ಸಂಪುಟ
azadi ka amrit mahotsav

ಭವಿಷ್ಯದ ಚಾಂಪಿಯನ್‌ಗಳನ್ನು ಸೃಷ್ಟಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ನೇರ ಷೇರು ಹೂಡಿಕೆಗಾಗಿ ಎಸ್‌ಎಂಇ ಬೆಳವಣಿಗೆಯ ನಿಧಿ ಸ್ಥಾಪನೆಗೆ 10,000 ಕೋಟಿ ರೂಪಾಯಿ ಒದಗಿಸುವ ಬದ್ಧತೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ

ಪ್ರಕಟಣಾ ದಿನಾಂಕ: 06 OCT 2026 3:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್ ಎಂ ಇ) ಬೆಳವಣಿಗೆ-ಆಧಾರಿತ ಬಂಡವಾಳಕ್ಕೆ ವೇಗ ನೀಡುವ ಮತ್ತು 2026-27ರ ಕೇಂದ್ರ ಬಜೆಟ್‌ನ ಪ್ಯಾರಾ 28 ರ ಪ್ರಕಾರ ಉತ್ಪಾದನೆ, ಸೇವೆಗಳು, ತಂತ್ರಜ್ಞಾನ, ನಾವೀನ್ಯತೆ-ಆಧಾರಿತ ವಲಯಗಳು ಮತ್ತು ಕಾರ್ಯತಂತ್ರದ ಮೌಲ್ಯ ಸರಣಿಗಳಲ್ಲಿ ಭಾರತೀಯ ಉದ್ಯಮಗಳು ಚಾಂಪಿಯನ್ ಆಗಿ ಹೊರಹೊಮ್ಮುವಿಕೆಗೆ ಸಹಕರಿಸುವ ಗುರಿಯನ್ನು ಹೊಂದಿರುವ ಎಸ್ ಎಂಇ ಅಭಿವೃದ್ಧಿ ನಿಧಿ (ಎಸ್ ಜಿ ಎಫ್) ಸ್ಥಾಪನೆಗೆ 10,000 ಕೋಟಿ ರೂ. ನೆರವಜು ನೀಡುವ ಬದ್ಧತೆಯನ್ನು ಇಂದು ಅನುಮೋದಿಸಿದೆ. ಇದು 2026-27ರ ಕೇಂದ್ರ ಬಜೆಟ್‌ನಲ್ಲಿ ಒಟ್ಟಾರೆಯಾಗಿ ಎಂಎಸ್ ಎಂಇ ಪೂರಕ ವ್ಯವಸ್ಥೆಗೆ ಷೇರು ಹೂಡಿಕೆ, ನಗದು ಲಭ್ಯತೆ ಮತ್ತು ವೃತ್ತಿಪರ ಬೆಂಬಲವನ್ನು ಒದಗಿಸುವತ್ತ ಗಮನಹರಿಸುವ ಸಮಗ್ರ ಘೋಷಣೆಗಳ ಭಾಗವಾಗಿತ್ತು.

ಷೇರು ಬಂಡವಾಳದ ಬೆಂಬಲವನ್ನು ಒದಗಿಸಲು ಹಾಲಿ ಅಸ್ತಿತ್ವದಲ್ಲಿರುವ ಹಲವು ನಿಧಿಗಳಿವೆ, ಆದರೆ ಅವುಗಳಲ್ಲಿ ಹೆಚ್ಚಿನವು ಆರಂಭಿಕ ಹಂತದ ಉದ್ಯಮಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಮುಖ್ಯವಾಗಿ ಸಣ್ಣ ಕೈಗಾರಿಕೆಗಳಿಗೆ ಸೀಮಿತವಾಗಿರುತ್ತವೆ. ಆದರೆ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇಕ್ವಿಟಿ ಬೆಳವಣಿಗೆಯ ಬಂಡವಾಳ ಲಭ್ಯತೆಯಲ್ಲಿ ಸಾಂಸ್ಥಿಕಿ ಕೊರತೆ ಇದೆ.

ಈ ಮಹತ್ವದ ಉಪಕ್ರಮವು ಭಾರತದ ಉದ್ಯಮಶೀಲತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ, ಬೆಳವಣಿಗೆಯ ಹಂತದ ಉದ್ಯಮಗಳಿಗೆ ದೇಶೀಯ ಬಂಡವಾಳ ಮಾರುಕಟ್ಟೆ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಮರ್ಥವಾಗಿರುವ ಹೊಸ ಪೀಳಿಗೆಯ ಭಾರತೀಯ ಕಂಪನಿಗಳನ್ನು ಸೃಷ್ಟಿಸುವ ಮೂಲಕ ವಿಕಸಿತ ಭಾರತ 2047ರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಎಸ್ ಎಂಇಗಳು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಉದ್ಯೋಗ ಸೃಷ್ಟಿ, ರಫ್ತು, ಉತ್ಪಾದನಾ ಉತ್ಪಾದನೆ ಮತ್ತು ನಾವೀನ್ಯತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ವಿವಿಧ ಉಪಕ್ರಮಗಳು ಎಸ್ ಎಂಇಗಳಿಗೆ ಸಾಲದ ಲಭ್ಯತೆಯನ್ನು ಹೆಚ್ಚಿಸಿವೆ, ಆದರೆ ಅದರ ವ್ಯಾಪ್ತಿ, ನಾವೀನ್ಯತೆ ನೀಡಲು, ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು, ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು, ಸ್ವಾಧೀನಗಳನ್ನು ಕೈಗೊಳ್ಳಲು ಮತ್ತು ಉದ್ಯಮದ ನಾಯಕರಾಗಿ ಪರಿವರ್ತನೆಗೊಳ್ಳಲು ಬಯಸುವ ಉದ್ಯಮಗಳಿಗೆ ಅಗತ್ಯವಿರುವ ದೀರ್ಘಕಾಲೀನ ಅಪಾಯದ ಬಂಡವಾಳ (ರಿಸ್ಕಿ ಕ್ಯಾಪಿಟಲ್) ದ ಲಭ್ಯತೆಯಲ್ಲಿ  ಕೊರತೆಯಿದೆ. ಎಸ್ ಎಂಇ ಅಭಿವೃದ್ಧಿಯ ನಿಧಿಯನ್ನು ವ್ಯಾಪಾರದ ಕಾರ್ಯಸಾಧ್ಯತೆ ಮತ್ತು ಸ್ಕೇಲೆಬಿಲಿಟಿಯೊಂದಿಗೆ ಹೆಚ್ಚಿನ ಸಾಮರ್ಥ್ಯದ ಎಸ್ ಎಂಇಗಳಿಗೆ  ಬೆಳವಣಿಗೆಯ ಇಕ್ವಿಟಿ ಬಂಡವಾಳವನ್ನು ಒದಗಿಸುವ ಮೂಲಕ ಈ ನಿರ್ಣಾಯಕ ಹಣಕಾಸು ಕೊರತೆಯನ್ನು ಪರಿಹರಿಸುವ ರೀತಿಯಲ್ಲಿ ರೂಪಿಸಲಾಗಿದೆ.

ಈ ನಿಧಿಯನ್ನು ಉದ್ಯಮಗಳ ಬೆಳವಣಿಗೆಯ ಪಯಣದ ನಿರ್ಣಾಯಕ ಹಂತಗಳಲ್ಲಿ ಬೆಂಬಲಿಸಲು ಒಂದು ಪರಿವರ್ತನಾ ಸಾಧನವಾಗಿ ಕಲ್ಪಿಸಲಾಗಿದೆ. ಎಸ್ ಜಿಎಫ್  ನಿಂದ ಹೆಚ್ಚಿನ ಹಂಚಿಕೆಯನ್ನು ಸಣ್ಣ ಮತ್ತು ಮಧ್ಯಮ ಉತ್ಪಾದನಾ ಕೇಂದ್ರಿತ ಉದ್ಯಮಗಳಿಗೆ ನೀಡಲಾಗುವುದು. ಈ ನಿಧಿಯು ಎರಡು ಮತ್ತು ಮೂರನೇ ದರ್ಜೆಯ ನಗರಗಳಲ್ಲಿನ ಕೈಗಾರಿಕಾ ಸಮೂಹಗಳಲ್ಲಿ ಕಾರ್ಯನಿರ್ವಹಿಸುವ ಎಸ್ ಎಂಇ  ಗಳನ್ನು ಸಹ ಪರಿಗಣಿಸುತ್ತದೆ. ದೀರ್ಘಾವಧಿಯ ಬಂಡವಾಳವನ್ನು ಒದಗಿಸುವ ಮೂಲಕ, ಈ ಉಪಕ್ರಮವು ಭಾರತೀಯ ಎಸ್ ಎಂಇಗಳು ಕಾರ್ಯಾಚರಣೆಗಳನ್ನು ವೃದ್ಧಿಸಿಕೊಳ್ಳಲು, ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಲು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಲು, ಜಾಗತಿಕ ಮೌಲ್ಯ ಸರಣಿಗಳಲ್ಲಿ ಸಂಯೋಜಿಸಲು ಮತ್ತು ಕಾರ್ಯತಂತ್ರದ ಹೂಡಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ನಿಧಿಯು ಆಯಾ ವಲಯಗಳಲ್ಲಿ ಚಾಂಪಿಯನ್ ಆಗಲು ಅಗತ್ಯವಿರುವ ಪ್ರಮಾಣ, ನಾವೀನ್ಯತೆ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯೊಂದಿಗೆ ಭಾರತೀಯ ಕಂಪನಿಗಳ ಬಲವಾದ ಕಾರ್ಯವಿಧಾನ ಹೊರಹೊಮ್ಮುವಿಕೆಯನ್ನು ವೇಗಗೊಳಿಸುತ್ತದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ.

ಎಸ್ ಎಂಇ ಅಭಿವೃದ್ಧಿ ನಿಧಿಗೆ ಸರ್ಕಾರದ ಬದ್ಧತೆಯು ಸುಧಾರಣೆಗಳು, ಡಿಜಿಟಲೀಕರಣ ಉಪಕ್ರಮಗಳು, ಕ್ರೆಡಿಟ್ ಬೆಂಬಲ ಕಾರ್ಯವಿಧಾನಗಳು, ವ್ಯಾಪಾರ ಮಾಡುವ ಸುಲಭ ಕ್ರಮಗಳು, ಸಾರ್ವಜನಿಕ ಸಂಗ್ರಹಣೆ ಸುಧಾರಣೆಗಳು, ಆರಂಭಿಕ ಪ್ರಚಾರ ಉಪಕ್ರಮಗಳು ಮತ್ತು ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಕಾರ್ಯಕ್ರಮಗಳ ಮೂಲಕ ಎಸ್ ಎಂಇ ವಲಯವನ್ನು ಬಲವರ್ಧನೆಗೊಳಿಸುವ ]ಅದರ ನಿರಂತರ ಪ್ರಯತ್ನಗಳಿಗೆ ಪೂರಕವಾಗಿದೆ.

ಈ ಉಪಕ್ರಮದಡಿಯಲ್ಲಿ, ಭಾರತ ಸರ್ಕಾರವು ಎಸ್ ಜಿಎಫ್  ಚೌಕಟ್ಟಿನಡಿಯಲ್ಲಿ ಸ್ಥಾಪಿಸಲಾದ ಪರ್ಯಾಯ ಹೂಡಿಕೆ ನಿಧಿಗೆ (ಎಐಎಫ್ ಗೆ ) ಒಟ್ಟು 10,000 ಕೋಟಿ ರೂ.ಗಳ ಬದ್ಧತೆಯನ್ನು ಒದಗಿಸುತ್ತದೆ. ಉತ್ಪಾದನಾ ಉದ್ಯಮಗಳು ಸಾಮರ್ಥ್ಯವನ್ನು ವಿಸ್ತರಿಸಲು, ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚಿನ ಉತ್ಪಾದನೆಯನ್ನು ಸಾಧಿಸಲು ಅನುವು ಮಾಡಿಕೊಡುವ ಮೂಲಕ, ಎಸ್ ಜಿಎಫ್  ಪ್ರಮಾಣ, ಉತ್ಪಾದಕತೆಯನ್ನು ಸುಧಾರಿಸಲು ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಎರಡು ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಒಳಗೊಂಡಂತೆ ಕೈಗಾರಿಕಾ ಸಮೂಹಗಳಾದ್ಯಂತ ಹೂಡಿಕೆಗಳು ಸಮತೋಲಿತ ಪ್ರಾದೇಶಿಕ ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ, ಸ್ಥಳೀಯ ಪೂರೈಕೆ ಸರಣಿಗಳನ್ನು ಬಲಪಡಿಸುತ್ತವೆ ಮತ್ತು ಉತ್ತಮ-ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಕೇಂದ್ರ ಸರ್ಕಾರ ಈ ಉಪಕ್ರಮದೊಂದಿಗೆ, ಭಾರತದ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಹೊಸ ಪೀಳಿಗೆಯ ಸ್ಪರ್ಧಾತ್ಮಕ ಉದ್ಯಮಗಳನ್ನು ಬೆಳೆಸುವ ತನ್ನ ಬದ್ಧತೆ ಪುನರುಚ್ಚರಿಸುತ್ತದೆ. ಹೆಚ್ಚಿನ ಬೆಳವಣಿಗೆಯ ಎಸ್ ಎಂಇಗಳಲ್ಲಿ ಹೂಡಿಕೆಗೆ ವೇಗವರ್ಧನೆಯ ಮೂಲಕ, ನಿಧಿಯು ಚಾಂಪಿಯನ್‌ಗಳನ್ನು ರಚಿಸಲು, ನಾವೀನ್ಯತೆ-ನೇತೃತ್ವದ ಕೈಗಾರಿಕೀಕರಣ ವೃದ್ಧಿಸಲು ಮತ್ತು ದೇಶಾದ್ಯಂತ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮವು 2047 ರಲ್ಲಿ ವಿಕಸಿತ ಭಾರತದ ದೂರದೃಷ್ಟಿಯ ಸಾಕಾರ ನಿಟ್ಟಿನಲ್ಲಿ ಮುನ್ನಡೆಯಲು ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2319596) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Punjabi , Gujarati , Tamil , Telugu , Malayalam