ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ತಂಡದ ಗಾಲ್ಫ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಅದಿತಿ ಅಶೋಕ್, ಪ್ರಣವಿ ಶರತ್ ಅರಸ್ ಮತ್ತು ದೀಕ್ಷಾ ದಾಗರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 04 OCT 2026 9:53AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2026ರ ಏಷ್ಯನ್ ಗೇಮ್ಸ್‌ನ ಮಹಿಳಾ ತಂಡದ ಗಾಲ್ಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅದಿತಿ ಅಶೋಕ್, ಪ್ರಣವಿ ಶರತ್ ಉರ್ಸ್ ಮತ್ತು ದೀಕ್ಷಾ ದಾಗರ್ ಅವರನ್ನು ಅಭಿನಂದಿಸಿದ್ದಾರೆ.

ಅವರ ಈ ಯಶಸ್ಸು ಕ್ರೀಡೆಯ ಮೇಲಿರುವ ಅವರ ದೃಢ ಸಂಕಲ್ಪ ಮತ್ತು ಉತ್ಸಾಹವನ್ನು  ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಶ್ರೀ ಮೋದಿ ಅವರು ಅದಿತಿ ಅಶೋಕ್, ಪ್ರಣವಿ ಶರತ್ ಅರಸ್ ಮತ್ತು ದೀಕ್ಷಾ ದಾಗರ್ ಅವರಿಗೆ ನಿರಂತರ ಯಶಸ್ಸನ್ನು ಹಾರೈಸಿದರು ಹಾಗೂ ಮುಂದಿನ ದಿನಗಳಲ್ಲಿ ಅವರು ಯಶಸ್ಸಿನ ಹೊಸ ಶಿಖರಗಳನ್ನು ಏರಲಿ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರ ಕಚೇರಿಯು 'ಎಕ್ಸ್' ನಲ್ಲಿ ಹೀಗೆ ಬರೆದಿದೆ:

"ನಿನ್ನೆ ನಡೆದ 2026ರ ಏಷ್ಯನ್ ಗೇಮ್ಸ್‌ನ ಮಹಿಳಾ ತಂಡದ ಗಾಲ್ಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅದಿತಿ ಅಶೋಕ್, ಪ್ರಣವಿ ಶರತ್ ಅರಸ್ ಮತ್ತು ದೀಕ್ಷಾ ದಾಗರ್ ಅವರಿಗೆ ಅಭಿನಂದನೆಗಳು. ಈ ಯಶಸ್ಸು ಕ್ರೀಡೆಯ ಮೇಲಿರುವ ಅವರ ದೃಢ ಸಂಕಲ್ಪ ಮತ್ತು ಉತ್ಸಾಹವನ್ನು ತೋರಿಸುತ್ತದೆ. ಅವರು ಮುಂದಿನ ದಿನಗಳಲ್ಲಿ ಯಶಸ್ಸಿನ ಹೊಸ ಶಿಖರಗಳನ್ನು ಏರುತ್ತಲೇ ಇರಲಿ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2318838) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Malayalam