ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್ ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಗುಲ್ವೀರ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 29 SEP 2026 9:34PM by PIB Bengaluru

ಏಷ್ಯನ್ ಗೇಮ್ಸ್‌ ನ ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಗುಲ್ವೀರ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಗುಲ್ವೀರ್ ಸಿಂಗ್ ಅವರಿಗೆ ಈ ಏಷ್ಯನ್ ಗೇಮ್ಸ್‌ ವಿಶೇಷವಾದುದಾಗಿದೆ ಎಂದು ಹೇಳಿರುವ ಪ್ರಧಾನಮಂತ್ರಿಯವರು, ಅವರು ಒಂದೇ ಕ್ರೀಡಾಕೂಟದ ವಿವಿಧ ಮೂರು ಸ್ಪರ್ಧೆಗಳಲ್ಲಿ ಜಯಿಸಿದ್ದು, ಇದು ಅವರ 'ಹ್ಯಾಟ್ರಿಕ್' ಸಾಧನೆ ಎಂದು ಬಣ್ಣಿಸಿದ್ದಾರೆ. 

ಸಿಂಗ್‌ ಅವರ ಸ್ಥಿರತೆ, ಸಹಿಷ್ಣುತೆ ಮತ್ತು ದೃಢನಿಶ್ಚಯವನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ ಹಾಗೂ ಭವಿಷ್ಯದಲ್ಲಿ ಇನ್ನೂ ಅಪಾರ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ. 

ಪ್ರಧಾನಮಂತ್ರಿಯವರ ಕಚೇರಿಯು 'ಎಕ್ಸ್' ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

“ಗುಲ್ವೀರ್ ಸಿಂಗ್‌ ಅವರಿಗೆ ಇದು ನಿಜಕ್ಕೂ ಒಂದು ವಿಶೇಷವಾದ ಏಷ್ಯನ್ ಗೇಮ್ಸ್ ಆಗಿದೆ!

ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಅವರಿಗೆ ಅಭಿನಂದನೆಗಳು. ಪದಕ ಗಳಿಕೆಯಲ್ಲಿ ಇದು ಅವರ ಗಮನಾರ್ಹ ಹ್ಯಾಟ್ರಿಕ್ ಸಾಧನೆ. ಅವರ ಸ್ಥಿರತೆ, ತಾಳ್ಮೆ ಮತ್ತು ದೃಢನಿಶ್ಚಯಗಳು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi

 

*****


(ಪ್ರಕಟಣೆ ಐ.ಡಿ.: 2316914) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , Assamese , Manipuri , Bengali , Punjabi , Gujarati , Tamil , Telugu , Malayalam