ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಜಿ-20 ವಾಣಿಜ್ಯ ಸಚಿವರ ಸಭೆಯಲ್ಲಿ ಭಾಗವಹಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅಮೆರಿಕದ ಮಿಲ್ವಾಕೀಗೆ ಆಗಮನ


ಎನ್ ಎ ಎಂ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅಮೆರಿಕದ ಉತ್ಪಾದನಾ ಮತ್ತು ತಂತ್ರಜ್ಞಾನ ವಲಯದ ಪ್ರಮುಖರೊಂದಿಗೆ ಶ್ರೀ ಪಿಯೂಷ್ ಗೋಯಲ್ ಸಂವಾದ

ಪ್ರಕಟಣಾ ದಿನಾಂಕ: 30 SEP 2026 5:11PM by PIB Bengaluru

ಜಿ-20 ವಾಣಿಜ್ಯ ಸಚಿವರ ಸಭೆಯಲ್ಲಿ ಭಾಗವಹಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅಮೆರಿಕದ ಮಿಲ್ವಾಕೀಗೆ ಆಗಮಿಸಿದರು.  ಅವರನ್ನು ಚಿಕಾಗೋದ ಭಾರತೀಯ ಕಾನ್ಸುಲೇಟ್ ಜನರಲ್ ನ ಕಾನ್ಸುಲ್ ಜನರಲ್ ಡಾ. ಎಂ. ಆನಂದ್ ಪ್ರಕಾಶ್ ಅವರು ಸ್ವಾಗತಿಸಿದರು.

'ನ್ಯಾಷನಲ್ ಅಸೋಸಿಯೇಷನ್ ಆಫ್ ಮ್ಯಾನುಫ್ಯಾಕ್ಚರರ್ಸ್' (ಎನ್ ಎ ಎಂ) ಆಯೋಜಿಸಿದ್ದ ವಾಣಿಜ್ಯ ದುಂಡುಮೇಜಿನ ಸಭೆಯಲ್ಲಿ, ಶ್ರೀ ಪಿಯೂಷ್ ಗೋಯಲ್ ಅವರು ಅಮೆರಿಕದ ಪ್ರಮುಖ ಉತ್ಪಾದನಾ ಮತ್ತು ತಂತ್ರಜ್ಞಾನ ಕಂಪನಿಗಳ ಸಿಇಒಗಳು ಹಾಗೂ ಹಿರಿಯ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ  ನಡೆಸಿದರು. ಅಮೆರಿಕದ ಪ್ರಮುಖ ಉತ್ಪಾದನಾ ಕಂಪನಿಗಳ ಗಣನೀಯ ಪಾಲನ್ನು ಪ್ರತಿನಿಧಿಸುವ 'ನ್ಯಾಮ್' (ಎನ್ ಎ ಎಂ), ಸುಮಾರು 3 ಟ್ರಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಉತ್ಪಾದನಾ ವಲಯದ ಜಿಡಿಪಿಗೆ  ಗಮನಾರ್ಹ ಕೊಡುಗೆ ನೀಡುತ್ತದೆ.

ಈ ಸಂವಾದದ ವೇಳೆ, ಭಾರತ-ಅಮೆರಿಕ ಆರ್ಥಿಕ ಸಂಬಂಧವು ಸಾಂಪ್ರದಾಯಿಕ ವ್ಯಾಪಾರ ಸಂಬಂಧವನ್ನೂ ಮೀರಿ ಬೆಳೆಯುತ್ತಿದೆ ಎಂದು ಶ್ರೀ ಪಿಯೂಷ್ ಗೋಯಲ್ ಒತ್ತಿ ಹೇಳಿದರು. ಈ ಸಂಬಂಧವು ಈಗ ಹೂಡಿಕೆ, ಉತ್ಪಾದನೆ, ತಂತ್ರಜ್ಞಾನ, ನಾವೀನ್ಯತೆ, ದೃಢವಾದ ಪೂರೈಕೆ ಸರಪಳಿಗಳು ಮತ್ತು ಎರಡೂ ದೇಶಗಳಲ್ಲಿ ಉನ್ನತ ಮೌಲ್ಯದ ಸಾಮರ್ಥ್ಯಗಳ ಸೃಷ್ಟಿಯಂತಹ ಕ್ಷೇತ್ರಗಳನ್ನೂ ಒಳಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಸಿಇಒಗಳು ಮತ್ತು ಹಿರಿಯ ಕಾರ್ಯನಿರ್ವಾಹಕರು ಭಾರತದಲ್ಲಿ ಉದ್ಭವಿಸುತ್ತಿರುವ ಅವಕಾಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ ದೇಶದಲ್ಲಿ ಪಾಲುದಾರಿಕೆಯನ್ನು ವಿಸ್ತರಿಸುವ ಕುರಿತು ತಮ್ಮ ಕಂಪನಿಗಳ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಭಾರತದಲ್ಲಿ ಕಂಪನಿಗಳ ಕಾರ್ಯಾಚರಣೆ, ವಿಸ್ತರಣೆ ಮತ್ತು ಹೂಡಿಕೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಭಾರತ ಸರ್ಕಾರ ಸಿದ್ಧವಾಗಿದೆ ಎಂದು ಶ್ರೀ ಪಿಯೂಷ್ ಗೋಯಲ್ ತಿಳಿಸಿದರು.

ಶ್ರೀ ಪಿಯೂಷ್ ಗೋಯಲ್ ಅವರು 'ರಾಕ್ವೆಲ್ ಆಟೊಮೇಷನ್'ನ ಜಾಗತಿಕ ಪ್ರಧಾನ ಕಚೇರಿಯಲ್ಲಿ 'ಬಿಸಿನೆಸ್ ರೌಂಡ್ ಟೇಬಲ್' (ಬಿ ಆರ್ ಟಿ) ಮತ್ತು 'ನ್ಯಾಮ್' (ಎನ್ ಎ ಎಂ) ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲೂ ಭಾಗವಹಿಸಿದರು. ಈ ವೇಳೆ ಅವರು ಇತರ ಜಿ-20 ದೇಶಗಳ ವಾಣಿಜ್ಯ ಸಚಿವರು ಮತ್ತು ಅಮೆರಿಕದ ಕಂಪನಿಗಳ ಹಿರಿಯ ವಾಣಿಜ್ಯ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದರು.
 

*****


(ಪ್ರಕಟಣೆ ಐ.ಡಿ.: 2317193) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Gujarati , Telugu , Malayalam