ರೈಲ್ವೇ ಸಚಿವಾಲಯ
azadi ka amrit mahotsav

ವಡೋದರಾ ವಿಭಾಗದ ಅಲ್ಕಾಪುರಿಯಲ್ಲಿ ರಸ್ತೆ ಮೇಲ್ಸೇತುವೆ (ROB) ನಿರ್ಮಾಣಕ್ಕೆ ಭಾರತೀಯ ರೈಲ್ವೆ ಅನುಮೋದನೆ


ಅಲ್ಕಾಪುರಿ ರಸ್ತೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ಪರಿಹರಿಸಲು ನಾಲ್ಕು ಪಥದ ಪ್ರತ್ಯೇಕ ಮಟ್ಟದ (grade-separated) ರಸ್ತೆ ಸೌಲಭ್ಯ

ಪ್ರಕಟಣಾ ದಿನಾಂಕ: 24 SEP 2026 3:21PM by PIB Bengaluru

ಪಶ್ಚಿಮ ರೈಲ್ವೆಯ ವಡೋದರಾ ವಿಭಾಗದ ಅಲ್ಕಾಪುರಿಯಲ್ಲಿ, ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆಯ ಆಧಾರದ ಮೇಲೆ ಒಟ್ಟು ₹166.5 ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ಮೇಲ್ಸೇತುವೆ (ROB) ನಿರ್ಮಿಸಲು ಭಾರತೀಯ ರೈಲ್ವೆ ಅನುಮೋದನೆ ನೀಡಿದೆ.

ಈ ಯೋಜನೆಯ ಒಟ್ಟು ವೆಚ್ಚವನ್ನು ಭಾರತೀಯ ರೈಲ್ವೆ ಮತ್ತು ರಾಜ್ಯ ಸರ್ಕಾರವು ಸಮಾನವಾಗಿ ಹಂಚಿಕೊಳ್ಳಲಿವೆ. ಇದರಲ್ಲಿ ರೈಲ್ವೆಯ ಪಾಲು ಸುಮಾರು ₹83.2769 ಕೋಟಿ ಮತ್ತು ರಾಜ್ಯ ಸರ್ಕಾರದ ಪಾಲು ಕೂಡ ಸುಮಾರು ₹83.2769 ಕೋಟಿ ಆಗಿರಲಿದೆ.

ಅಸ್ತಿತ್ವದಲ್ಲಿರುವ ರಸ್ತೆ ಸಂಪರ್ಕವನ್ನು ಬಲಪಡಿಸಲು ನಾಲ್ಕು ಪಥದ ROB

ವಡೋದರಾ ರೈಲು ನಿಲ್ದಾಣದ ಸಮೀಪವಿರುವ ಅಸ್ತಿತ್ವದಲ್ಲಿರುವ ಅಲ್ಕಾಪುರಿ ರಸ್ತೆ ಕೆಳಸೇತುವೆ (RUB), ವಡೋದರಾ ನಗರದ ಅಲ್ಕಾಪುರಿ ಮತ್ತು ಕಲಾಗೋಡಾ ಪ್ರದೇಶಗಳ ನಡುವೆ ಪ್ರಮುಖ ಪೂರ್ವ-ಪಶ್ಚಿಮ ರಸ್ತೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಪ್ರಸ್ತುತ ಇರುವ RUB ಕೇವಲ 3.0 ಮೀಟರ್‌ಗಳಷ್ಟು ಲಂಬ ಅಂತರವನ್ನು (vertical clearance) ಹೊಂದಿದ್ದು, ಇದರಿಂದಾಗಿ ದೊಡ್ಡ ವಾಹನಗಳ ಸಂಚಾರಕ್ಕೆ ನಿರ್ಬಂಧಗಳು ಉಂಟಾಗುತ್ತವೆ ಮತ್ತು ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.

ಈ ಮಿತಿಗಳು ಸಂಚಾರ ದಟ್ಟಣೆ, ಕಾರ್ಯಾಚರಣೆಯ ತೊಂದರೆಗಳು ಮತ್ತು ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತವೆ. ನಾಲ್ಕು ಪಥದ ಪ್ರತ್ಯೇಕ ಮಟ್ಟದ ರಸ್ತೆ ಸೌಲಭ್ಯವು ಅಸ್ತಿತ್ವದಲ್ಲಿರುವ ರಸ್ತೆ ದಾಟುವಿಕೆಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ.

ಪ್ರಮುಖ ಸಾರಿಗೆ ಸೌಲಭ್ಯಗಳಿಗೆ ಉತ್ತಮ ಸಂಪರ್ಕ

ಈ ROB ರೈಲ್ವೆ ಕಾರ್ಯಾಚರಣೆಗೆ ಯಾವುದೇ ಅಡಚಣೆಯಿಲ್ಲದೆ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿ ದಾಟುವಿಕೆಯ ಸೌಲಭ್ಯವನ್ನು ಒದಗಿಸುತ್ತದೆ. ಇದು ವಡೋದರಾ ರೈಲು ನಿಲ್ದಾಣ, GSRTC ಬಸ್ ನಿಲ್ದಾಣ ಮತ್ತು ನಿರ್ಮಾಣ ಹಂತದಲ್ಲಿರುವ ಶರವೇಗದ ರೈಲು (ಬುಲೆಟ್ ರೈಲು) ನಿಲ್ದಾಣಕ್ಕೆ ಪ್ರಮುಖ ಸಂಪರ್ಕವನ್ನು ಕಲ್ಪಿಸುತ್ತದೆ.

ಹೆಚ್ಚುತ್ತಿರುವ ಸಂಚಾರ ಅಗತ್ಯಗಳ ನಿರ್ವಹಣೆ

ಸಂಚಾರ ಮೌಲ್ಯಮಾಪನದ ಪ್ರಕಾರ, ಗರಿಷ್ಠ ಸಂಚಾರದ ಸಮಯದಲ್ಲಿ (peak-hour) ಪ್ರತಿ ಗಂಟೆಗೆ 1,600 PCU (Passenger Car Unit) ಗಿಂತ ಹೆಚ್ಚಿನ ಸಂಚಾರ ದಟ್ಟಣೆ ಕಂಡುಬರುತ್ತದೆ; ಜೊತೆಗೆ ಸಂಚಾರ ಸಂಘರ್ಷದ ಅನೇಕ ಸ್ಥಳಗಳು ಮತ್ತು ಪಾದಚಾರಿಗಳಿಗೆ ಅಸಮರ್ಪಕ ಸೌಲಭ್ಯಗಳ ಸಮಸ್ಯೆಗಳಿವೆ. ಪರಿಣಾಮವಾಗಿ, ಈ ಪ್ರದೇಶದ ಪ್ರಸ್ತುತ ಮತ್ತು ಭವಿಷ್ಯದ ಸಂಚಾರ ಅಗತ್ಯಗಳನ್ನು ಪೂರೈಸಲು ಅಸ್ತಿತ್ವದಲ್ಲಿರುವ RUB ಅಸಮರ್ಪಕವಾಗಿದೆ.

ನಾಲ್ಕು ಪಥದ ಪ್ರತ್ಯೇಕ ಮಟ್ಟದ ಸೌಲಭ್ಯವು ಅಸ್ತಿತ್ವದಲ್ಲಿರುವ RUB ನ ಕಾರ್ಯನಿರ್ವಹಣೆಯ ಮಿತಿಗಳನ್ನು ಪರಿಹರಿಸುವುದಲ್ಲದೆ, ವಡೋದರದ ಈ ಪ್ರಮುಖ ಭಾಗದಲ್ಲಿ ರಸ್ತೆ ಸಂಪರ್ಕವನ್ನು ಬಲಪಡಿಸುತ್ತದೆ. ಈ ಯೋಜನೆಯು ವಡೋದರಾ ರೈಲು ನಿಲ್ದಾಣದ ಸುತ್ತಮುತ್ತಲಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೇ, ಹೆಚ್ಚು ಪರಿಣಾಮಕಾರಿ ದಾಟುವಿಕೆಯ ವ್ಯವಸ್ಥೆಯನ್ನು ಒದಗಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಅಲ್ಕಾಪುರಿ ಆರ್‌ಯುಬಿ (RUB) ಯ ಮಿತಿಗಳನ್ನು ನಿವಾರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2314387) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Telugu