ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದಿಲೀಪ್ ಗವಿತ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 OCT 2026 7:30PM by PIB Bengaluru

2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಅದ್ಭುತ ಕ್ರೀಡಾ ಸಮಯದೊಂದಿಗೆ ಅಸಾಧಾರಣ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ದಿಲೀಪ್ ಗವಿತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಅವರ ಅದ್ಭುತ ವೇಗ ಮತ್ತು ಕೌಶಲ್ಯವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿಯವರು, ಈ ಅದ್ಭುತ ವಿಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅವರು ತಮ್ಮ ಮುಂಬರುವ ಪ್ರಯತ್ನಗಳಲ್ಲಿ ಈ ಗೆಲುವಿನ ಆವೇಗವನ್ನು ಹೊಂದುತ್ತಾರೆ ಎಂದು ಆಶಿಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶವನ್ನು  ಹಂಚಿಕೊಂಡಿದೆ:

"ದಿಲೀಪ್ ಗವಿತ್ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ 100 ಮೀಟರ್ T47 ಸ್ಪರ್ಧೆಯಲ್ಲಿ ಅದ್ಭುತ ಸಮಯದೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ, ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅವರ ಅದ್ಭುತ ವೇಗ ಮತ್ತು ಕೌಶಲ್ಯವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಈ ಅದ್ಭುತ ವಿಜಯಕ್ಕಾಗಿ ದಿಲೀಪ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ತಮ್ಮ ಮುಂಬರುವ ಪ್ರಯತ್ನಗಳಲ್ಲಿ ಈ ಗೆಲುವಿನ ಆವೇಗವನ್ನು ಸದಾ,ಹೊಂದಲಿ: ಪ್ರಧಾನಮಂತ್ರಿ @narendramodi "

 

*****


(ಪ್ರಕಟಣೆ ಐ.ಡಿ.: 2326316) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Malayalam