ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ಆನ್ಸಿ ಸೋಜನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 27 SEP 2026 8:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಉದ್ದ ಜಿಗಿತ (ಲಾಂಗ್ ಜಂಪ್)ದಲ್ಲಿ ಬೆಳ್ಳಿ ಪದಕ ಗೆದ್ದ ಆನ್ಸಿ ಸೋಜನ್ ಅವರನ್ನು ಅಭಿನಂದಿಸಿದ್ದಾರೆ.

ದೇಶಕ್ಕೆ ಅಪಾರ ಸಂತೋಷ ತಂದಿರುವ ಆನ್ಸಿ ಸೋಜನ್ ಅವರ ಸದೃಢವಾದ ಮತ್ತು ಉತ್ಸಾಹಭರಿತ ಸಾಧನೆ ಇದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಲೇ ಇರಬೇಕೆಂದು ಶ್ರೀ ನರೇಂದ್ರ ಮೋದಿ ಹಾರೈಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ತನ್ನ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ;

"ಏಷ್ಯನ್ ಕ್ರೀಡಾಕೂಟದ ಮಹಿಳಾ ಉದ್ದ ಜಿಗಿತ (ಲಾಂಗ್ ಜಂಪ್)ದಲ್ಲಿ ಬೆಳ್ಳಿ ಪದಕ ಗೆದ್ದ ಆನ್ಸಿ ಸೋಜನ್ ಅವರಿಗೆ ಅಭಿನಂದನೆಗಳು! ಅವರ ಸದೃಢವಾದ ಮತ್ತು ಉತ್ಸಾಹಭರಿತ ಸಾಧನೆಯು ರಾಷ್ಟ್ರಕ್ಕೆ ಅಪಾರ ಸಂತೋಷ ತಂದಿದೆ. ಮುಂಬರುವ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2315860) ವಿಸಿಟರ್ ಕೌಂಟರ್ : 10