ಪ್ರಕಟಣಾ ದಿನಾಂಕ:
21 OCT 2026 7:06PM by PIB Bengaluru
2026ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ -67 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಕಸ್ತೂರಿ ರಾಜಮಣಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ, "ಈ ಮೂಲಕ ಈ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ." ಎಂದು ಹೇಳಿದ್ದಾರೆ
ಭಾರತೀಯ ಪ್ಯಾರಾ ಪವರ್ ಲಿಫ್ಟಿಂಗ್ ಗೆ ಇದು ಐತಿಹಾಸಿಕ ಮೈಲಿಗಲ್ಲು ಮತ್ತು ಅವರ ಪರಿಶ್ರಮ ಮತ್ತು ಶ್ರೇಷ್ಠತೆಯ ಬದ್ಧತೆಯು ಈ ಸಾಧನೆಯನ್ನು ನಿಜವಾಗಿಯೂ ವಿಶೇಷವಾಗಿಸಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿಯವರು ಅವರು, ಕಸ್ತೂರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶವನ್ನು ಹಂಚಿಕೊಂಡಿದೆ:
"ಭಾರತೀಯ ಪ್ಯಾರಾ ಪವರ್ ಲಿಫ್ಟಿಂಗ್ ಗೆ ಒಂದು ಐತಿಹಾಸಿಕ ಮೈಲಿಗಲ್ಲು!
2026ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ -67 ಕೆಜಿ ವಿಭಾಗದಲ್ಲಿ ಕಸ್ತೂರಿ ರಾಜಮಣಿ ಅವರು ಪ್ರಭಾವಶಾಲಿ ಲಿಫ್ಟ್ ನೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ, ಈ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ! ಅವರ ಪರಿಶ್ರಮ ಮತ್ತು ಶ್ರೇಷ್ಠತೆಯ ಬದ್ಧತೆಯು ಈ ಸಾಧನೆಯನ್ನು ನಿಜವಾಗಿಯೂ ವಿಶೇಷವಾಗಿಸಿದೆ. ಕಸ್ತೂರಿ ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi "
*****