ಪ್ರಧಾನ ಮಂತ್ರಿಯವರ ಕಛೇರಿ
ತಂತ್ರಜ್ಞಾನ, ವಿಶ್ವಾಸ ಮತ್ತು ನಾಗರಿಕರನ್ನು ತೊಡಗಿಸಿಕೊಳ್ಳುವಿಕೆಯ ಮೇಲೆ ಕೇಂದ್ರೀಕೃತವಾದ ಆಡಳಿತ ಮಾದರಿ ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
17 SEP 2026 1:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೀತಿ ಆಯೋಗದ ಸದಸ್ಯರಾದ ಶ್ರೀ ರಾಜೀವ್ ಗೌಬಾ ಅವರ ಲೇಖನವನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಧಾನಮಂತ್ರಿಯವರ ಆಡಳಿತ ಮಾದರಿಯು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ತಂತ್ರಜ್ಞಾನ, ವಿಶ್ವಾಸ ಮತ್ತು ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಹೇಗೆ ಕೇಂದ್ರವಾಗಿರಿಸಿಕೊಂಡಿದೆ ಎಂಬುದನ್ನು ಪ್ರಮುಖವಾಗಿ ಪ್ರತಿಪಾದಿಸುತ್ತದೆ.
ಡಿಜಿಟಲ್ ವ್ಯವಸ್ಥೆಗಳು, ನೇರ ನಗದು ವರ್ಗಾವಣೆಗಳು, ಸರಳ ನಿಯಮಗಳು ಮತ್ತು ಪಾರದರ್ಶಕ ಖರೀದಿ ವ್ಯವಸ್ಥೆಯು, ದಕ್ಷತೆ ಮತ್ತು ಲಭ್ಯತೆಯನ್ನು ಹೇಗೆ ಸುಧಾರಿಸುತ್ತಿದೆ, ಆಡಳಿತವನ್ನು ಭಾರತದ ಬೆಳವಣಿಗೆಗೆ ಆರ್ಥಿಕ ಆಸ್ತಿಯನ್ನಾಗಿ ಮಾಡುತ್ತಿದೆ ಎಂಬುದನ್ನು ಶ್ರೀ ಗೌಬಾ ತಮ್ಮ ಲೇಖನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ ತನ್ನ 'X' ಪೋಸ್ಟ್ ನಲ್ಲಿ ಹೀಗೆ ಹೇಳಿದೆ;
"ನೀತಿ ಆಯೋಗದ ಸದಸ್ಯರಾದ ಶ್ರೀ ರಾಜೀವ್ ಗೌಬಾ, ಪ್ರಧಾನ ಮಂತ್ರಿ @narendramodi ಅವರ ಆಡಳಿತ ಮಾದರಿಯು ತಂತ್ರಜ್ಞಾನ, ವಿಶ್ವಾಸ ಮತ್ತು ನಾಗರಿಕರ ತೊಡಗಿಸಿಕೊಳ್ಳುವಿಕೆ ಮೂಲಕ ದೇಶದಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮಗಳನ್ನು ತಲುಪಿಸುವ ಕೇಂದ್ರವನ್ನಾಗಿ ಮಾಡುತ್ತಿದೆ.
ಡಿಜಿಟಲ್ ವ್ಯವಸ್ಥೆಗಳು, ನೇರ ನಗದು ವರ್ಗಾವಣೆಗಳು, ಸರಳ ನಿಯಮಗಳು ಮತ್ತು ಪಾರದರ್ಶಕ ಖರೀದಿ, ದಕ್ಷತೆ ಮತ್ತು ಲಭ್ಯತೆಯನ್ನು ಹೇಗೆ ಸುಧಾರಿಸುತ್ತಿದೆ, ಆಡಳಿತವನ್ನು ಭಾರತದ ಬೆಳವಣಿಗೆಗೆ ಆರ್ಥಿಕ ಆಸ್ತಿಯನ್ನಾಗಿ ಮಾಡುತ್ತದೆ ಎಂಬುದನ್ನು ಅವರು ಲೇಖನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.’’
*****
(ಪ್ರಕಟಣೆ ಐ.ಡಿ.: 2311711)
ವಿಸಿಟರ್ ಕೌಂಟರ್ : 6