ಪ್ರಕಟಣಾ ದಿನಾಂಕ:
22 OCT 2026 6:35PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 10 ಸ್ಪರ್ಧೆಯಲ್ಲಿ ಅತ್ಯುತ್ತಮ ಸಮಯ ಪಾಲನೆಯೊಂದಿಗೆ ರಜತ ಪದಕ ಜಯಿಸಿರುವ ಕಪಿಲ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಕಪಿಲ್ ಅವರ ಸಹಿಷ್ಣುತೆ, ಸಮರ್ಪಣಾ ಭಾವ ಮತ್ತು ಬದ್ಧತೆಗಳು ಅವರಿಗೆ ಅರ್ಹ ಗೆಲುವು ತಂದುಕೊಟ್ಟಿವೆ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಹಾಗೂ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 10 ಸ್ಪರ್ಧೆಯಲ್ಲಿ ಕಪಿಲ್ ಕುಮಾರ್ ಅವರು ಅತ್ಯುತ್ತಮ ಸಮಯ ಪಾಲನೆಯೊಂದಿಗೆ ರಜತ ಪದಕವನ್ನು ಗೆದ್ದುಕೊಂಡಿದ್ದಾರೆ. ಅವರ ಸಹಿಷ್ಣುತೆ, ಸಮರ್ಪಣಾ ಭಾವ ಮತ್ತು ಬದ್ಧತೆಯು ಅವರಿಗೆ ಈ ಅರ್ಹ ಗೆಲುವಿನ ಸ್ಥಾನ ತಂದುಕೊಟ್ಟಿದೆ. ಈ ಅಮೋಘ ಸಾಧನೆಗಾಗಿ ಕಪಿಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi"
*****