ಪ್ರಕಟಣಾ ದಿನಾಂಕ:
23 OCT 2026 6:58PM by PIB Bengaluru
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಮಹಿಳಾ ರಿಕರ್ವ್ ಡಬಲ್ಸ್ ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದ ಭಾವನಾ ಚೌಧರಿ ಮತ್ತು ಪೂಜಾ ಜತ್ಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದ್ದಾರೆ.
ಅವರುಗಳ ಸಾಧನೆಯು ಅನೇಕ ಮಹತ್ವಾಕಾಂಕ್ಷಿ ಬಿಲ್ಲುಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
"ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾವನಾ ಚೌಧರಿ ಮತ್ತು ಪೂಜಾ ಜತ್ಯಾನ್ ಅವರಿಗೆ ಐತಿಹಾಸಿಕ ಬೆಳ್ಳಿ!
ಕ್ರೀಡಾಕೂಟದಲ್ಲಿ ಮಹಿಳಾ ರಿಕರ್ವ್ ಡಬಲ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಜೋಡಿಗೆ ಅಭಿನಂದನೆಗಳು. ಅವರುಗಳ ಸಾಧನೆಯು ಅನೇಕ ಮಹತ್ವಾಕಾಂಕ್ಷಿ ಬಿಲ್ಲುಗಾರರಿಗೆ ಸ್ಫೂರ್ತಿ ನೀಡುತ್ತದೆ: ಪ್ರಧಾನಮಂತ್ರಿ @narendramodi"
*****