ಪ್ರಧಾನ ಮಂತ್ರಿಯವರ ಕಛೇರಿ
ಉದಾತ್ತ ವ್ಯಕ್ತಿಯ ಗುಣಗಳನ್ನು ಪ್ರಮುಖವಾಗಿ ಪ್ರತಿಪಾದಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 OCT 2026 10:14AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೃದಯದ ಶುದ್ಧತೆ, ತ್ಯಾಗ ಮನೋಭಾವ, ಧೈರ್ಯ, ಸಂತೋಷ ಮತ್ತು ದುಃಖದಲ್ಲಿ ಸಮಚಿತ್ತತೆ, ದಕ್ಷತೆ, ವಾತ್ಸಲ್ಯ ಮತ್ತು ಸತ್ಯತೆಯು ಉದಾತ್ತ ವ್ಯಕ್ತಿಯ ಮತ್ತು ಅಸಾಧಾರಣ ವ್ಯಕ್ತಿತ್ವದ ನಿರ್ಣಾಯಕ ಗುಣಗಳಾಗಿವೆ ಪ್ರಮುಖವಾಗಿ ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-
“शुचित्वं त्यागिता शौर्यं सामान्यं सुखदुःखयोः।
दाक्षिण्यं चानुरक्तिश्च सत्यता च सुहृद्गुणाः॥”
ಈ ಸುಭಾಷಿತವು ಹೃದಯದ ಶುದ್ಧತೆ, ತ್ಯಾಗ ಮನೋಭಾವ, ಧೈರ್ಯ, ಸುಖ-ದುಃಖಗಳಲ್ಲಿ ಸಮಚಿತ್ತತೆ, ದಕ್ಷತೆ, ವಾತ್ಸಲ್ಯ ಮತ್ತು ಸತ್ಯಸಂಧತೆ - ಇವು ಕೇವಲ ಸಾಮಾನ್ಯ ಸ್ನೇಹಿತನ ಗುಣಗಳಲ್ಲ, ಬದಲಾಗಿ ಉದಾತ್ತ ಹೃದಯ ಮತ್ತು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯ ಪ್ರಮುಖ ಲಕ್ಷಣಗಳಾಗಿವೆ ಎಂದು ಸಾರುತ್ತದೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“शुचित्वं त्यागिता शौर्यं सामान्यं सुखदुःखयोः।
दाक्षिण्यं चानुरक्तिश्च सत्यता च सुहृद्गुणाः॥”
*****
(ಪ್ರಕಟಣೆ ಐ.ಡಿ.: 2319000)
ವಿಸಿಟರ್ ಕೌಂಟರ್ : 63
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam