ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಧಾನಮಂತ್ರಿ ಅವರಿಂದ ಪುಷ್ಪ ನಮನ

ಪ್ರಕಟಣಾ ದಿನಾಂಕ: 02 OCT 2026 1:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮಾ ಗಾಂಧಿ ಹಾಗೂ ವಿಜಯ್‌ಘಾಟ್‌ನಲ್ಲಿ ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಸರಳತೆ, ಧೈರ್ಯ ಮತ್ತು ರಾಷ್ಟ್ರ ಸೇವೆಯ ಅವರ ಜೀವನವು ತಲೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ಮೋದಿ ಹೇಳಿದರು.

ಅವರ ಆದರ್ಶಗಳು ಮತ್ತು ಭಾರತದ ಪ್ರಗತಿಯ ಬಗೆಗಿನ ದೃಢ ಬದ್ಧತೆಯು ಯಾವಾಗಲೂ ದಾರಿದೀಪವಾಗಿ ಉಳಿಯುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು 'ಎಕ್ಸ್' ಪೋಸ್ಟ್‌ನಲ್ಲಿ ಹೀಗೆ ತಿಳಿಸಿದೆ:

"ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಮತ್ತು ವಿಜಯ್‌ಘಾಟ್‌ನಲ್ಲಿ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.

ಸರಳತೆ, ಧೈರ್ಯ ಮತ್ತು ರಾಷ್ಟ್ರ ಸೇವೆಯ ಅವರ ಜೀವನವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ.

ಅವರ ಆದರ್ಶಗಳು ಮತ್ತು ಭಾರತದ ಪ್ರಗತಿಯ ಬಗೆಗಿನ ದೃಢ ಬದ್ಧತೆಯು ನಮಗೆ ಯಾವಾಗಲೂ ದಾರಿದೀಪವಾಗಿ ಉಳಿಯುತ್ತದೆ."

 

*****


(ಪ್ರಕಟಣೆ ಐ.ಡಿ.: 2318150) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Gujarati , Tamil , Malayalam