ಪ್ರಧಾನ ಮಂತ್ರಿಯವರ ಕಛೇರಿ
ಕಲ್ಯಾಣದಿಂದ ಸಬಲೀಕರಣದತ್ತ ಸಾಗುತ್ತಿರುವ ಆಡಳಿತ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
14 OCT 2026 11:23AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಭಾರತದ ಆಡಳಿತ ವಿಧಾನವು ಕಲ್ಯಾಣದಿಂದ ಸಬಲೀಕರಣದೆಡೆಗೆ ಸಾಗುತ್ತಿದೆ ಮತ್ತು ನಾಗರಿಕರನ್ನು ಅಭಿವೃದ್ಧಿ ಪ್ರಕ್ರಿಯೆಯ ಸಕ್ರಿಯ ಪಾಲುದಾರರನ್ನಾಗಿ ರೂಪಿಸುತ್ತಿದೆ ಎಂಬುದನ್ನು ಲೇಖನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಇದು ನೈರ್ಮಲೀಕರಣ, ಅಡುಗೆ ಅನಿಲ ಸಂಪರ್ಕ, ಆರೋಗ್ಯ ಸೇವೆ ಹಾಗೂ ಸಾಲ ಸೌಲಭ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಜತೆಗೆ ಜನರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುವುದು ಈ ಆಡಳಿತ ಮಾದರಿಯ ಪ್ರಮುಖ ಉದ್ದೇಶವಾಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಮತ್ತು ಸಶಕ್ತ ಭಾರತ ನಿರ್ಮಿಸುವ ದೂರದೃಷ್ಟಿಯಲ್ಲಿ ಈ ವಿಧಾನವು ಕೇಂದ್ರ ಸ್ಥಾನ ಹೊಂದಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಈ ಕುರಿತು ಪ್ರಧಾನಮಂತ್ರಿಯವರ ಕಚೇರಿ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಹೀಗೆ ತಿಳಿಸಿದೆ:
“ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ @JM_Scindia ಅವರು ಭಾರತದ ಆಡಳಿತ ವಿಧಾನವು ಕಲ್ಯಾಣದಿಂದ ಸಬಲೀಕರಣದತ್ತ ಪರಿವರ್ತನೆಯಾಗುತ್ತಿದೆ ಎಂದು ಬರೆದಿದ್ದಾರೆ. ಈ ವಿಧಾನವು ನಾಗರಿಕರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ನೆರವಾಗುತ್ತಿದೆ.
ನೈರ್ಮಲೀಕರಣ ಮತ್ತು ಅಡುಗೆ ಅನಿಲ ಸಂಪರ್ಕದಿಂದ ಹಿಡಿದು ಆರೋಗ್ಯ ಸೇವೆ ಹಾಗೂ ಸಾಲ ಸೌಲಭ್ಯದವರೆಗೆ, ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಮತ್ತು ಜನರು ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗಿದೆ. ಈ ವಿಧಾನವು 2047ರ ವೇಳೆಗೆ ವಿಕಸಿತ ಮತ್ತು ಸಶಕ್ತ ಭಾರತ ನಿರ್ಮಿಸುವ ದೂರದೃಷ್ಟಿಯ ಕೇಂದ್ರ ಭಾಗವಾಗಿದೆ.”
*****
(ಪ್ರಕಟಣೆ ಐ.ಡಿ.: 2323139)
ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam