ಸಂಪುಟ
azadi ka amrit mahotsav

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಹೆಚ್ಚಳ ಮತ್ತು ಬಿಡುಗಡೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ

ಪ್ರಕಟಣಾ ದಿನಾಂಕ: 28 OCT 2026 3:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರದ (ಡಿಆರ್) ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. 2026ರ ಜು.1 ರಿಂದ ಜಾರಿಗೆ ಬರುವಂತೆ, ಮೂಲ ವೇತನ/ಪಿಂಚಣಿಯ ಮೇಲೆ ಪ್ರಸ್ತುತ ಇರುವ ಶೇ.60 ದರಕ್ಕೆ ಹೆಚ್ಚುವರಿಯಾಗಿ ಶೇ.3 ರಷ್ಟು ಹೆಚ್ಚಳ  ಮಾಡಲಾಗಿದೆ.

ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಈ ಎರಡರ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕ ಒಟ್ಟು 10,016.10 ಕೋಟಿ ರೂ.ಗಳಷ್ಟು ಹೊರೆ ಬೀಳಲಿದೆ. ಆದರೆ ಈ ಹೆಚ್ಚಳದ ನಿರ್ಧಾರದಿಂದ ಸುಮಾರು 48.54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.71 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಒಪ್ಪಿಕೊಂಡಿರುವ ಸೂತ್ರಕ್ಕೆ ಅನುಗುಣವಾಗಿ ಈ ಹೆಚ್ಚಳ ಮಾಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2329516) ವಿಸಿಟರ್ ಕೌಂಟರ್ : 107