ರೈಲ್ವೇ ಸಚಿವಾಲಯ
azadi ka amrit mahotsav

ರೈಲು ಸುರಕ್ಷತೆಯಲ್ಲಿ ಮಹತ್ವದ ಮೈಲಿಗಲ್ಲು: ದಕ್ಷಿಣ ಮಧ್ಯ ರೈಲ್ವೆಯಲ್ಲಿ ಮೊದಲ ಬಾರಿಗೆ 'ಕವಚ್ 4.0 ಅಳವಡಿಕೆ


ಹೈದರಾಬಾದ್ ವಿಭಾಗದ ಮಲ್ಕಾಜ್‌ಗಿರಿ-ಕಾಮರೆಡ್ಡಿ ಮಾರ್ಗದ 108 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ 'ಕವಚ್' ವ್ಯವಸ್ಥೆಯ ಆವೃತ್ತಿ 3.2 ರಿಂದ 4.0ಕ್ಕೆ ಉನ್ನತೀಕರಣ

ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಬಲವರ್ಧನೆಗೆ ಸುಧಾರಿತ ಸ್ಥಳ ನಿಖರತೆ, ದೊಡ್ಡ ಯಾರ್ಡ್‌ಗಳಲ್ಲಿ ಉತ್ತಮ ಸಿಗ್ನಲ್ ಮಾಹಿತಿ, ನಿಲ್ದಾಣದಿಂದ ನಿಲ್ದಾಣಕ್ಕೆ ಒ ಎಫ್ ಸಿ ಸಂಪರ್ಕ ಮತ್ತು ನೇರ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಂಪರ್ಕ ವ್ಯವಸ್ಥೆ ಅಳವಡಿಕೆ

ಪ್ರಕಟಣಾ ದಿನಾಂಕ: 23 SEP 2026 12:18PM by PIB Bengaluru

ಇದೇ ಮೊದಲ ಬಾರಿಗೆ ದಕ್ಷಿಣ ಮಧ್ಯ ರೈಲ್ವೆಯಲ್ಲಿ (ಎಸ್ ಸಿ ಆರ್) 'ಕವಚ್ ಆವೃತ್ತಿ 4.0' ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಭಾರತೀಯ ರೈಲ್ವೆಯು ರೈಲು ಸುರಕ್ಷತೆಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹೈದರಾಬಾದ್ ವಿಭಾಗದ ಮಲ್ಕಾಜ್‌ಗಿರಿ-ಕಾಮರೆಡ್ಡಿ ಮಾರ್ಗದ 108 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ 'ಕವಚ್ ಆವೃತ್ತಿ 3.2' ರಿಂದ 'ಆವೃತ್ತಿ 4.0' ಕ್ಕೆ ಉನ್ನತೀಕರಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ದಕ್ಷಿಣ ಮಧ್ಯ ರೈಲ್ವೆಯ 1,465 ಕಿಲೋಮೀಟರ್‌ಗಳಷ್ಟು ಮಾರ್ಗದಲ್ಲಿ 'ಕವಚ್ ಆವೃತ್ತಿ 3.2' ಅನ್ನು ಅಳವಡಿಸಿದಾಗ ಪಡೆದ ಅನುಭವದ ಆಧಾರದ ಮೇಲೆ, ಈ ಹೊಸ ಆವೃತ್ತಿಯಲ್ಲಿ ಹೆಚ್ಚಿನ ತಾಂತ್ರಿಕ ಸುಧಾರಣೆಗಳನ್ನು ಅಳವಡಿಸಲಾಗಿದೆ. 'ಕವಚ್ 4.0' ವ್ಯವಸ್ಥೆಯು ಹೆಚ್ಚಿನ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಸುರಕ್ಷಿತ ರೈಲು ಕಾರ್ಯಾಚರಣೆ ಒದಗಿಸುತ್ತದೆ; ಅದನ್ನು ಭಾರತೀಯ ರೈಲ್ವೆಯಾದ್ಯಂತ ವ್ಯಾಪಕವಾಗಿ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಭಾರತದ ವಿಭಿನ್ನ ರೈಲು ಜಾಲಕ್ಕಾಗಿ 'ಕವಚ್ 4.0' ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯ ಒಳಗೊಂಡಿದೆ

ಭಾರತೀಯ ರೈಲ್ವೆಯು 'ಕವಚ್ ಆವೃತ್ತಿ 4.0' ಅನ್ನು 'ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ' (ಎಟಿಪಿ) ಯಾಗಿ ಅಭಿವೃದ್ಧಿಪಡಿಸಿದೆ, ಪರೀಕ್ಷೆಗೆ ಒಳಪಡಿಸಿದೆ ಮತ್ತು ಈಗ ಅಳವಡಿಸುತ್ತಿದೆ. ಭಾರತೀಯ ರೈಲ್ವೆ ಜಾಲದ ವೈವಿಧ್ಯಮಯ ಕಾರ್ಯಾಚರಣೆ ಮತ್ತು ತಾಂತ್ರಿಕ ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ಪ್ರಮುಖ ಸುಧಾರಣೆಗಳನ್ನು ಈ ಹೊಸ ಆವೃತ್ತಿಯು ಒಳಗೊಂಡಿದೆ.

'ಕವಚ್ 4.0' ನಲ್ಲಿನ ಪ್ರಮುಖ ಸುಧಾರಣೆಗಳು ಈ ಕೆಳಗಿನಂತಿವೆ:

  • ಸ್ಥಳ ನಿಖರತೆ ಹೆಚ್ಚಿಸುವುದು, ರೈಲುಗಳ ನಿಖರವಾದ ಸ್ಥಾನೀಕರಣ ಸಕ್ರಿಯಗೊಳಿಸುವುದು.
  • ದೊಡ್ಡ ಯಾರ್ಡ್‌ಗಳಲ್ಲಿ ಸಿಗ್ನಲ್ ಅಂಶಗಳ ಸುಧಾರಿತ ಮಾಹಿತಿ, ರೈಲು ಕಾರ್ಯಾಚರಣೆಗಳ ಸಮಯದಲ್ಲಿ ಪರಿಸ್ಥಿತಿಯ ಅರಿವನ್ನು ಬಲಪಡಿಸುವುದು.
  • ಹೆಚ್ಚಿನ ಸಂವಹನ ಮತ್ತು ವ್ಯವಸ್ಥೆಯ ಏಕೀಕರಣಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ ಸಿ) ಮೂಲಕ ನಿಲ್ದಾಣದಿಂದ ನಿಲ್ದಾಣಕ್ಕೆ ಕವಚ್ ಇಂಟರ್ಫೇಸ್ ಅಳವಡಿಕೆ.
  • ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಗಳೊಂದಿಗೆ ನೇರ ಇಂಟರ್ಫೇಸ್, ಅಸ್ತಿತ್ವದಲ್ಲಿರುವ ಸಿಗ್ನಲಿಂಗ್ ಮೂಲಸೌಕರ್ಯದೊಂದಿಗೆ ಸುಧಾರಿತ ಏಕೀಕರಣ ಸಕ್ರಿಯಗೊಳಿಸುತ್ತದೆ.

ಈ ವರ್ಧನೆಗಳು ಕವಚ್ 4.0 ಅನ್ನು ದೇಶದ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣಾ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುತ್ತಿದೆ ಮತ್ತು ಭಾರತೀಯ ರೈಲ್ವೆಯಾದ್ಯಂತ ಅದರ ದೊಡ್ಡ ಪ್ರಮಾಣದ ನಿಯೋಜನೆಗೆ ಬಲವಾದ ತಾಂತ್ರಿಕ ಅಡಿಪಾಯವನ್ನು ಒದಗಿಸುತ್ತದೆ.

ಸ್ಥಳೀಯವಾಗಿ ಅಭಿವೃದ್ಧಿ ಮೂಲಕ ಕವಚ್ ರೈಲು ಸುರಕ್ಷತೆ ಹೆಚ್ಚಳ

ಕವಚ್  ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದೆ. ನಿಗದಿತ ವೇಗ ಮಿತಿಗಳಲ್ಲಿ ರೈಲುಗಳನ್ನು ನಿರ್ವಹಿಸುವಲ್ಲಿ ಈ ವ್ಯವಸ್ಥೆಯು ಲೋಕೋ ಪೈಲಟ್‌ಗೆ ಸಹಾಯ ಮಾಡುತ್ತದೆ ಮತ್ತು ಲೋಕೋ ಪೈಲಟ್ ಹಾಗೆ ಮಾಡಲು ವಿಫಲವಾದರೆ ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಹಾಕಬಹುದು.

ಅಪಾಯದಲ್ಲಿ ಸಿಗ್ನಲ್ ಹಾದುಹೋಗುವುದನ್ನು ತಡೆಯಲು (ಎಸ್ ಪಿ ಎ ಡಿ), ನಿರ್ಣಾಯಕ ಸಂದರ್ಭಗಳಲ್ಲಿ ರೈಲು ವೇಗವನ್ನು ನಿಯಂತ್ರಿಸಲು ಮತ್ತು ಡಿಕ್ಕಿ ಹೊಡೆಯುವ ಅಪಾಯವನ್ನು ಕಡಿಮೆ ಮಾಡಲು ಕವಚ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸುರಕ್ಷಿತ ರೈಲು ಕಾರ್ಯಾಚರಣೆಗಳನ್ನು ಸಹ ಈ ವ್ಯವಸ್ಥೆಯು ಬೆಂಬಲಿಸುತ್ತದೆ.

ಹೆಚ್ಚು ತಂತ್ರಜ್ಞಾನ-ತೀವ್ರ ಸುರಕ್ಷತಾ ವ್ಯವಸ್ಥೆಯಾಗಿ, ಕವಚ್ ಗೆ ಅತ್ಯುನ್ನತ ಶ್ರೇಣಿಯ ಸುರಕ್ಷತಾ ಪ್ರಮಾಣೀಕರಣ, ಸುರಕ್ಷತಾ ಸಮಗ್ರತೆ ಮಟ್ಟ -4 (ಎಸ್ ಐಎಲ್-4) ಅಗತ್ಯವಿದೆ.

ಕವಚ್ ನಿಯೋಜನೆಗೆ ಸಮಗ್ರ ಮೂಲಸೌಕರ್ಯ ಅಗತ್ಯ

ಕವಚ್ ಅನುಷ್ಠಾನವು ರೈಲ್ವೆ ವಿಭಾಗಗಳಲ್ಲಿ ಹಲವು ತಾಂತ್ರಿಕ ಮತ್ತು ಸಂವಹನ ಘಟಕಗಳ ನಿಯೋಜನೆಯನ್ನು ಒಳಗೊಂಡಿರುತ್ತದೆ. ಅವುಗಳೆಂದರೆ:

  • ನಿಲ್ದಾಣಗಳು ಮತ್ತು ಬ್ಲಾಕ್ ವಿಭಾಗಗಳಲ್ಲಿ ಕವಚ್ ಸ್ಟೇಷನ್  ಸ್ಥಾಪನೆ.
  • ಹಳಿಯ ಉದ್ದಕ್ಕೂ ಅರ್ ಎಫ್ ಐಡಿ ಟ್ಯಾಗ್‌ಗಳ ಸ್ಥಾಪನೆ.
  • ವಿಭಾಗದಾದ್ಯಂತ ದೂರಸಂಪರ್ಕ ಗೋಪುರಗಳ ಸ್ಥಾಪನೆ.
  • ಹಳಿಯುದ್ದಕ್ಕೂ ಆಪ್ಟಿಕಲ್ ಫೈಬರ್ ಕೇಬಲ್ ಹಾಕುವುದು.
  • ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಲೋಕೋಮೋಟಿವ್‌ಗಳಲ್ಲಿ ಲೋಕೋ ಕವಚ್ ಒದಗಿಸುವುದು.

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕವಚ್ 4.0 ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದು ಸ್ಥಳೀಯ ರೈಲ್ವೆ ಸುರಕ್ಷತಾ ತಂತ್ರಜ್ಞಾನ ಬಲಪಡಿಸುವ ಮತ್ತು ಭಾರತೀಯ ರೈಲ್ವೆ ಜಾಲದಾದ್ಯಂತ ಸುಧಾರಿತ ಸ್ವಯಂಚಾಲಿತ ರೈಲು ರಕ್ಷಣಾ ಸಾಮರ್ಥ್ಯಗಳನ್ನು ವಿಸ್ತರಿಸುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2313867) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati