ಪ್ರಧಾನ ಮಂತ್ರಿಯವರ ಕಛೇರಿ
ವಡೋದರಾದಲ್ಲಿ ಪ್ರಮುಖ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದ ಆಯ್ದ ಭಾಗ ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 SEP 2026 5:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಡೆದ ಪ್ರಮುಖ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣದ ಕೆಲವು ಭಾಗವನ್ನು ಹಂಚಿಕೊಂಡಿದ್ದಾರೆ.
ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ :
“2,800ಕ್ಕೂ ಹೆಚ್ಚು ಕಿಮೀ ಉದ್ದದ ಪ್ರತ್ಯೇಕ ಸರಕು ಸಾಗಣೆ ಕಾರಿಡಾರ್ ಈಗ ಪೂರ್ಣ.
ಇದು ಗತಿ ಶಕ್ತಿ ಮತ್ತು ಭಾರತದ ಸರಕು ಸಾಗಣೆಯ ರೂಪಾಂತರ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು.”
"ಭಾರತ ನಿರ್ಮಿಸುತ್ತಿದೆ:
ಚಿಪ್ (ವಿದ್ಯುನ್ಮಾನ ಸಾಧನ) ಗಳಿಂದ ಹಿಡಿದು ಶಿಪ್ (ಹಡಗು) ಗಳವರೆಗೆ... ಸ್ಥಳೀಯವಾಗಿ ಸಂಪೂರ್ಣ ಮೌಲ್ಯ ಸರಪಳಿ.
ಸೌರಶಕ್ತಿಯಿಂದ ಪರಮಾಣು ಶಕ್ತಿಯವರೆಗೆ... ಭವಿಷ್ಯದ ಎಐ, ದತ್ತಾಂಶ ಕೇಂದ್ರಗಳು ಮತ್ತು ಕೈಗಾರಿಕೆಗಳಿಗೆ ಇಂಧನ ಪರಿಸರ ವ್ಯವಸ್ಥೆ."
*****
(ಪ್ರಕಟಣೆ ಐ.ಡಿ.: 2308081)
ವಿಸಿಟರ್ ಕೌಂಟರ್ : 9