಕೆಗೆ ಪರಿವರ್ತನೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಉನ್ನತ ಶಿಕ್ಷಣಕ್ಕಾಗಿ ₹60,000 ಕೋಟಿ ಲಘು ಸಾಲಗಳನ್ನು ಸುಗಮಗೊಳಿಸಿದ "ಪಿಎಂ ವಿದ್ಯಾಲಕ್ಷ್ಮಿ ಯೋಜನೆ" ಮತ್ತು "ಸ್ವಯಂ" ಮತ್ತು "ದೀಕ್ಷಾ" ನಂತಹ ಡಿಜಿಟಲ್ ಕಲಿಕಾ ವೇದಿಕೆಗಳಂತಹ ಉಪಕ್ರಮಗಳನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. "ಸ್ವಯ" ದೇಶಾದ್ಯಂತ ಕಲಿಯುವವರಿಗೆ ಗುಣಮಟ್ಟದ ಡಿಜಿಟಲ್ ಕಲಿಕೆ ಮತ್ತು ಶೈಕ್ಷಣಿಕ ಸಂಪನ್ಮೂಲಗಳ ಪ್ರವೇಶವನ್ನು ವಿಸ್ತರಿಸಿದೆ.  ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸಲು ಯುವಜನರನ್ನು ಗುಣಮಟ್ಟದ ಶಿಕ್ಷಣ ಮತ್ತು ಸಂಬಂಧಿತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮಹತ್ವವನ್ನು ಅವರು ಪುನರುಚ್ಚರಿಸಿದರು, ಇದರಿಂದಾಗಿ ಭಾರತವು ವಿಶ್ವದ ಕಲ್ಯಾಣಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಎಂದು ಸಚಿವರು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ದೀಪ್ತಿ ಗೌರ್ ಮುಖರ್ಜಿ; ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ (ಎನ್.ಐ.ಇ.ಪಿ.ಎ.) ಕುಲಪತಿ ಪ್ರೊ. ರಾಮ ಶಂಕರ್ ದುಬೆ; ಮತ್ತು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ (ಎನ್.ಐ.ಇ.ಪಿ.ಎ.) ಉಪ ಕುಲಪತಿ ಪ್ರೊ. ಶಶಿಕಲಾ ವಂಜಾರಿ ಅವರು ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2330336) ವಿಸಿಟರ್ ಕೌಂಟರ್ : 33
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Tamil