ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ನಿಯಂತ್ರಿತ ಮತ್ತು ಅಪಾಯಕಾರಿ ಸ್ಫೋಟಕ ವಸ್ತುಗಳ ಆನ್‌ಲೈನ್ ಪಟ್ಟಿ, ಹೋಸ್ಟಿಂಗ್, ಜಾಹೀರಾತು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದರ ವಿರುದ್ಧ ಸಿಸಿಪಿಎ ಕ್ರಮ


ಸಿಸಿಪಿಎ ಮಧ್ಯಪ್ರವೇಶದ ಬಳಿಕ 7 ಆನ್‌ಲೈನ್ ವೇದಿಕೆಗಳಿಂದ 3,940 ಮಾರಾಟಗಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ

ಆನ್‌ಲೈನ್ ವೇದಿಕೆಯಲ್ಲಿ ಸ್ಫೋಟಕ ವಸ್ತುಗಳ ಮಾರಾಟದ ಯಾವುದೇ ಪ್ರಕರಣವನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915ಕ್ಕೆ ವರದಿ ಮಾಡಬಹುದು

ಪ್ರಕಟಣಾ ದಿನಾಂಕ: 19 OCT 2026 4:38PM by PIB Bengaluru

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ಮತ್ತು ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020ರ ನಿಬಂಧನೆಗಳ ಅಡಿಯಲ್ಲಿ, ಸ್ಫೋಟಕ ಕಾಯ್ದೆ, 1884, ಅಮೋನಿಯಂ ನೈಟ್ರೇಟ್ ನಿಯಮಗಳು, 2012 ಹಾಗೂ ಇತರ ಅನ್ವಯವಾಗುವ ನಿಯಮಗಳ ಅನುಸಾರ, ಅಮೋನಿಯಂ ನೈಟ್ರೇಟ್, ಗನ್‌ಪೌಡರ್, ಪಿಕ್ರಿಕ್ ಆಸಿಡ್ ಮತ್ತು ಪೆಂಟಾಎರಿಥ್ರಿಟಾಲ್ ಟೆಟ್ರಾನೈಟ್ರೇಟ್ (PETN) ಮುಂತಾದ ನಿಯಂತ್ರಿತ ಮತ್ತು ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಡಿಜಿಟಲ್ ವೇದಿಕೆಗಳಲ್ಲಿ ಅನಧಿಕೃತವಾಗಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಅವುಗಳ ಮಾರಾಟಕ್ಕೆ ಅನುಕೂಲ ಕಲ್ಪಿಸುವುದರ ವಿರುದ್ಧ ನಿಯಂತ್ರಣ ಕ್ರಮಗಳನ್ನು ಆರಂಭಿಸಿದೆ. ಗ್ರಾಹಕರ ಸುರಕ್ಷತೆ, ಸಾರ್ವಜನಿಕ ಭದ್ರತೆ ಮತ್ತು ಜವಾಬ್ದಾರಿಯುತ ಇ-ಕಾಮರ್ಸ್ ಅಭ್ಯಾಸಗಳನ್ನು ಬಲಪಡಿಸುವುದು ಈ ಕ್ರಮದ ಉದ್ದೇಶವಾಗಿದೆ.

ಈ ವಸ್ತುಗಳನ್ನು ಸ್ಫೋಟಕಗಳೆಂದು ವರ್ಗೀಕರಿಸಲಾಗಿದ್ದು, ಸ್ಫೋಟಕ ಕಾಯ್ದೆ, 1884 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ. ಇವುಗಳ ಕಾನೂನುಬದ್ಧ ಮಾರಾಟ ಮತ್ತು ಖರೀದಿಗೆ ನಿಗದಿತ ಪರವಾನಗಿ ಅಗತ್ಯವಿದೆ. ಆನ್‌ಲೈನ್ ವೇದಿಕೆಗಳು ಮಾರಾಟಗಾರರ ಮಾನ್ಯವಾದ ಪಿಇಎಸ್‌ಒ (ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ) ಪರವಾನಗಿಯ ವಿವರಗಳನ್ನು ಬಹಿರಂಗಪಡಿಸುವುದನ್ನು ಖಚಿತಪಡಿಸಬೇಕು. ಅಲ್ಲದೆ, ಖರೀದಿಸುವ ಮೊದಲು ಖರೀದಿದಾರರ ಗುರುತು ಮತ್ತು ಪರವಾನಗಿ ಸ್ಥಿತಿಯನ್ನು ಪರಿಶೀಲಿಸಬೇಕು.

ಕೆಳಗಿನ ಆನ್‌ಲೈನ್ ವೇದಿಕೆಗಳಲ್ಲಿ ಇಂತಹ ವಸ್ತುಗಳ ಆನ್‌ಲೈನ್ ಪಟ್ಟಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸಿಸಿಪಿಎ ಕ್ರಮ ಆರಂಭಿಸಿದೆ:

  1. ಇಂಡಿಯಾಮಾರ್ಟ್
  2. ಟ್ರೇಡ್‌ಇಂಡಿಯಾ
  3. ಡಯಲ್‌4ಟ್ರೇಡ್
  4. ಜಸ್ಟ್‌ ಡಯಲ್
  5. ಸಿಗ್ಮಾ-ಆಲ್ಡ್ರಿಚ್ ಇಂಡಿಯಾ
  6. ಎಕ್ಸ್‌ಪೋರ್ಟರ್ಸ್‌ ಇಂಡಿಯಾ
  7. ಐಬೈಕೆಮಿಕಲ್ಸ್

ಈ ವೇದಿಕೆಗಳು ಒಟ್ಟು 3,940 ಮಾರಾಟಗಾರರು ಮತ್ತು ಪಟ್ಟಿಗಳ ವಿವರಗಳನ್ನು ಒದಗಿಸಿವೆ. ಅವುಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಎಲ್ಲಾ ವೇದಿಕೆಗಳಿಂದಲೂ ಈ ಪಟ್ಟಿಗಳನ್ನು ತೆಗೆದುಹಾಕಲಾಗಿದೆ.

ವೇದಿಕೆವಾರು ವಿವರಗಳು

ಕ್ರ.ಸಂ.

ವೇದಿಕೆ (ಸಂಸ್ಥೆ)

ವಸ್ತು

ಮಾರಾಟಗಾರರ ಸಂಖ್ಯೆ

1

ಎಕ್ಸ್‌ಪೋರ್ಟರ್ಸ್‌ ಇಂಡಿಯಾ

(Weblink.In Pvt. Ltd.)

ಅಮೋನಿಯಂ ನೈಟ್ರೇಟ್

386

PETN

5

ಪಿಕ್ರಿಕ್ ಆಸಿಡ್

30

ಎಕ್ಸ್‌ಪೋರ್ಟರ್ಸ್‌ ಇಂಡಿಯಾ

ಒಟ್ಟು

421

2

ಟ್ರೇಡ್‌ಇಂಡಿಯಾ (Infocom Network Pvt. Ltd.)

ಪಿಕ್ರಿಕ್ ಆಸಿಡ್ ಮತ್ತು PETN

166 (210 ಪಟ್ಟಿ ನಮೂದುಗಳು)

3

ಡಯಲ್‌4ಟ್ರೇಡ್ (Dial4Trade Technologies Pvt. Ltd.)

ಅಮೋನಿಯಂ ನೈಟ್ರೇಟ್

11

4

ಸಿಗ್ಮಾ-ಆಲ್ಡ್ರಿಚ್ ಇಂಡಿಯಾ (Merck)

ಅಮೋನಿಯಂ ನೈಟ್ರೇಟ್ ಮತ್ತು PETN

ಈ ವೇದಿಕೆಯಲ್ಲಿ ಸ್ವಂತ ಉತ್ಪನ್ನಗಳನ್ನೇ ಮಾರಾಟ ಮಾಡಲಾಗುತ್ತದೆ; ಮೂರನೇ ವ್ಯಕ್ತಿಯ ಮಾರಾಟಗಾರರಿಗೆ ಅವಕಾಶ ನೀಡುವುದಿಲ್ಲ.

5

ಐಬೈಕೆಮಿಕಲ್ಸ್

ಪಿಕ್ರಿಕ್ ಆಸಿಡ್

ಈ ವೇದಿಕೆಯಲ್ಲಿ ಸ್ವಂತ ಉತ್ಪನ್ನಗಳನ್ನೇ ಮಾರಾಟ ಮಾಡಲಾಗುತ್ತದೆ; ಮೂರನೇ ವ್ಯಕ್ತಿಯ ಮಾರಾಟಗಾರರಿಗೆ ಅವಕಾಶ ನೀಡುವುದಿಲ್ಲ.

6

ಇಂಡಿಯಾಮಾರ್ಟ್ ಇಂಟರ್‌ಮೆಶ್ ಲಿಮಿಟೆಡ್‌

ಅಮೋನಿಯಂ ನೈಟ್ರೇಟ್

2,700

ಗನ್‌ಪೌಡರ್/PETN

22

ಪಿಕ್ರಿಕ್ ಆಸಿಡ್

370

ಇಂಡಿಯಾಮಾರ್ಟ್ ಇಂಟರ್‌ಮೆಶ್ ಲಿಮಿಟೆಡ್‌ಒಟ್ಟು

3,092

7

ಜಸ್ಟ್‌ ಡಯಲ್ ಲಿಮಿಟೆಡ್

ಅಮೋನಿಯಂ ನೈಟ್ರೇಟ್

206

ಒಟ್ಟು

3,940

‌ಸಿಸಿಪಿಎ ಈವರೆಗೆ ಅಂತಿಮ ಆದೇಶಗಳನ್ನು ಹೊರಡಿಸಿರುವ ಪ್ರಕರಣಗಳು

  • ಡಯಲ್‌4ಟ್ರೇಡ್: ಅಮೋನಿಯಂ ನೈಟ್ರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ₹₹10 ಲಕ್ಷ ದಂಡ.
  • ಎಕ್ಸ್‌ಪೋರ್ಟರ್ಸ್‌ ಇಂಡಿಯಾ (Weblink.In Pvt. Ltd.): ಅಮೋನಿಯಂ ನೈಟ್ರೇಟ್ ಮತ್ತು ಪೆಂಟಾಎರಿಥ್ರಿಟಾಲ್ ಟೆಟ್ರಾನೈಟ್ರೇಟ್ (PETN) ಮಾರಾಟಕ್ಕೆ ಸಂಬಂಧಿಸಿದಂತೆ ₹₹10 ಲಕ್ಷ ದಂಡ.
  • ಎಕ್ಸ್‌ಪೋರ್ಟರ್ಸ್‌ ಇಂಡಿಯಾ (Weblink.In Pvt. Ltd.): ಪಿಕ್ರಿಕ್ ಆಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ₹10 ಲಕ್ಷ ದಂಡ.

1) ಡಯಲ್‌4ಟ್ರೇಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

1. ಅಮೋನಿಯಂ ನೈಟ್ರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ಕಂಪನಿಗೆ ಸಿಸಿಪಿಎ ₹10 ಲಕ್ಷ ದಂಡ ವಿಧಿಸಿದೆ. ಅಲ್ಲದೆ, ತನ್ನ ವೇದಿಕೆಯಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇತರ ಯಾವುದೇ ಸ್ಫೋಟಕ ವಸ್ತುಗಳ ಪಟ್ಟಿ ಮಾಡುವುದನ್ನು ಹಾಗೂ ಅವುಗಳ ಮಾರಾಟಕ್ಕೆ ಅನುಕೂಲ ಕಲ್ಪಿಸುವುದನ್ನು ಸ್ಥಗಿತಗೊಳಿಸುವಂತೆ ಕಂಪನಿಗೆ ನಿರ್ದೇಶನ ನೀಡಿದೆ.

2. ಕಂಪನಿಯು ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (NCDRC) ಮುಂದೆ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. 2026ರ ಅಕ್ಟೋಬರ್ 9ರಂದು ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ, ಎನ್‌ಸಿಡಿಆರ್‌ಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.

3. ಈ ಆದೇಶದಲ್ಲಿ, ಕಾಯ್ದೆಯ ಸೆಕ್ಷನ್‌ಗಳು 2(28) ಮತ್ತು 2(47)ರ ಅಡಿಯಲ್ಲಿ ಈ ಪಟ್ಟಿಗಳನ್ನು ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನುಚಿತ ವ್ಯಾಪಾರ ಅಭ್ಯಾಸಗಳೆಂದು ಪರಿಗಣಿಸಲಾಗಿದೆ. ಅಲ್ಲದೆ, ತನ್ನ ವೇದಿಕೆಯಲ್ಲಿ ಸದರಿ ವಸ್ತುಗಳನ್ನು ಪಟ್ಟಿ ಮಾಡುವುದನ್ನು ಮತ್ತು ಅವುಗಳ ಮಾರಾಟಕ್ಕೆ ಅನುಕೂಲ ಕಲ್ಪಿಸುವುದನ್ನು ಸ್ಥಗಿತಗೊಳಿಸುವಂತೆ ಕಂಪನಿಗೆ ನಿರ್ದೇಶನ ನೀಡಲಾಗಿದೆ.

2) ಎಕ್ಸ್‌ಪೋರ್ಟರ್ಸ್‌ಇಂಡಿಯಾ (Weblink.In Pvt. Ltd.)

1. ಸ್ಫೋಟಕ ಕಾಯ್ದೆ, 1884 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಮೂಲಕ ಮಾರಾಟವನ್ನು ನಿಯಂತ್ರಿಸಲಾಗಿರುವ ಸ್ಫೋಟಕಗಳಾದ ಅಮೋನಿಯಂ ನೈಟ್ರೇಟ್ ಮತ್ತು PETN ಅನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಿಸಿಪಿಎ ಕಂಪನಿಗೆ ₹₹10 ಲಕ್ಷ ದಂಡ ವಿಧಿಸಿದೆ.

2. ಮತ್ತೊಂದು ಪ್ರಕರಣದಲ್ಲಿ, ಸ್ಫೋಟಕ ಕಾಯ್ದೆ, 1884 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಮೂಲಕ ಮಾರಾಟವನ್ನು ನಿಯಂತ್ರಿಸಲಾಗಿರುವ ಸ್ಫೋಟಕವಾದ ಪಿಕ್ರಿಕ್ ಆಸಿಡ್ವನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಕಂಪನಿಗೆ ₹10 ಲಕ್ಷ ದಂಡ ವಿಧಿಸಲಾಗಿದೆ.

3. ಎಕ್ಸ್‌ಪೋರ್ಟರ್ಸ್‌ ಇಂಡಿಯಾ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಎನ್‌ಸಿಡಿಆರ್‌ಸಿ ಮುಂದೆ ಮೇಲ್ಮನವಿಗಳನ್ನು ಸಲ್ಲಿಸಿದೆ. ಇವುಗಳನ್ನು ಮುಂದಿನ ಅವಧಿಯಲ್ಲಿ ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆಯಿದೆ.

3) ಇಂಡಿಯಾಮಾರ್ಟ್ ಇಂಟರ್‌ಮೆಶ್ ಲಿಮಿಟೆಡ್

1. ತನ್ನ ವೇದಿಕೆಯಲ್ಲಿ ಅಮೋನಿಯಂ ನೈಟ್ರೇಟ್, PETN/ಗನ್‌ಪೌಡರ್ ಮತ್ತು ಪಿಕ್ರಿಕ್ ಆಸಿಡ್ ನಂತಹ ಅಪಾಯಕಾರಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಿಸಿಪಿಎ ಇಂಡಿಯಾಮಾರ್ಟ್ ಇಂಟರ್‌ಮೆಶ್ ಲಿಮಿಟೆಡ್‌ಗೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.

2. ಮಹಾನಿರ್ದೇಶಕರು – ತನಿಖಾ ವಿಭಾಗವು ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ತನಿಖಾ ಮಹಾನಿರ್ದೇಶಕರ ವರದಿಯನ್ನು ಕಂಪನಿಯೊಂದಿಗೆ ಹಂಚಿಕೊಳ್ಳಲಾಗಿದೆ. ತನಿಖಾ ವರದಿಗೆ ಇಂಡಿಯಾಮಾರ್ಟ್ ತನ್ನ ಉತ್ತರವನ್ನು ಸಲ್ಲಿಸಿದೆ.

3. ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ನಿಬಂಧನೆಗಳ ಅನುಸಾರ, ವಿಚಾರಣೆಗಾಗಿ ಕಂಪನಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಈ ವಿಚಾರಣೆಗಳ ಸಂದರ್ಭದಲ್ಲಿ ಕಂಪನಿಯು ತನ್ನ ಸಮಗ್ರ ವಾದಗಳನ್ನು ಮಂಡಿಸಿದೆ.

4. ಸಿಸಿಪಿಎ ಹೊರಡಿಸಿರುವ ಕಾರಣ ಕೇಳುವ ನೋಟಿಸ್‌ಗಳನ್ನು ಪ್ರಶ್ನಿಸಿ ಇಂಡಿಯಾಮಾರ್ಟ್ ದೆಹಲಿ ಉಚ್ಚ ನ್ಯಾಯಾಲಯದ ಮುಂದೆ ರಿಟ್ ಅರ್ಜಿ ಸಲ್ಲಿಸಿದೆ.

4) ಜಸ್ಟ್‌ ಡಯಲ್

1. ಅಮೋನಿಯಂ ನೈಟ್ರೇಟ್ ಅನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಿಸಿಪಿಎ ಜಸ್ಟ್‌ ಡಯಲ್ ಲಿಮಿಟೆಡ್‌ಗೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.

2. ಮಹಾನಿರ್ದೇಶಕರು – ತನಿಖಾ ವಿಭಾಗವು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ತನಿಖಾ ಮಹಾನಿರ್ದೇಶಕರ ವರದಿಯನ್ನು ಕಂಪನಿಯೊಂದಿಗೆ ಹಂಚಿಕೊಳ್ಳಲಾಗಿದೆ. ಜಸ್ಟ್‌‌ ಡಯಲ್ ತನಿಖಾ ವರದಿಗೆ ತನ್ನ ಉತ್ತರವನ್ನು ಸಲ್ಲಿಸಿದೆ.

3. ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ನಿಬಂಧನೆಗಳ ಪ್ರಕಾರ, ಅಂತಿಮ ಆದೇಶ ಹೊರಡಿಸುವ ಮೊದಲು ಕಂಪನಿಗೆ ವಿಚಾರಣೆಯ ಅವಕಾಶ ನೀಡಬೇಕು. ಈವರೆಗೆ ಕಂಪನಿಗೆ ವಿಚಾರಣೆಗೆ ನಾಲ್ಕು ಅವಕಾಶಗಳನ್ನು ನೀಡಲಾಗಿದೆ. ಪ್ರತಿ ಬಾರಿಯೂ ಕಂಪನಿಯು ವಿಚಾರಣೆಯನ್ನು ಮುಂದೂಡುವಂತೆ ಕೋರಿದೆ. ಈ ಪ್ರಕರಣದ ಮುಂದಿನ ಮತ್ತು ಅಂತಿಮ ವಿಚಾರಣೆಯನ್ನು 2026ರ ಅಕ್ಟೋಬರ್ 23ರಂದು ನಡೆಸಲು ನಿಗದಿಪಡಿಸಲಾಗಿದೆ.

ತನಿಖಾ ಮಹಾನಿರ್ದೇಶಕರಿಂದ ತನಿಖೆ ನಡೆಯುತ್ತಿರುವ ಪ್ರಕರಣಗಳು

  • ಸಿಗ್ಮಾ-ಆಲ್ಡ್ರಿಚ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್: ಅಮೋನಿಯಂ ನೈಟ್ರೇಟ್, PETN ಮತ್ತು ಪಿಕ್ರಿಕ್ ಆಸಿಡ್ವನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ.
  • ಟ್ರೇಡ್‌ಇಂಡಿಯಾ (ಇನ್‌ಫೋಕಾಮ್ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್): ಪಿಕ್ರಿಕ್ ಆಸಿಡ್ ಮತ್ತು PETN ಅನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ.
  • ಐಬೈಕೆಮಿಕಲ್ಸ್: ಪಿಕ್ರಿಕ್ ಆಸಿಡ್ವನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡುವುದು, ಹೋಸ್ಟ್ ಮಾಡುವುದು, ಜಾಹೀರಾತು ನೀಡುವುದು ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ.

ಅನ್ವಯವಾಗುವ ಕಾನೂನುಗಳು ಮತ್ತು ಗ್ರಾಹಕರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ನಿಯಂತ್ರಿತ ಅಥವಾ ಅಪಾಯಕಾರಿ ವಸ್ತುಗಳನ್ನು ಅನಧಿಕೃತವಾಗಿ ಪಡೆಯಲು ಡಿಜಿಟಲ್ ಮಾರುಕಟ್ಟೆ ವೇದಿಕೆಗಳು ನೆರವಾಗದಂತೆ ನೋಡಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಈ ಕ್ರಮವು ಪುನರುಚ್ಚರಿಸುತ್ತದೆ.

ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು, ಸುರಕ್ಷಿತ ಡಿಜಿಟಲ್ ಮಾರುಕಟ್ಟೆ ವೇದಿಕೆಗಳನ್ನು ಖಚಿತಪಡಿಸುವುದು, ಅನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟುವುದು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಗ್ರಾಹಕರ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಸಿಪಿಎ ತನ್ನ ಬದ್ಧತೆಯನ್ನು ಮುಂದುವರಿಸಿದೆ.

 

*****

 


(ಪ್ರಕಟಣೆ ಐ.ಡಿ.: 2325201) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी