ಪ್ರಧಾನ ಮಂತ್ರಿಯವರ ಕಛೇರಿ
ಮಹಾತ್ಮಾ ಗಾಂಧಿಯವರ ಸತ್ಯ, ಅಹಿಂಸೆ, ಸಹಾನುಭೂತಿ ಮತ್ತು ಸೇವೆಯ ಆದರ್ಶಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
02 OCT 2026 9:11AM by PIB Bengaluru
ಪೂಜ್ಯ ಬಾಪು ಅವರ ಸಂಪೂರ್ಣ ಜೀವನವು ಸತ್ಯ, ಅಹಿಂಸೆ, ಸಹಾನುಭೂತಿ ಮತ್ತು ಸೇವೆಯ ದಾರಿದೀಪವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರ ಜೀವನ ಮತ್ತು ಆದರ್ಶಗಳು ಪ್ರತಿ ಯುಗದಲ್ಲೂ ಮಾನವೀಯತೆಯ ಹಾದಿಯನ್ನು ಬೆಳಗಿಸುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತವನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ-
“अद्वेष्टा सर्वभूतानां मैत्रः करुण एव च।
निर्ममो निरहङ्कारः समदुःखसुखः क्षमी॥”
ಯಾವುದೇ ಜೀವಿಯ ಬಗ್ಗೆ ದ್ವೇಷವಿಲ್ಲದ, ಸ್ನೇಹ ಮತ್ತು ಕರುಣೆಯಿಂದ ಎಲ್ಲರನ್ನೂ ಅಪ್ಪಿಕೊಳ್ಳುವ, ಬಾಂಧವ್ಯ ಮತ್ತು ಅಹಂಕಾರದಿಂದ ಮುಕ್ತನಾಗಿರುವ, ಸಂತೋಷ ಮತ್ತು ದುಃಖದಲ್ಲಿ ಸಮಚಿತ್ತದಿಂದ ಇರುವ ಮತ್ತು ಯಾವಾಗಲೂ ಕ್ಷಮಿಸುವ ವ್ಯಕ್ತಿಯನ್ನು ಅತ್ಯುನ್ನತ ಅನ್ವೇಷಕನೆಂದು ಈ ಸುಭಾಷಿತವು ತಿಳಿಸುತ್ತದೆ.
Xನ ಪೋಸ್ಟ್‌ನಲ್ಲಿ, ಶ್ರೀ ಮೋದಿಯವರು;
“पूज्य बापू का संपूर्ण जीवन सत्य, अहिंसा, करुणा और सेवा का ऐसा प्रकाशस्तंभ है, जो हर युग में मानवता का मार्ग प्रशस्त करता रहेगा।
अद्वेष्टा सर्वभूतानां मैत्रः करुण एव च।
निर्ममो निरहङ्कारः समदुःखसुखः क्षमी॥”
*****
(ಪ್ರಕಟಣೆ ಐ.ಡಿ.: 2318121)
ವಿಸಿಟರ್ ಕೌಂಟರ್ : 8