ಪ್ರಧಾನ ಮಂತ್ರಿಯವರ ಕಛೇರಿ
ಸತ್ಯವಾದ, ಮಧುರವಾದ ಮತ್ತು ಹಿತಕರವಾದ ಮಾತಿನ ಮಹತ್ವ ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 SEP 2026 9:02AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಪೋಷಿಸುವ ನಿಟ್ಟಿನಲ್ಲಿ ಸತ್ಯವಾದ, ಮಧುರವಾದ ಮತ್ತು ಹಿತಕರವಾದ ಮಾತುಗಳನ್ನಾಡುವುದು ಹಾಗೂ ಮಾತಿನಲ್ಲಿ ಸಂಯಮವನ್ನು ಪಾಲಿಸುವುದರ ಮಹತ್ವವನ್ನು ಪ್ರಮುಖವಾಗಿ ಪ್ರತಿಪಾದಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಅವರು ತಮ್ಮ X ನಲ್ಲಿ ಹೀಗೆ ಬರೆದಿದ್ದಾರೆ:
"अनुद्वेगकरं वाक्यं सत्यं प्रियहितं च यत्।
स्वाध्यायाभ्यसनं चैव वाङ्मयं तप उच्यते॥"
ಯಾವುದೇ ವ್ಯಕ್ತಿ ಸದಾ ಯಾರ ಮನಸ್ಸಿಗೂ ಅಶಾಂತಿಯನ್ನು ಉಂಟುಮಾಡದಂತೆ, ಸತ್ಯವಾದ, ಮಧುರವಾದ ಮತ್ತು ಹಿತಕರವಾದ ಮಾತುಗಳನ್ನೇ ಆಡಬೇಕು. ಪವಿತ್ರ ಜ್ಞಾನದ ನಿರಂತರ ಅಧ್ಯಯನ ಮತ್ತು ಚಿಂತನೆಯು ವ್ಯಕ್ತಿಯ ಮಾತನ್ನು ಉನ್ನತಗೊಳಿಸುವುದಲ್ಲದೆ, ಅದಕ್ಕೊಂದು ಅರ್ಥಪೂರ್ಣ ಉದ್ದೇಶವನ್ನೂ ನೀಡುತ್ತದೆ. ಚಿಂತನಾಪೂರ್ವಕವಾಗಿ ಆಡಿದ ಮಾತು ಸಮಾಜದಾದ್ಯಂತ ಶಾಂತಿ, ಸಾಮರಸ್ಯ ಮತ್ತು ಸಕಾರಾತ್ಮಕತೆಯನ್ನು ಪಸರಿಸುತ್ತದೆ.
*****
(ಪ್ರಕಟಣೆ ಐ.ಡಿ.: 2314352)
ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam