ಆಯುಷ್
11ನೇ ಆಯುರ್ವೇದ ದಿನಾಚರಣೆಯ ಮುನ್ನಾದಿನದಂದು ದೇಶಾದ್ಯಂತ ಸಾರ್ವಜನಿಕರ ಭಾಗವಹಿಸುವಿಕೆ ಚುರುಕುಗೊಂಡಿದೆ
30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9,700ಕ್ಕೂ ಹೆಚ್ಚು ಚಟುವಟಿಕೆಗಳು ವರದಿ; 89 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಆಯುರ್ವೇದಕ್ಕೆ ತಮ್ಮ ಬೆಂಬಲದ ಪ್ರತಿಜ್ಞೆ
3.6 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರ ನೋಂದಣಿ; ಅನೇಕ ದೇಶಗಳಿಂದ ಕೂಡ ಚಟುವಟಿಕೆಗಳ ಬಗ್ಗೆ ವರದಿ
ಪ್ರಕಟಣಾ ದಿನಾಂಕ:
21 SEP 2026 3:33PM by PIB Bengaluru
ಸೆಪ್ಟೆಂಬರ್ 23 ರಂದು ದೇಶವು 11ನೇ ಆಯುರ್ವೇದ ದಿನವನ್ನು ಆಚರಿಸಲು ಸಿದ್ಧವಾಗುತ್ತಿರುವಂತೆ, "ಆರೋಗ್ಯಕರ ನಾಳೆಗಾಗಿ ಆಯುರ್ವೇದ" ಎಂಬ ವಿಷಯದ ಅಡಿಯಲ್ಲಿ ದೇಶಾದ್ಯಂತ ಸಾರ್ವಜನಿಕರ ಭಾಗವಹಿಸುವಿಕೆ ತೀವ್ರಗೊಂಡಿದೆ. ಆಯುರ್ವೇದ ದಿನದ ಅಧಿಕೃತ ಜಾಲತಾಣದ ಮೂಲಕ 3.6 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರು ನೋಂದಾಯಿಸಿಕೊಂಡಿದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9,700ಕ್ಕೂ ಹೆಚ್ಚು ಚಟುವಟಿಕೆಗಳು ವರದಿಯಾಗಿವೆ. ʻಆಯುರ್ವೇದ ದಿನ 2026ʼರ ಮೈಕ್ರೋಸೈಟ್ ಮೂಲಕ ಸುಮಾರು 89.3 ಲಕ್ಷ ನಾಗರಿಕರು ಆಯುರ್ವೇದಕ್ಕೆ ತಮ್ಮ ಬೆಂಬಲದ ಪ್ರತಿಜ್ಞೆ ಮಾಡಿದ್ದಾರೆ.
ayurvedaday.org.in ನಲ್ಲಿ ಲಭ್ಯವಿರುವ ʻಆಯುರ್ವೇದ ದಿನ 2026ʼ ಮೈಕ್ರೋಸೈಟ್, ದೇಶಾದ್ಯಂತ ನಡೆಯುತ್ತಿರುವ ಆಚರಣೆಗಳ ಭಾಗವಾಗಿ ಆಯೋಜಿಸಲಾಗುತ್ತಿರುವ ಚಟುವಟಿಕೆಗಳ ನಾಗರಿಕ ಭಾಗವಹಿಸುವಿಕೆ, ನೋಂದಣಿ ಮತ್ತು ವರದಿ ಮಾಡುವಿಕೆಗೆ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಸೇರಿದಂತೆ ವಿವಿಧ ರಾಜ್ಯಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯನ್ನು ದಾಖಲಿಸಿದ್ದು, ದೇಶಾದ್ಯಂತದ ಆಚರಣೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಕ ತೊಡಗಿಸಿಕೊಳ್ಳುವಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.
ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿವಿಧ ಶ್ರೇಣಿಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಆಯುರ್ವೇದ ಜಾಗೃತಿ ಕಾರ್ಯಕ್ರಮಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ಆಯುರ್ವೇದ ಆರೋಗ್ಯ ಮತ್ತು ಕ್ಷೇಮ ಶಿಬಿರಗಳು ವರದಿಯಾಗುತ್ತಿರುವ ಪ್ರಮುಖ ಚಟುವಟಿಕೆಗಳಲ್ಲಿ ಸೇರಿವೆ.
ಇತರ ಚಟುವಟಿಕೆಗಳಲ್ಲಿ ಔಷಧೀಯ ಸಸ್ಯ ನೆಡುವಿಕೆ ಮತ್ತು ಸಂರಕ್ಷಣಾ ಅಭಿಯಾನಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಆಯುರ್ವೇದ ಜಾಗೃತಿ ಕಾರ್ಯಕ್ರಮಗಳು, ಯುವಜನರ ತೊಡಗಿಸಿಕೊಳ್ಳುವಿಕೆಯ ಉಪಕ್ರಮಗಳು, ಆಯುರ್ವೇದ ಆಹಾರ ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸುವ ಅಭಿಯಾನಗಳು, ನಾಗರಿಕ ಪ್ರತಿಜ್ಞಾ ಅಭಿಯಾನಗಳು ಮತ್ತು ಆಯುರ್ವೇದ ರಸಪ್ರಶ್ನೆಗಳು ಸೇರಿವೆ.
ಈ ಉಪಕ್ರಮಗಳು ಜಾಗೃತಿ, ಕ್ಷೇಮ ಮತ್ತು ತೊಡಗಿಸಿಕೊಳ್ಳುವಿಕೆಯ ಚಟುವಟಿಕೆಗಳ ಮೂಲಕ ನಾಗರಿಕರು, ಶಿಕ್ಷಣ ಸಂಸ್ಥೆಗಳು, ಸಮುದಾಯಗಳು ಮತ್ತು ವಿವಿಧ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುತ್ತಿದ್ದು, ಆಯುರ್ವೇದ ದಿನದ ಆಚರಣೆಯಲ್ಲಿ ವ್ಯಾಪಕ ಸಾರ್ವಜನಿಕ ಭಾಗವಹಿಸುವಿಕೆಗೆ ಅವಕಾಶಗಳನ್ನು ಕಲ್ಪಿಸುತ್ತಿದೆ.
11ನೇ ಆಯುರ್ವೇದ ದಿನ 2026 ಭಾರತದ ಗಡಿಯನ್ನು ದಾಟಿ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಗಿದ್ದು, 10 ದೇಶಗಳು ಮತ್ತು ಪ್ರದೇಶಗಳಿಂದ 1,900ಕ್ಕೂ ಹೆಚ್ಚು ಭಾಗವಹಿಸುವವರನ್ನು ಒಳಗೊಂಡ ಚಟುವಟಿಕೆಗಳು ವರದಿಯಾಗಿವೆ. ಭಾಗವಹಿಸುತ್ತಿರುವ ದೇಶಗಳು ಮತ್ತು ಪ್ರದೇಶಗಳಲ್ಲಿ ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿ, ಯುನೈಟೆಡ್ ಕಿಂಗ್ ಡಮ್, ಅಫ್ಘಾನಿಸ್ತಾನ್, ಬಲ್ಗೇರಿಯಾ, ಸ್ಪೇನ್, ಅಲ್ಜೀರಿಯಾ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಅಮೆರಿಕ ಸೇರಿವೆ.
ಅಂತಾರಾಷ್ಟ್ರೀಯ ಭಾಗವಹಿಸುವಿಕೆಯು ಆಯುರ್ವೇದ ದಿನದ ಬೆಳೆಯುತ್ತಿರುವ ವ್ಯಾಪ್ತಿಯನ್ನು ಹಾಗೂ ಆಯುರ್ವೇದ ಜಾಗೃತಿ, ಕ್ಷೇಮ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಕೇಂದ್ರಿತ ಚಟುವಟಿಕೆಗಳಲ್ಲಿ ಭಾರತದಿಂದ ಹೊರಗಿನ ಸಮುದಾಯಗಳು, ಸಂಸ್ಥೆಗಳು ಮತ್ತು ಒಕ್ಕೂಟಗಳ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.


*****
(ಪ್ರಕಟಣೆ ಐ.ಡಿ.: 2313070)
ವಿಸಿಟರ್ ಕೌಂಟರ್ : 17