ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಸೆಪ್ಟೆಂಬರ್ 9ರಂದು ವಾರಣಾಸಿಯಲ್ಲಿ 9ನೇ ‘ರಾಷ್ಟ್ರೀಯ ಪೋಷಣ್ ಮಾಸಾಚರಣೆ-2026’ಕ್ಕೆ ಚಾಲನೆ ನೀಡಲಿದ್ದಾರೆ


ಪೌಷ್ಠಿಕಾಂಶ ಮತ್ತು ಬಾಲ್ಯದ ಆರಂಭಿಕ ಬೆಳವಣಿಗೆಗಾಗಿ, ಅಂಗನವಾಡಿಗಳನ್ನು ಸಮುದಾಯ ನೇತೃತ್ವದ ಕ್ರಿಯೆಯ ಕೇಂದ್ರಭಾಗದಲ್ಲಿರಿಸುವ ನಿಟ್ಟನಿಲ್ಲಿ "ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ" ವಿಷಯಾಧಾರಿತವಾದ ಉಪಕ್ರಮ

ಸಮುದಾಯದ ಮಾಲೀಕತ್ವ ಮತ್ತು ಹೊಣೆಗಾರಿಕೆಯನ್ನು ಪೋಷಣ್ ಮಾಸಾಚರಣೆಯ ಪ್ರಮುಖ ಅಂಶವಾಗಿ ಗುರುತಿಸಲಾಗಿದೆ

ಇತ್ತೀಚೆಗೆ ಹೊರಡಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ನಿರ್ವಹಣಾ ಸಮಿತಿಗಳ ರಚನೆ ಮತ್ತು ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಈ ಧ್ಯೇಯವಾಕ್ಯವು ಪ್ರೇರೇಪಿಸುತ್ತದೆ

ಈ ವರ್ಷದ ಅಭಿಯಾನವು ಪರಿಷ್ಕೃತ ‘ಎಸ್‌ಎನ್‌ಪಿ’  ಮಾರ್ಗಸೂಚಿಗಳಿಂದ ವೇಗವನ್ನು ಪಡೆದುಕೊಂಡಿದೆ, ಇದು ಮೊದಲ ಬಾರಿಗೆ ಬಿಸಿ ಬೇಯಿಸಿದ ಊಟವನ್ನು ವ್ಯಾಖ್ಯಾನಿಸುತ್ತದೆ ಮತ್ತು ಎಸ್‌ಎನ್‌ಪಿ ಮೆನು ಬೋರ್ಡ್‌ಗಳನ್ನು ಹಾಗೂ ಅಂಗನವಾಡಿ ನಿರ್ವಹಣಾ ಸಮಿತಿಗಳ ಸ್ಥಾಪನೆಗೆ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುತ್ತದೆ

ಪೋಷಣ್ ಮಾಸಾಚರಣೆ-2026, ಒಂದು ದಶಕದಿಂದ ತಾಯಂದಿರ ಪೌಷ್ಟಿಕಾಂಶ ಮತ್ತು ಆರೋಗ್ಯ-ಕಾಳಜಿಯ ನಡವಳಿಕೆಯನ್ನು ಬೆಂಬಲಿಸುತ್ತಿರುವ ಪ್ರಮುಖ ಮಾತೃತ್ವ ಲಾಭದ ಕಾರ್ಯಕ್ರಮವಾದ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ಯ ಹತ್ತು ವರ್ಷಗಳನ್ನು ಆಚರಿಸಲಿದೆ

‘ವಿಕಸಿತ ಭಾರತ 2047’ರ ಬುನಾದಿಯಾಗಿ 'ಸುಪೋಷಿತ್ ಭಾರತ್' ದೃಷ್ಟಿಕೋನವನ್ನು ಮುನ್ನಡೆಸಲು ಈ ತಿಂಗಳ ಕಾಲದ ಅಭಿಯಾನ ಹಮ್ಮಿಕೊಳ್ಳಲಾಗಿದೆ

ಪ್ರಕಟಣಾ ದಿನಾಂಕ: 07 SEP 2026 10:46AM by PIB Bengaluru

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸೆಪ್ಟೆಂಬರ್ 9, 2026 ರಂದು ಉತ್ತರ ಪ್ರದೇಶದ ವಾರಣಾಸಿಯ ‘ರುದ್ರಾಕ್ಷ್ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ’ದಲ್ಲಿ 9ನೇ ‘ರಾಷ್ಟ್ರೀಯ ಪೋಷಣ್ ಮಾಸಾಚರಣೆ 2026’ ಅನ್ನು ಉದ್ಘಾಟಿಸಲಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಮಹಿಳಾ ಕಲ್ಯಾಣ, ಮಕ್ಕಳ ಅಭಿವೃದ್ಧಿ ಮತ್ತು ಪೌಷ್ಟಿಕಾಂಶ ಖಾತೆ ಸಚಿವರಾದ ಶ್ರೀಮತಿ ಬೇಬಿ ರಾಣಿ ಮೌರ್ಯ ಅವರ ಘನ ಉಪಸ್ಥಿತಿಯಲ್ಲಿ ಈ ತಿಂಗಳ-ಪೂರ್ತಿ ನಡೆಯುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಭಾರತ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಗಣ್ಯರು, ಅಭಿವೃದ್ಧಿ ಪಾಲುದಾರರು, ಮುಂಚೂಣಿ ಕಾರ್ಯಕರ್ತರು ಮತ್ತು ಫಲಾನುಭವಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

2047ರ ವೇಳೆಗೆ ‘ವಿಕಸಿತ ಭಾರತ’ದ ಅಡಿಪಾಯವಾಗಿ 'ಸುಪೋಷಿತ್ ಭಾರತ್' ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನದ ಮಾರ್ಗದರ್ಶನದಲ್ಲಿ, ಪೌಷ್ಟಿಕಾಂಶವನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರದಲ್ಲಿ ಇರಿಸಲು 2018ರಲ್ಲಿ ‘ಪೋಷಣ್ ಅಭಿಯಾನ’ವನ್ನು ಪ್ರಾರಂಭಿಸಲಾಯಿತು. ಪ್ರತಿ ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಪೋಷಣ್ ಮಾಸಾಚರಣೆಯು ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಪೌಷ್ಟಿಕಾಂಶ, ಆರೋಗ್ಯ ಮತ್ತು ಕಾಳಜಿಯ ನಡವಳಿಕೆಗಳನ್ನು ಬಲಪಡಿಸಲು ಸಮುದಾಯಗಳನ್ನು ಸಜ್ಜುಗೊಳಿಸುವ ಜನಾಂದೋಲನವಾಗಿ ಬೆಳೆದಿದೆ. 9 ನೇ ಆವೃತ್ತಿಯು "ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ" ಎಂಬ ಧ್ಯೇಯವಾಕ್ಯದಡಿ ಈ ಪ್ರಯಾಣವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ದೇಶದ ಮಕ್ಕಳ ಪೋಷಣೆ, ಆರೋಗ್ಯ, ಆರೈಕೆ ಮತ್ತು ಆರಂಭಿಕ ಕಲಿಕೆಯ ಮೊದಲ ಕೇಂದ್ರವಾಗಿ ಅಂಗನವಾಡಿ ಕೇಂದ್ರದ ಹಂಚಿಕೆಯ ಮಾಲೀಕತ್ವವನ್ನು ತೆಗೆದುಕೊಳ್ಳುವಂತೆ ಪ್ರತಿಯೊಬ್ಬ ನಾಗರಿಕರಿಗೂ ಇದು ಕರೆ ನೀಡುತ್ತದೆ.

ಈ ವರ್ಷದ ಅಭಿಯಾನವು 'ಮಿಷನ್ ಸಕ್ಷಮ್ ಅಂಗನವಾಡಿ’ ಮತ್ತು ‘ಪೋಷಣ್ 2.0' ಅಡಿಯಲ್ಲಿ ಪರಿಷ್ಕೃತ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ (ಎಸ್‌ಎನ್‌ಪಿ) ಮಾರ್ಗಸೂಚಿಗಳಿಂದ ವೇಗವನ್ನು ಪಡೆದುಕೊಂಡಿದೆ. ಇದು ಮೊದಲ ಬಾರಿಗೆ ಬೇಯಿಸಿದ ಬಿಸಿ ಊಟವನ್ನು ವ್ಯಾಖ್ಯಾನಿಸುತ್ತದೆ ಮತ್ತು ‘ಎಸ್‌ಎನ್‌ಪಿ’ ಮೆನು ಬೋರ್ಡ್‌ಗಳನ್ನು ಹಾಗೂ ಅಂಗನವಾಡಿ ನಿರ್ವಹಣಾ ಸಮಿತಿಗಳ ಸ್ಥಾಪನೆಯ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುತ್ತದೆ. ಈ ಸುಧಾರಣೆಗಳ ಆಧಾರದ ಮೇಲೆ, ‘ಪೋಷಣ್ ಮಾಸಾಚರಣೆ-2026’ ಐದು ಪರಸ್ಪರ ಬಲಪಡಿಸುವ ವಿಷಯಗಳನ್ನು ಆಧರಿಸಿರುತ್ತದೆ.

ಮೊದಲ ವಿಷಯವಾದ ಆಹಾರದ ವೈವಿಧ್ಯತೆ ಮತ್ತು ಸಾಕಷ್ಟು ಪ್ರೋಟೀನ್ ಭಾಗವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲಾ ಆಹಾರ ಗುಂಪುಗಳ ಕೈಗೆಟಕುವ, ಸ್ಥಳೀಯ ಪದಾರ್ಥಗಳನ್ನು ಬಳಸಿಕೊಂಡು ಆರೋಗ್ಯಕರ ಪಾಕವಿಧಾನಗಳ ನೇರ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವುದ. ಇದೇವೇಳೆ, ‘ಪೋಷಣ್ ಮೇಳ’ಗಳು ಮತ್ತು 'ಪ್ರೋಟೀನ್-ಭರಿತ ಆಹಾರಗಳ' ಅಭಿಯಾನವು ಸಮತೋಲಿತ ಆಹಾರ ಮತ್ತು ದೈನಂದಿನ ಊಟಕ್ಕೆ ಸಸ್ಯ- ಮತ್ತು ಪ್ರಾಣಿ-ಆಧಾರಿತ ಪ್ರೋಟೀನ್ ಅನ್ನು ಸೇರಿಸುವ ಪ್ರಾಯೋಗಿಕ ವಿಧಾನಗಳನ್ನು ಉತ್ತೇಜಿಸುತ್ತದೆ.

ಇದಕ್ಕೆ ನಿಕಟವಾಗಿ ಬೆಸೆದುಕೊಂಡಿರುವ ಎರಡನೇ ವಿಷಯವಾದ - ಅಂಗನವಾಡಿ ಕೇಂದ್ರಗಳಲ್ಲಿ ತಾಜಾ ಬಿಸಿ ಬೇಯಿಸಿದ ಊಟವು ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಋತುಮಾನದ ತರಕಾರಿಗಳನ್ನು ಬಳಸಿ ಸಾಪ್ತಾಹಿಕ ಮೆನು ಬದಲಾವಣೆಯನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುತ್ತದೆ.ಇದು ಪೋಷಕರು, ಪಂಚಾಯತ್‌ಗಳು, ಸ್ವಸಹಾಯ ಸಂಘಗಳು ಮತ್ತು ಅಂಗನವಾಡಿ ನಿರ್ವಹಣಾ ಸಮಿತಿಗಳನ್ನು (ಎಎಂಸಿ) ಒಳಗೊಂಡ ಪ್ರಾತ್ಯಕ್ಷಿಕೆಗಳು ಹಾಗೂ ರುಚಿ ನೋಡುವ ಕಾರ್ಯಕ್ರಮಳನ್ನು ಒಳಗೊಂಡಿದೆ.

ಈ ಸೇವೆಗಳ ವಿತರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಸಮುದಾಯ ಮಾಲೀಕತ್ವ ಮತ್ತು ಉತ್ತರದಾಯಿತ್ವವನ್ನು ‘ಪೋಷಣ್ ಮಾಸಾಚರಣೆ’ಯ ಮೂರನೇ ಪ್ರಮುಖ ವಿಷಯವಾಗಿ ಗುರುತಿಸಲಾಗಿದೆ. 2026ರ ಜೂನ್ 25ರಂದು ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ನಿರ್ವಹಣಾ ಸಮಿತಿಗಳ (ಎಎಂಸಿ) ತ್ವರಿತ ರಚನೆ ಮತ್ತು ಕಾರ್ಯಾಚರಣೆಯನ್ನು ಈ ಅಭಿಯಾನದ ಧ್ಯೇಯವಾಕ್ಯವು ಪ್ರೇರೇಪಿಸುತ್ತದೆ. ಪೋಷಣ್ ಮಾಸದ ಭಾಗವಾಗಿ, ಸೇವಾ ವಿತರಣೆಯನ್ನು ಪರಿಶೀಲಿಸಲು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಕನಿಷ್ಠ ಒಂದು ಎಎಂಸಿ ಸಭೆ ನಡೆಯಲಿದೆ. ದೈನಂದಿನ ಮೆನುಗಳು ಮತ್ತು ಅರ್ಹತೆಗಳನ್ನು ಗೋಚರಿಸಲು ಪ್ರತಿ ಕೇಂದ್ರದಲ್ಲಿ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ (ಎಸ್ಎನ್‌ಪಿ) ಮೆನು ಬೋರ್ಡ್‌ಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ‘ಎಎಂಸಿ’ಗಳು ಮತ್ತು ತಾಯಂದಿರ ಸಮಿತಿಗಳು ಊಟದ ಗುಣಮಟ್ಟ ಮತ್ತು ಮೆನು ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತವೆ.

ಮಗು ಏನು ತಿನ್ನುತ್ತದೆ ಎಂಬುದು ಮಗು ಹೇಗೆ ಕಲಿಯುತ್ತದೆ ಎಂಬುದನ್ನು ರೂಪಿಸುತ್ತದೆ ಎಂಬುದನ್ನು ಅರಿತು, ಪೋಷಣ್ ಮಾಸಾಚರಣೆಯ ನಾಲ್ಕನೇ ವಿಷಯ — ಪೌಷ್ಟಿಕಾಂಶ, ಆರಂಭಿಕ ಪ್ರಚೋದನೆ ಮತ್ತು ಬಾಲ್ಯದ ಬೆಳವಣಿಗೆಗಾಗಿ ಶಿಕ್ಷಣ — ಅಡಿಪಾಯದ ವರ್ಷಗಳಲ್ಲಿ ಮಕ್ಕಳ ಆರೋಗ್ಯ, ಅಭಿವೃದ್ಧಿ ಮತ್ತು ಕಲಿಕೆಯನ್ನು ಪೋಷಿಸುವತ್ತ ಗಮನ ಹರಿಸುತ್ತದೆ. 0 ದಿಂದ 3 ವರ್ಷ ವಯಸ್ಸಿನ ಮಕ್ಕಳಿಗಾಗಿ, ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿಗಳ ಮೂಲಕ ಕುಟುಂಬಗಳನ್ನು ತಲುಪುತ್ತಾರೆ, ‘ನವಚೇತ’ ಉಪಕ್ರಮದಿಂದ ಮಾರ್ಗದರ್ಶನ ಪಡೆದು ಮತ್ತು ಪರಿಷ್ಕೃತ ಮನೆ ಭೇಟಿ ವೇಳಾಪಟ್ಟಿಯಿಂದ  ಬೆಂಬಲಿತರಾಗಿ, ವಯಸ್ಸಿಗೆ-ಸೂಕ್ತವಾದ ಚಟುವಟಿಕೆಗಳ ಮೂಲಕ ಸ್ಪಂದಿಸುವ ಆರೈಕೆ ಮತ್ತು ಆರಂಭಿಕ ಪ್ರಚೋದನೆಯನ್ನು ಉತ್ತೇಜಿಸುವ ಸಮಾಲೋಚನೆ ಸಂದೇಶಗಳನ್ನು ಒದಗಿಸುತ್ತಾರೆ. ಮತ್ತು 34 ಬೆಳವಣಿಗೆಯ ಮೈಲುಗಲ್ಲುಗಳ ವೀಕ್ಷಣೆಯನ್ನು ಕೈಗೊಳ್ಳುತ್ತಾರೆ. ಪೋಷಣ್ ಮಾಸಾಚರಣೆಯ ಸಮಯದಲ್ಲಿ, ಎಲ್ಲಾ ಅಂಗನವಾಡಿ ಕೇಂದ್ರಗಳು 0–3 ವರ್ಷದ ದಾಖಲಾದ ಎಲ್ಲಾ ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳನ್ನು ದಾಖಲಿಸಲು ವಿಶೇಷ ಅಭಿಯಾನವನ್ನು ನಡೆಸುತ್ತವೆ. ಆರೋಗ್ಯ ಇಲಾಖೆ ಮತ್ತು ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ’ (ಆರ್‌ಬಿಎಸ್‌ಕೆ) ಸಹಯೋಗದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ದಿನಗಳ (ವಿಎಚ್‌ಎಸ್‌ಎನ್‌ಡಿ) ಸಮಯದಲ್ಲಿ ಮಧ್ಯಸ್ಥಿಕೆಗಳ ಅಗತ್ಯವಿರುವ ಎಲ್ಲಾ ಮಕ್ಕಳನ್ನು ತ್ವರಿತಗತಿಯಲ್ಲಿ ಉಲ್ಲೇಖಿಸಲಾಗುತ್ತದೆ. 3 ರಿಂದ 6 ವರ್ಷದ ಮಕ್ಕಳಿಗಾಗಿ, ಅಂಗನವಾಡಿ ಕೇಂದ್ರಗಳು ಆದರ್ಶಶೀಲ ಮತ್ತು ಆಟ-ಆಧಾರಿತ ಚಟುವಟಿಕೆಗಳ ಮೂಲಕ ಆರಂಭಿಕ ಕಲಿಕೆಯನ್ನು ಬೆಂಬಲಿಸುತ್ತವೆ. ಪೋಷಣ್ ಮಾಸಾಚರಣೆಯ ಭಾಗವಾಗಿ, ಪ್ರತಿ ಅಂಗನವಾಡಿ ಕೇಂದ್ರವು 3–6 ವರ್ಷ ವಯಸ್ಸಿನ ಮಕ್ಕಳ ಆರಂಭಿಕ ಕಲಿಕೆಯನ್ನು ಪ್ರದರ್ಶಿಸಲು ಪೋಷಕ-ಮಕ್ಕಳ ಚಟುವಟಿಕೆಗಳೊಂದಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ)ದಿನವನ್ನು ಆಚರಿಸುತ್ತದೆ. ಪ್ರತಿಯೊಂದು ಕೇಂದ್ರವು 5–6 ವರ್ಷ ವಯಸ್ಸಿನ ಮಕ್ಕಳಿಗಾಗಿ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಾನ್ಯತಾ ಭೇಟಿಗಳನ್ನು ನಡೆಸುತ್ತದೆ ಮತ್ತು ಆಟಿಕೆಗಳು ಹಾಗೂ ಆಟ ಮತ್ತು ಕಲಿಕೆಯ ಸಾಮಗ್ರಿಗಳಿಗಾಗಿ ಸಮುದಾಯ-ನೇತೃತ್ವದ ಸಂಪನ್ಮೂಲ ಕ್ರೋಢೀಕರಣ ಅಭಿಯಾನಗಳನ್ನು ಆಯೋಜಿಸುತ್ತದೆ. ಕೇಂದ್ರಗಳು ಪೌಷ್ಟಿಕಾಂಶ ಮತ್ತು ಮಗುವಿನ ಆರೈಕೆ ಅಭ್ಯಾಸಗಳ ಕುರಿತು ಸಮುದಾಯ ಆಧಾರಿತ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಸಾಂಪ್ರದಾಯಿಕ ಮಗುವಿನ ಆರೈಕೆ ಅಭ್ಯಾಸಗಳು, ನವಜಾತ ಶಿಶುವಿನ ಆರೈಕೆ ಮತ್ತು ಪೋಷಕ-ಶಿಶುವಿನ ಸಂವಾದದ ಕುರಿತಾದ ‘ಐಇಸಿ’ ವೀಡಿಯೊಗಳ ಸಮುದಾಯ ವೀಕ್ಷಣೆಯನ್ನು ಸಹ ನಡೆಸಲಾಗುವುದು.

ಅಂತಿಮವಾಗಿ, ಪೋಷಣ್ ಮಾಸಾಚರಣೆ 2026ರ ಐದನೇ ವಿಷಯವಾಗಿ ಒಂದು ದಶಕದಿಂದ ತಾಯಂದಿರ ಪೌಷ್ಟಿಕಾಂಶ ಮತ್ತು ಆರೋಗ್ಯ-ಕಾಳಜಿಯ ನಡವಳಿಕೆಯನ್ನು ಬೆಂಬಲಿಸುತ್ತಿರುವ ಪ್ರಮುಖ ಮಾತೃತ್ವ ಲಾಭದ ಕಾರ್ಯಕ್ರಮವಾದ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ (ಪಿಎಂಎಂವಿವೈ) ಹತ್ತು ವರ್ಷಗಳನ್ನು ಆಚರಿಸಲಿದೆ. ಈ ಅಭಿಯಾನದಡಿ ಶೇ. 100 ರಷ್ಟು ಪರಿಪೂರ್ಣತೆಯನ್ನು ಸಾಧಿಸಲು ಎಲ್ಲಾ ಅರ್ಹ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರನ್ನು ನೋಂದಾಯಿಸಲಾಗುತ್ತದೆ, ನೇರ ನಗದು ವರ್ಗಾವಣೆಯನ್ನು ತ್ವರಿತಗೊಳಿಸಲಾಗುತ್ತದೆ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ಥಳೀಕರಣಕ್ಕಾಗಿ ಪಿಎಂಎಂವಿವೈ ಟೂಲ್‌ಕಿಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ.

ಉದ್ಘಾಟನಾ ಕಾರ್ಯಕ್ರಮದ ಮುಖ್ಯಾಂಶಗಳು

ಗಣ್ಯರು ಪೋಷಣ್ ಮೇಳವನ್ನು ವೀಕ್ಷಿಸುವ ಮತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮವು ಪ್ರಾರಂಭವಾಗುತ್ತದೆ. ಬೇಯಿಸಿದ ಬಿಸಿ ಊಟ, ಮನೆಗೆ ಕೊಂಡೊಯ್ಯುವ ಪಡಿತರ, ಮನೆ ಭೇಟಿಗಳು ಮತ್ತು ಇಸಿಸಿಇ (ಇಸಿಸಿಇ) ಕುರಿತು ಫಲಾನುಭವಿಗಳ ಪ್ರಶಂಸಾ ವೀಡಿಯೊಗಳನ್ನು ಪ್ರದರ್ಶಿಸಲಾಗುತ್ತದೆ, ನಂತರ ಕೇಂದ್ರ ಸಚಿವರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಡುವೆ ನೇರ ಸಂವಾದ ನಡೆಯಲಿದೆ. ‘ಪಿಎಂಎಂವಿವೈ’ನ 10 ವರ್ಷಗಳ ಸಾಧನೆ ಮತ್ತು ಪೋಷಣ್ ಮಾಸಾಚರಣೆ-2026ರ ಉದ್ಘಾಟನೆಯನ್ನು ಗುರುತಿಸುವ ಕಿರುಚಿತ್ರಗಳು ಅಭಿಯಾನಕ್ಕೆ ಔಪಚಾರಿಕ ಚಾಲನೆ ನೀಡಲು ಗಣ್ಯರಿಗೆ ವೇದಿಕೆಯನ್ನು ಸಿದ್ಧಪಡಿಸುತ್ತವೆ.

ರಾಷ್ಟ್ರೀಯ ಪೋಷಣ್ ಮಾಸಾಚರಣೆ-2026 ಅನ್ನು ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಂಚಾಯತ್‌ಗಳು ಮತ್ತು ಮನೆಗಳಲ್ಲಿ ಸಮುದಾಯ ಕಾರ್ಯಕ್ರಮಗಳ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಚರಿಸಲಾಗುವುದು. ಆ ಮೂಲಕ ಇದು ಉತ್ತಮ ಪೋಷಣೆಯ ಮಗು ಪ್ರತಿಯೊಬ್ಬ ನಾಗರಿಕನ ಹಂಚಿಕೆಯ ಜವಾಬ್ದಾರಿಯಾಗಿದೆ ಮತ್ತು ವಿಕಸಿತ ಭಾರತದ ಖಚಿತ ಅಡಿಪಾಯವಾಗಿದೆ ಎಂದು ಪುನರುಚ್ಚರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2307369) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Bengali , Gujarati , Tamil