ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಗೆ ಹಳೆಯ ಬೈನರಿ ಜಗತ್ತನ್ನು ಕರಗಿಸುವ ಮೂಲಕ ಭಾರತದ ಕತೆಯನ್ನು ಹೊಸದಾಗಿ ಬರೆಯುತ್ತಿದ್ದಾರೆ ಎಂಬುದನ್ನು ಪ್ರಧಾನವಾಗಿ ಪ್ರಸ್ತಾಪಿಸಿರುವ ಶ್ರೀ ಸ್ವಪನ್ ದಾಸ್‌ಗುಪ್ತ ಅವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 OCT 2026 10:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಸ್ವಪನ್ ದಾಸ್‌ಗುಪ್ತ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಶ್ರೀ ಸ್ವಪನ್ ದಾಸ್‌ಗುಪ್ತ ಅವರು ತಮ್ಮ ಲೇಖನದಲ್ಲಿ ಪ್ರಧಾನಮಂತ್ರಿಗಳು ಹಳೆಯ ಬೈನರಿ ಜಗತ್ತನ್ನು ಕರಗಿಸುವ ಮೂಲಕ ಭಾರತದ ಕಥೆಯನ್ನು ಪುನರ್ ರಚಿಸಿದ್ದಾರೆ ಎಂದು ಬರೆದಿದ್ದಾರೆ. ಇದು ಸುಧಾರಣೆಗಳು ಮತ್ತು ಕಲ್ಯಾಣ, ಸಾಂಸ್ಕೃತಿಕ ಹೆಮ್ಮೆ ಮತ್ತು ತಂತ್ರಜ್ಞಾನವನ್ನು ಹೇಗೆ ಒಗ್ಗೂಡಿಸಲಾಗಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ, ಜತೆಗೆ ಅದರಲ್ಲಿ  ಉದ್ದೇಶಿತ ಕಲ್ಯಾಣ ವಿತರಣೆ ಮತ್ತು ಡಿಜಿಟಲ್ ವೇದಿಕೆಗಳು ಆರ್ಥಿಕ ಸುಧಾರಣೆಗಳ ಜೊತೆಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಪ್ರಧಾನಮಂತ್ರಿ ಕಾರ್ಯಾಲಯ ತನ್ನ X ಪೋಸ್ಟ್‌ನಲ್ಲಿ ಹೀಗೆ ಹೇಳಿದೆ.

"ಶ್ರೀ @swapan55 ಅವರು ಪ್ರಧಾನಮಂತ್ರಿ @narendramodi ಹಳೆಯ ಬೈನರಿ ಜಗತ್ತನ್ನು ಕರಗಿಸುವ ಮೂಲಕ ಭಾರತದ ಕಥೆಯನ್ನು ಪುನರ್ ರಚಿಸಿದ್ದಾರೆ ಎಂದು ಬರೆಯುತ್ತಾರೆ.

ಉದ್ದೇಶಿತ ಕಲ್ಯಾಣ ವಿತರಣೆ ಮತ್ತು ಡಿಜಿಟಲ್ ವೇದಿಕೆಗಳು ಆರ್ಥಿಕ ಸುಧಾರಣೆಗಳ ಜೊತೆಗೆ ಕಾರ್ಯನಿರ್ವಹಿಸುವುದರೊಂದಿಗೆ ಸುಧಾರಣೆಗಳು ಮತ್ತು ಕಲ್ಯಾಣ, ಸಾಂಸ್ಕೃತಿಕ ಹೆಮ್ಮೆ ಮತ್ತು ತಂತ್ರಜ್ಞಾನವನ್ನು ಹೇಗೆ ಒಟ್ಟಿಗೆ ತರಲಾಗಿದೆ ಎಂಬುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಈ ಚಿಂತನಶೀಲ ಲೇಖನವನ್ನು ಓದಿ."

 

*****


(ಪ್ರಕಟಣೆ ಐ.ಡಿ.: 2320616) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Assamese , Bengali , Manipuri , Punjabi , Gujarati , Malayalam