ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ರಜತ ಪದಕ ಜಯಿಸಿರುವ ಮಂಜಿತ್‌ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 21 OCT 2026 6:59PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಜಾವೆಲಿನ್ ಎಸೆತ ಎಫ್ 12/ ಎಫ್ 13 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿರುವ ಮಂಜಿತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಹಿಂದಿನ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಮಂಜಿತ್ ಅವರು, 2026ರ ಕ್ರೀಡಾಕೂಟದಲ್ಲಿ ರಜತ ಪದಕ ಗೆಲ್ಲುವ ಮೂಲಕ ಗಮನಾರ್ಹ ಪ್ರಗತಿ ಸಾಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶ್ರೀ ಮೋದಿ ಅವರು, ಈ ಯಶಸ್ಸು ಅವರ ಕಠಿಣ ಪರಿಶ್ರಮ, ಮಹತ್ವಾಕಾಂಕ್ಷೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರು ಭಾರತಕ್ಕೆ ಹೆಮ್ಮೆ ತರುವ ಸಾಧನೆಗಳನ್ನು ಮುಂದುವರಿಸಲಿ ಎಂದು ಅವರು ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ: 

"ಮನ್‌ ಜೀತ್ ಅವರ ಮುನ್ನಡೆಯ ಪಯಣ ನಿಜಕ್ಕೂ ಗಮನಾರ್ಹ! ಹಿಂದಿನ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಅವರು, ಇದೀಗ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಪುರುಷರ ಜಾವೆಲಿನ್ ಎಸೆತ ಎಫ್ 12/ಎಫ್ 13 ರಲ್ಲಿ ಅಮೋಘ ಸಾಧನೆ ಮಾಡಿದ್ದು, ಅವರಿಗೆ ಅಭಿನಂದನೆಗಳು. ಅವರ ಈ ಯಶಸ್ಸು, ಕಠಿಣ ಪರಿಶ್ರಮ, ಮಹತ್ವಾಕಾಂಕ್ಷೆ ಮತ್ತು ಸಮರ್ಪಣಾ ಭಾವವನ್ನು ತಿಳಿಸಿದೆ. ಭವಿಷ್ಯದಲ್ಲೂ ಅವರು ಭಾರತಕ್ಕೆ ಹೆಮ್ಮೆ ತರುವಂತಾಗಲಿ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2326460) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam