ಪ್ರಕಟಣಾ ದಿನಾಂಕ:
21 OCT 2026 7:13PM by PIB Bengaluru
2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ ಟಿ 35 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರೀತಿ ಪಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಎರಡು ಓಟಗಳು ಮತ್ತು ಎರಡು ಬೆಳ್ಳಿ ಪದಕಗಳೊಂದಿಗೆ ಅವರು ಸ್ಮರಣೀಯ ಅಭಿಯಾನವನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಿದ ಶ್ರೀ ಮೋದಿಯವರು, 100 ಮೀ ಮತ್ತು 200 ಮೀ ಓಟಗಳಲ್ಲಿ ಅವರ ಯಶಸ್ಸು ಅವರ ಅದ್ಭುತ ಪ್ರಗತಿ, ಅಸಾಧಾರಣ ವೇಗ ಮತ್ತು ಅಚಲ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಭಾರತವು ತನ್ನ ಸಾಧನೆಗಳನ್ನು ಸಂತೋಷದಿಂದ ಆಚರಿಸುತ್ತಿರುವಾಗ ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಹೀಗೆ ಹಂಚಿಕೊಂಡಿದೆ:
"ಎರಡು ರೇಸ್ ಗಳು, ಎರಡು ಬೆಳ್ಳಿ ಪದಕಗಳು!
ಮಹಿಳೆಯರ 100 ಮೀಟರ್ ಟಿ35 ಸ್ಪರ್ಧೆಯಲ್ಲಿ ಬೆಳ್ಳಿ ಪದಕದೊಂದಿಗೆ ಪ್ರೀತಿ ಪಾಲ್ ಅವರು ಸ್ಮರಣೀಯ ಏಷ್ಯನ್ ಪ್ಯಾರಾ ಗೇಮ್ಸ್ 2026 ಅಭಿಯಾನವನ್ನು ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಮುಕ್ತಾಯಗೊಳಿಸಿದ್ದಾರೆ. 100 ಮೀ ಮತ್ತು 200 ಮೀ ಎರಡರಲ್ಲೂ ಅವರ ಯಶಸ್ಸು ಅವರ ಅದ್ಭುತ ಪ್ರಗತಿ, ಅಸಾಧಾರಣ ವೇಗ ಮತ್ತು ಅಚಲ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ಪ್ರೀತಿ ಅವರು ತೋರಿಸಿ ಕೊಟ್ಟಿದ್ದಾರೆ. ಭಾರತ ಅವರ ಸಾಧನೆಗಳನ್ನು ಆಚರಿಸುತ್ತದೆ: ಪ್ರಧಾನಮಂತ್ರಿ @narendramodi"
*****