ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿರುವ ಮೊಹಮ್ಮದ್ ಯಾಸರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
21 OCT 2026 6:46PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ಶಾಟ್ ಪುಟ್ ಎಫ್ 46 ಸ್ಪರ್ಧೆಯಲ್ಲಿ ಈ ಋತುವಿನ ಅತ್ಯುತ್ತಮ ಪ್ರದರ್ಶನದೊಂದಿಗೆ ರಜತ ಪದಕ ಗೆದ್ದಿರುವ ಮೊಹಮ್ಮದ್ ಯಾಸರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಹಿಂದಿನ ಆವೃತ್ತಿಯಿಂದ ಇಲ್ಲಿಯವರೆಗಿನ ಅವರ ಕ್ರೀಡಾ ಪಯಣವು ವರ್ಷಗಳ ಅವಿರತ ಯತ್ನ, ಪರಿಶ್ರಮ ಮತ್ತು ನಿರಂತರ ಸುಧಾರಣೆಯ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಮೊಹಮ್ಮದ್ ಯಾಸರ್ ಅವರ ಈ ಶ್ಲಾಘನೀಯ ಪ್ರದರ್ಶನಕ್ಕೆ ಅಭಿನಂದಿಸಿ, ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮೊಹಮ್ಮದ್ ಯಾಸರ್ ಅವರು ಪುರುಷರ ಶಾಟ್ ಪುಟ್ ಎಫ್ 46 ಸ್ಪರ್ಧೆಯಲ್ಲಿ ಈ ಋತುವಿನ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ರಜತ ಪದಕ ಜಯಿಸಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಹಿಂದಿನ ಆವೃತ್ತಿಯಿಂದ ಇಲ್ಲಿಯವರೆಗಿನ ಅವರ ಪಯಣವು, ವರ್ಷಗಳ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ನಿರಂತರವಾಗಿ ಸುಧಾರಿಸಿಕೊಳ್ಳುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸಿದೆ. ಈ ಪ್ರಶಂಸನೀಯ ಸಾಧನೆಗಾಗಿ ಮೊಹಮ್ಮದ್ ಯಾಸರ್ ಅವರಿಗೆ ಅಭಿನಂದನೆಗಳು ಹಾಗೂ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi"
*****
(ಪ್ರಕಟಣೆ ಐ.ಡಿ.: 2326333)
ವಿಸಿಟರ್ ಕೌಂಟರ್ : 3