ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಐಡಿಬಿಐ ಬ್ಯಾಂಕ್ ಲಿಮಿಟೆಡ್ನ ಕಾರ್ಯತಂತ್ರ ಪುನಾರಚನೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯುಗಳು)
ಪ್ರಕಟಣಾ ದಿನಾಂಕ:
14 OCT 2026 4:53PM by PIB Bengaluru
ಪ್ರಶ್ನೆ 1. ಐಡಿಬಿಐ ಬ್ಯಾಂಕ್ ಲಿಮಿಟೆಡ್ನ 'ಕಾರ್ಯತಂತ್ರ ಖರೀದಿದಾರ' ಯಾರು?
ಉತ್ತರ: ಐಡಿಬಿಐ ಬ್ಯಾಂಕ್ ಲಿಮಿಟೆಡ್ನ 'ಕಾರ್ಯತಂತ್ರ ಖರೀದಿದಾರ'ರಾಗಿ '10955230 ಕೆನಡಾ ಐಎನ್ ಸಿ'(ಇದರ ಮಾತೃ ಸಂಸ್ಥೆ 'ಫೇರ್ ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್') ಅವರನ್ನು ಅನುಮೋದಿಸಲಾಗಿದೆ.
ಪ್ರಶ್ನೆ 2. ಈ ವ್ಯವಹಾರದ ಗಾತ್ರ ಎಷ್ಟು?
ಉತ್ತರ: ಈ ವ್ಯವಹಾರದ ಖರೀದಿ ಮೌಲ್ಯವು 52,878.0806181 ಕೋಟಿ ರೂ.ಗಳಷ್ಟಿದೆ. (ಅಕ್ಷರಗಳಲ್ಲಿ: 52 ಸಾವಿರದ 878 ಕೋಟಿ 8 ಲಕ್ಷದ 6 ಸಾವಿರದ 181 ರೂಪಾಯಿ ಮಾತ್ರ).
ಪ್ರಶ್ನೆ 3. ಭಾರತ ಸರ್ಕಾರ(ಜಿಒಐ) ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ನಡುವೆ ಇದನ್ನು ಹೇಗೆ ಹಂಚಲಾಗುತ್ತದೆ?
ಉತ್ತರ: ಐಡಿಬಿಐ ಬ್ಯಾಂಕ್ ಲಿಮಿಟೆಡ್ನ ಒಟ್ಟು ಷೇರು ಬಂಡವಾಳದಲ್ಲಿ 60.72% ಪಾಲನ್ನು ಈ ವ್ಯವಹಾರದ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಭಾರತ ಸರ್ಕಾರವು ಹೊಂದಿರುವ 30.48% ಪಾಲು ಮತ್ತು ಎಲ್ಐಸಿ ಹೊಂದಿರುವ 30.24% ಪಾಲು ಸೇರಿವೆ. ಮಾರಾಟದಿಂದ ಬರುವ ಮೊತ್ತವನ್ನು ಇದೇ ಅನುಪಾತದಲ್ಲಿ ಹಂಚಲಾಗುತ್ತದೆ.
ಪ್ರಶ್ನೆ 4. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಎಷ್ಟು ಸಂಸ್ಥೆಗಳು ಭಾಗವಹಿಸಿದ್ದವು?
ಉತ್ತರ: ಆರಂಭದಲ್ಲಿ ತಮ್ಮ 'ಆಸಕ್ತಿಯ ಅಭಿವ್ಯಕ್ತಿ' ಸಲ್ಲಿಸಿದ 5 ಪಾರ್ಟಿಗಳ ಪೈಕಿ, 'ಪ್ರಾಥಮಿಕ ಮಾಹಿತಿ ಜ್ಞಾಪಕ ಪತ್ರ'(ಪಿಐಎಂ)ದಲ್ಲಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳು ಮತ್ತು ಅನರ್ಹತಾ ಷರತ್ತುಗಳ ಪ್ರಕಾರ 4 ಪಾರ್ಟಿಗಳು ಅರ್ಹತೆ ಪಡೆದವು. ಇವುಗಳಲ್ಲಿ, ಅಂತಿಮವಾಗಿ 2 ಪಾರ್ಟಿಗಳು ತಮ್ಮ ತಾಂತ್ರಿಕ-ಹಣಕಾಸು ಬಿಡ್ಗಳನ್ನು ಸಲ್ಲಿಸಿದವು, ಅವು ಈ ವ್ಯವಹಾರದ 'ಅರ್ಹ ಬಿಡ್ದಾರರು'(ಕ್ಯುಬಿಗಳು) ಎಂದು ಪರಿಗಣಿಸಲ್ಪಟ್ಟವು.
ಪ್ರಶ್ನೆ 5. ಐಡಿಬಿಐ ಬ್ಯಾಂಕ್ ಲಿಮಿಟೆಡ್ನ ಮೌಲ್ಯಮಾಪನಕ್ಕಾಗಿ ಯಾವ ವ್ಯವಹಾರ ವಿಧಾನಗಳನ್ನು ಬಳಸಲಾಯಿತು?
ಉತ್ತರ: ಸಂಸ್ಥೆಯ ನ್ಯಾಯಯುತ ಮೌಲ್ಯ ನಿರ್ಧರಿಸಲು 'ಮಾರುಕಟ್ಟೆ ಗುಣಕ ವಿಧಾನ' ಮತ್ತು 'ಆಸ್ತಿ ಮೌಲ್ಯಮಾಪನ ವಿಧಾನ' ಎಂಬ 2 ಪರ್ಯಾಯ ವಿಧಾನಗಳನ್ನು ಬಳಸಲಾಯಿತು.
ಪ್ರಶ್ನೆ 6. ಮೌಲ್ಯಮಾಪನ ಪ್ರಕ್ರಿಯೆಯನ್ನು ಯಾರು ನಡೆಸಿದರು?
ಉತ್ತರ: ಈ ಉದ್ದೇಶಕ್ಕಾಗಿ ನೇಮಕಗೊಂಡ ಇಬ್ಬರು ಸ್ವತಂತ್ರ, ವೃತ್ತಿಪರ ಮೌಲ್ಯಮಾಪನ ಸಂಸ್ಥೆಗಳು ಈ ಸಂಸ್ಥೆಯ ಮೌಲ್ಯಮಾಪನ ನಡೆಸಿದವು. ಈ ಪ್ರಕ್ರಿಯೆಯಲ್ಲಿನ ಗೌಪ್ಯತಾ ಒಪ್ಪಂದಗಳ ಕಾರಣದಿಂದಾಗಿ, ಆ ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.
ಪ್ರಶ್ನೆ 7. ಐಡಿಬಿಐ ಬ್ಯಾಂಕ್ನ ಮೌಲ್ಯಮಾಪನದಲ್ಲಿ ಷೇರು ಮಾರುಕಟ್ಟೆ ಬೆಲೆ ವಹಿಸಿದ ಪಾತ್ರವೇನು?
ಉತ್ತರ: ಐಡಿಬಿಐ ಷೇರುಗಳು ಮಾರುಕಟ್ಟೆಯಲ್ಲಿ ಸೀಮಿತ ವಹಿವಾಟು ಹೊಂದಿದ್ದು, ಅವುಗಳ ಬೆಲೆಗಳು ಹೆಚ್ಚು ಏರಿಳಿತಕ್ಕೆ ಒಳಗಾಗಿದ್ದವು(ಮೌಲ್ಯಮಾಪನ ಅವಧಿಯಲ್ಲಿ ಇವು 61.01 ರೂ.ನಿಂದ 118.38 ರೂ. ವ್ಯಾಪ್ತಿಯಲ್ಲಿ ಏರಿಳಿತ ಕಂಡಿದ್ದವು). ಈ ಬೆಲೆಗಳು ಉದ್ಯಮದ ಆಂತರಿಕ ಮೌಲ್ಯದೊಂದಿಗೆ ಹೊಂದಾಣಿಕೆಯಾಗದ ಕಾರಣ, ಮೌಲ್ಯಮಾಪನಕ್ಕಾಗಿ ಇದನ್ನು ಪರಿಗಣಿಸಲಿಲ್ಲ. ಬದಲಾಗಿ, ಈ ಸಮಸ್ಯೆಯನ್ನು ನಿವಾರಿಸುವ 'ಮಾರುಕಟ್ಟೆ ಗುಣಕ ವಿಧಾನ'ದ ಮೂಲಕ ಸಾಪೇಕ್ಷ ಮೌಲ್ಯಮಾಪನ ಬಳಸಲಾಯಿತು. ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮಾರ್ಚ್ 31, 2026ರ ಲೆಕ್ಕಪತ್ರಗಳ ಆಧಾರದ ಮೇಲೆ, ಈ ವಿಧಾನದ ಮೂಲಕ ಉದ್ಯಮದ ನ್ಯಾಯಯುತ ಮಾರುಕಟ್ಟೆ ಮೌಲ್ಯ ನಿರ್ಧರಿಸಲಾಯಿತು.
ಪ್ರಶ್ನೆ 8. ಐಡಿಬಿಐ ಬ್ಯಾಂಕ್ನ ಭೂಮಿ ಮತ್ತು ಸ್ವತ್ತುಗಳು ಸೇರಿದಂತೆ ಇತರೆ ಸ್ವತ್ತುಗಳ ಮೌಲ್ಯಮಾಪನ ಹೇಗೆ ಮಾಡಲಾಗಿದೆ?
ಉತ್ತರ: ಐಡಿಬಿಐ ಬ್ಯಾಂಕ್ನ ಮಾರ್ಚ್ 31, 2026ರ ಲೆಕ್ಕಪರಿಶೋಧಿತ ಲೆಕ್ಕಪತ್ರಗಳ ಆಧಾರದ ಮೇಲೆ, ಉದ್ಯಮದ 'ನ್ಯಾಯಯುತ ನಿವ್ವಳ ಸ್ವತ್ತಿನ ಮೌಲ್ಯ' ನಿರ್ಧರಿಸಲು 'ಸ್ವತ್ತು ಮೌಲ್ಯಮಾಪನ ವಿಧಾನ' ಬಳಸಲಾಯಿತು. ಈ ವಿಧಾನದಲ್ಲಿ ಭೂಮಿ ಮತ್ತು ಸ್ವತ್ತಿನಂತಹ ಭೌತಿಕ ಹಾಗೂ ಅಮೂರ್ತ ಸ್ವತ್ತುಗಳನ್ನು, ಹಾಗೆಯೇ ಹೊಣೆಗಾರಿಕೆ(ಬಾಧ್ಯತೆ)ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಪ್ರಶ್ನೆ 9. ಈ ವಹಿವಾಟಿಗೆ ಯಾವ ಬೆಂಚ್ ಮಾರ್ಕ್ ಬೆಲೆ ಬಳಸಲಾಗಿದೆ?
ಉತ್ತರ: ಅರ್ಹ ಬಿಡ್ಗಳನ್ನು ಮೌಲ್ಯಮಾಪನ ಮಾಡಲು 2 ಸ್ವತಂತ್ರ ಮೌಲ್ಯಮಾಪನ ಸಂಸ್ಥೆಗಳು ನೀಡಿದ ಮೌಲ್ಯಗಳ ಸರಾಸರಿಯನ್ನು(ಪ್ರತಿ ಷೇರಿಗೆ 75.99 ರೂ.) ಮಾನದಂಡ ಬೆಲೆಯಾಗಿ ಬಳಸಲಾಯಿತು. ಅಂತಿಮವಾಗಿ ಆಯ್ಕೆಯಾದ ಬಿಡ್, ಈ ಮಾನದಂಡದ ಬೆಲೆಗಿಂತ ಹಾಗೂ ಎರಡೂ ಸ್ವತಂತ್ರ ಮೌಲ್ಯಮಾಪನ ಸಂಸ್ಥೆಗಳು ಅಂದಾಜಿಸಿದ ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಾಗಿತ್ತು.
Q10. ಬೆಂಚ್ ಮಾರ್ಕ್ ಬೆಲೆಯನ್ನು ಹೇಗೆ ನಿರ್ಧರಿಸಲಾಯಿತು?
ಉತ್ತರ: ಬೆಂಚ್ ಮಾರ್ಕ್ ಬೆಲೆಯು ಮಾರುಕಟ್ಟೆ ಬಹು ವಿಧಾನದಿಂದ ನಿರ್ಧರಿಸಲ್ಪಟ್ಟ ನ್ಯಾಯಯುತ ಮಾರುಕಟ್ಟೆ ಮೌಲ್ಯ ಮತ್ತು ಸ್ವತ್ತಿನ ಮೌಲ್ಯಮಾಪನ ವಿಧಾನದಿಂದ ನಿರ್ಧರಿಸಲ್ಪಟ್ಟ ನ್ಯಾಯಯುತ ನಿವ್ವಳ ಸ್ವತ್ತಿನ ಮೌಲ್ಯದ ಸರಾಸರಿಯಾಗಿತ್ತು.
Q11. ಮುಂದಿನ ಕ್ರಮವೇನು?
ಉತ್ತರ: ಯಶಸ್ವಿ ಬಿಡ್ ದಾರರು ಈಗ ಆಸಕ್ತಿಯ ಅಭಿವ್ಯಕ್ತಿ(ಇಒಐ) ಹಂತದಲ್ಲಿ ನಡೆಸಿದ 'ಫಿಟ್ & ಪ್ರಾಪರ್' ಮೌಲ್ಯಮಾಪನಕ್ಕೆ ಅನುಗುಣವಾಗಿ ಆರ್ಬಿಐಗೆ ತಮ್ಮ ರುಜುವಾತುಗಳನ್ನು ಪ್ರಸ್ತುತಪಡಿಸುತ್ತಾರೆ. ಅದರಲ್ಲಿ ಸೂಚಿಸಲಾದ ನಿಯಂತ್ರಕ ಷರತ್ತುಗಳ ಅನುಸರಣೆಗಾಗಿ ಮಾರ್ಗಸೂಚಿ ಸಲ್ಲಿಸುತ್ತಾರೆ.
Q12. ಭಾರತ ಸರ್ಕಾರ ಮತ್ತು ಎಲ್ಐಸಿಯೊಂದಿಗೆ ಉಳಿದಿರುವ ಉಳಿದಿರುವ ಈಕ್ವಿಟಿ ಪಾಲನ್ನು ಎಷ್ಟು?
ಉತ್ತರ: ಭಾರತ ಸರ್ಕಾರವು ಉಳಿದ 15% ಈಕ್ವಿಟಿ ಪಾಲನ್ನು ಉಳಿಸಿಕೊಳ್ಳುತ್ತದೆ, ಎಲ್ಐಸಿ 19% ಈಕ್ವಿಟಿ ಪಾಲು ಉಳಿಸಿಕೊಳ್ಳುತ್ತದೆ. ಇಬ್ಬರೂ ತಮ್ಮ ನಾಮನಿರ್ದೇಶಿತರನ್ನು ಮಂಡಳಿಯಿಂದ ಹಿಂತೆಗೆದುಕೊಳ್ಳುತ್ತಾರೆ ಮತ್ತು ಸಾರ್ವಜನಿಕ ಷೇರುದಾರರಾಗುತ್ತಾರೆ.
Q13. ಭಾರತ ಸರ್ಕಾರ ಮತ್ತು ಎಲ್ಐಸಿ ಐಡಿಬಿಐ ಬ್ಯಾಂಕಿನಲ್ಲಿ ತಮ್ಮ ಉಳಿದಿರುವ ಷೇರುಗಳನ್ನು ಹೇಗೆ ವಿಸರ್ಜಿಸುತ್ತವೆ?
ಉತ್ತರ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಕ್ಕೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯ ಮೂಲಕ ಉಳಿದಿರುವ ಭಾರತ ಸರ್ಕಾರದ ಷೇರುಗಳ ಅಲ್ಪಸಂಖ್ಯಾತ ಪಾಲನ್ನು ಮಾರಾಟ ಮಾಡಲು ಪರ್ಯಾಯ ಕಾರ್ಯವಿಧಾನಕ್ಕೆ ಅಧಿಕಾರ ನೀಡಿದೆ. ಎಲ್ಐಸಿ ತನ್ನ ನಿಯಂತ್ರಕರ ನಿರ್ದೇಶನದ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಾಗ ಅದರ ಆಂತರಿಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ತನ್ನ ಉಳಿದಿರುವ ಷೇರುಗಳನ್ನು ನಿರ್ವಹಿಸಲು ಮುಕ್ತವಾಗಿರುತ್ತದೆ.
ಪ್ರಶ್ನೆ 14. ಬ್ಯಾಂಕಿಂಗ್ ವಲಯ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ?
ಉತ್ತರ: ಇದು ನಮ್ಮ ಆರ್ಥಿಕತೆಯ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಮೇಲೆ ಗಮನಾರ್ಹವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಖಾಸಗೀಕರಣದ ನಂತರ, ಐಡಿಬಿಐ ಬ್ಯಾಂಕ್ ಹಿಂದಿನಂತೆ ಸರ್ಕಾರದ ನೆರವಿನ ಮೇಲೆ ಅವಲಂಬಿತವಾಗದೆ, ಸ್ವಂತ ನಿಧಿಯನ್ನು ಸಂಗ್ರಹಿಸಲು ಸಮರ್ಥವಾಗುತ್ತದೆ. ಈ ಬ್ಯಾಂಕನ್ನು ಖರೀದಿಸುವ ಕಾರ್ಯತಂತ್ರ ಹೂಡಿಕೆದಾರರು ಖಾಸಗಿ ಬಂಡವಾಳ ಹೂಡುವುದಲ್ಲದೆ, ಹೊಸ ತಂತ್ರಜ್ಞಾನ ಮತ್ತು ಉತ್ತಮ ನಿರ್ವಹಣಾ ಪದ್ಧತಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದು ಬ್ಯಾಂಕಿನ ವ್ಯವಹಾರ ಸಾಮರ್ಥ್ಯವನ್ನು ಹೆಚ್ಚಿಸಲು, ಸಾಲ ಹಾಗೂ ಠೇವಣಿ ವೃದ್ಧಿಯ ವಿಷಯದಲ್ಲಿ ಅದನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುತ್ತದೆ.
ಪ್ರಶ್ನೆ 15. ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಸಮಯದಲ್ಲಿ ಭಾರತದ ಬಾಹ್ಯ ವಲಯದ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ?
ಉತ್ತರ: ಇದು ನಮ್ಮ ಆರ್ಥಿಕತೆಯ ಹಣಕಾಸು ವಲಯದಲ್ಲಿ ಇಲ್ಲಿಯವರೆಗಿನ ಅತಿದೊಡ್ಡ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ಆಗಲಿದೆ. ಇದು ಆರ್ಥಿಕ ಸುಧಾರಣೆಗಳ ಪರವಾಗಿ ಸಕಾರಾತ್ಮಕ ಭಾವನೆ ಮೂಡಿಸಲು ಸಹಾಯ ಮಾಡುವ ಜತೆಗೆ, ದೇಶದಲ್ಲಿ ಒಟ್ಟಾರೆ ಹೂಡಿಕೆಯ ವಾತಾವರಣವನ್ನು ಸುಧಾರಿಸುತ್ತದೆ.
*****
(ಪ್ರಕಟಣೆ ಐ.ಡಿ.: 2323732)
ವಿಸಿಟರ್ ಕೌಂಟರ್ : 12