ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಬೆಳವಣಿಗೆಗೆ ಮತ್ತು ವಿಕಸಿತ ಭಾರತ 2047ಕ್ಕಾಗಿ ನಿರ್ಮಿಸಲಾಗಿರುವ ಸದೃಢ ಅಡಿಪಾಯಗಳನ್ನು ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 OCT 2026 1:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು ಬರೆದಿರುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿಯವರ 25 ವರ್ಷಗಳ ಆಡಳಿತಾವಧಿಯಲ್ಲಿ ಭಾರತದ ಅಭಿವೃದ್ಧಿಯ ವೇಗ ಹೇಗೆ ಹಲವು ಪಟ್ಟು ಹೆಚ್ಚಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಡಿಜಿಟಲ್ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದ ಹಿಡಿದು ಉತ್ಪಾದನೆ ಮತ್ತು ಸಾಮಾಜಿಕ ಕಲ್ಯಾಣದವರೆಗೆ, ಈ ಅವಧಿಯು ಭಾರತದ ಮುಂದಿನ ಹಂತದ ಬೆಳವಣಿಗೆಗೆ ಹಾಗೂ 'ವಿಕಸಿತ ಭಾರತ 2047'ರ ಮುನ್ನೋಟದ ಸಾಕಾರಕ್ಕೆ ಹೇಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದೆ ಎಂಬುದನ್ನು ಶ್ರೀ ಖಟ್ಟರ್ ಅವರು ವಿವರಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

“ಪ್ರಧಾನಮಂತ್ರಿ @narendramodi ಅವರ 25 ವರ್ಷಗಳ ಆಡಳಿತಾವಧಿಯಲ್ಲಿ ಭಾರತದ ಅಭಿವೃದ್ಧಿಯ ವೇಗವು ಹಲವು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ @ mlkhattar ಅವರು ಬರೆದಿದ್ದಾರೆ.

ಡಿಜಿಟಲ್ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದ ಹಿಡಿದು ಉತ್ಪಾದನೆ ಮತ್ತು ಸಾಮಾಜಿಕ ಕಲ್ಯಾಣದವರೆಗೆ, ಈ ಅವಧಿಯು ಭಾರತದ ಮುಂದಿನ ಹಂತದ ಬೆಳವಣಿಗೆ ಮತ್ತು 'ವಿಕಸಿತ ಭಾರತ 2047'ಕ್ಕೆ ಬಲವಾದ ಅಡಿಪಾಯವನ್ನು ನೀಡಿದೆ.”

 

*****


(ಪ್ರಕಟಣೆ ಐ.ಡಿ.: 2320094) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Gujarati , Tamil , Telugu , Malayalam