ರಾಷ್ಟ್ರಪತಿಗಳ ಕಾರ್ಯಾಲಯ
ಗಣೇಶ ಚತುರ್ಥಿಯ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರಿಂದ ಶುಭ ಹಾರೈಕೆ
ಪ್ರಕಟಣಾ ದಿನಾಂಕ:
13 SEP 2026 4:27PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗಣೇಶ ಚತುರ್ಥಿಯ ಮುನ್ನಾದಿನದ ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:
“ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ, ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹಾರ್ದಿಕ ಶುಭಾಶಯಗಳು ಮತ್ತು ಶುಭ ಹಾರೈಕೆಗಳು.
ಭಗವಂತ ಗಣೇಶನು ಜ್ಞಾನ, ಸಮೃದ್ಧಿ ಮತ್ತು ಶುಭಾರಂಭಗಳ ಸಂಕೇತ. ಗಣೇಶ ಚತುರ್ಥಿ ಹಬ್ಬವು ನಮ್ಮೆಲ್ಲರ ಜೀವನದಲ್ಲಿ ಚೈತನ್ಯ, ಜ್ಞಾನ ಮತ್ತು ಸಕಾರಾತ್ಮಕತೆಯನ್ನು ತರಲಿ. ಜೀವನದಲ್ಲಿ ಹೊಸ ಸಂಕಲ್ಪಗಳೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಈ ಪವಿತ್ರ ಹಬ್ಬವು ನಮಗೆ ಸ್ಫೂರ್ತಿ ನೀಡಲಿದೆ.
ಭಗವಾನ್ ಗಣೇಶನು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾವೆಲ್ಲರೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರತಿಜ್ಞೆ ಮಾಡೋಣ.”
*****
(ಪ್ರಕಟಣೆ ಐ.ಡಿ.: 2309840)
ವಿಸಿಟರ್ ಕೌಂಟರ್ : 5