ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಿಮಾಂಶು ನಂದಾಲ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 OCT 2026 9:33PM by PIB Bengaluru

ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಪುರುಷರ 100 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ ಎಸ್‌ಬಿ 11 ಸ್ಪರ್ಧೆಯಲ್ಲಿಉತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದು ಭಾರತದ ಪಟ್ಟಿಗೆ ಮತ್ತೊಂದು ಪದಕ ಸೇರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಹಿಮಾಂಶು ನಂದಲ್‌ ಅವರನ್ನು ಅಭಿನಂದಿಸಿದರು.

ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ಶ್ಲಾಘನೀಯ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಎಕ್ಸ್‌ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

‘‘ಹಿಮಾಂಶು ನಂದಲ್‌ ಭಾರತದ ಪಟ್ಟಿಗೆ ಮತ್ತೊಂದು ಪದಕ ಸೇರಿಸಿದ್ದಾರೆ! ಉತ್ತಮ ಸಮಯದೊಂದಿಗೆ, ಅವರು ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಪುರುಷರ 100 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ ಎಸ್‌ಬಿ 11 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮನೆಗೆ ತಂದಿದ್ದಾರೆ. ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ಶ್ಲಾಘನೀಯ. ಅವರ ಮುಂಬರುವ ಪ್ರಯತ್ನಗಳಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’

 

*****


(ಪ್ರಕಟಣೆ ಐ.ಡಿ.: 2326443) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Malayalam