ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಕಂಚಿನ ಪದಕ ಜಯಿಸಿರುವ ರಾಕೇಶ್‌ ಭಾಯಿ ಭಟ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 21 OCT 2026 6:42PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ 100 ಮೀಟರ್‌ ಟಿ 37 ಸ್ಪರ್ಧೆಯಲ್ಲಿ, ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿ ಕಂಚಿನ ಪದಕ ಜಯಿಸಿರುವ ರಾಕೇಶ್‌ ಭಾಯಿ ಭಟ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಶ್ರೀ ಮೋದಿ ಅವರು, ಇದು ಅತ್ಯುತ್ತಮ ಓಟ ಎಂದು ಉದ್ಗರಿಸುತ್ತಾ, ರಾಕೇಶ್ ಅವರ ವೇಗ, ಏಕಾಗ್ರತೆ ಮತ್ತು ಬದ್ಧತೆಯಿಂದಾಗಿ ಪ್ರಶಸ್ತಿ ಲಭಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

 ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:

"ರಾಕೇಶ್‌ ಭಾಯಿ ಭಟ್ ಅವರಿಂದ ಅದ್ಭುತ ಓಟ! 2026ರ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 100 ಮೀಟರ್ ಟಿ 37 ಸ್ಪರ್ಧೆಯಲ್ಲಿ, ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದಿರುವ ಅವರ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಅವರ ವೇಗ, ಏಕಾಗ್ರತೆ ಮತ್ತು ಸಮರ್ಪಣಾ ಭಾವವು ಅವರಿಗೆ ಈ ಯಶಸ್ಸನ್ನು ತಂದುಕೊಟ್ಟಿದೆ. ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2326312) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Tamil , Malayalam