ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿದ ಭಾರತದ ಸನ್ಮಾನ್ಯ ರಾಷ್ಟ್ರಪತಿ


ದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಶ್ರೇಷ್ಠತೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಅಪಾರ ಮಹತ್ವವನ್ನು ಹೊಂದಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಕಟಣಾ ದಿನಾಂಕ: 05 SEP 2026 3:09PM by PIB Bengaluru

ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಶಿಕ್ಷಕರ ದಿನಾಚರಣೆಯ ಅಂಗವಾಗಿ ಇಂದು (ಸೆಪ್ಟೆಂಬರ್ 5, 2026) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ದೇಶಾದ್ಯಂತದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ರಾಷ್ಟ್ರಪತಿಯವರು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಅವಕಾಶಗಳ ಸಮಾನತೆಯ ಆದರ್ಶವನ್ನು ನನಸಾಗಿಸಲು ಶಿಕ್ಷಣವು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಹೇಳಿದರು. ಪ್ರಾಥಮಿಕ ಶಾಲೆಯ ಗೈರುಹಾಜರಿ/ಶಾಲೆ ಬಿಡುವ ದರವನ್ನು ಅತ್ಯಲ್ಪ ಮಟ್ಟಕ್ಕೆ ತಲುಪಿಸಿರುವ ಸಾಧನೆಯು ಶಿಕ್ಷಕರ ಶ್ರಮದಿಂದ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಈ ರಾಷ್ಟ್ರೀಯ ಯಶಸ್ಸಿಗಾಗಿ ಅವರು ಎಲ್ಲಾ ಶಿಕ್ಷಕರನ್ನು ಪ್ರಶಂಸಿಸಿದರು.

ಶಾಲಾ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ ಅಡಿಪಾಯವಾಗಿದೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಹೇಳಿದರು. ಜ್ಞಾನ ಮತ್ತು ಕೌಶಲ್ಯಗಳನ್ನು ಯಾವುದೇ ಸಮಯದಲ್ಲಿ ಗಳಿಸಬಹುದಾದರೂ, ಬಾಲ್ಯದಲ್ಲಿ ಸನ್ನಡತೆಯ ಪಾಠಗಳನ್ನು ಕಳಿಸಿಕೊಡುವುದು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಆರಂಭಿಕ ತರಗತಿಗಳಲ್ಲಿ ಮಕ್ಕಳ ಬೌದ್ಧಿಕ, ದೈಹಿಕ ಮತ್ತು ನೈತಿಕ ಅಭಿವೃದ್ಧಿಯ ಮೇಲೆ ಶ್ರದ್ಧೆಯಿಂದ ಗಮನ ಹರಿಸುವ ಮೂಲಕ, ನಮ್ಮ ಶಿಕ್ಷಕರು ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ಕರ್ತವ್ಯನಿಷ್ಠ ನಾಗರಿಕರ ಭವಿಷ್ಯದ ಪೀಳಿಗೆಯನ್ನು ಸಜ್ಜುಗೊಳಿಸಬಹುದು.

ಹಲವಾರು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುತ್ತಾರೆ; ಕೆಲವರು ಮೊದಲ ಪೀಳಿಗೆಯ ಕಲಿಕಾರ್ಥಿಗಳಾಗಿದ್ದಾರೆ; ಇನ್ನು ಕೆಲವರು ಸಾಮಾನ್ಯ ಗ್ರಾಮೀಣ ಶಾಲೆಗಳಿಂದ ದೊಡ್ಡ ನಗರ ಶಾಸನ/ಶಾಲೆಗಳಿಗೆ ಬದಲಾಗುತ್ತಾರೆ; ಕೆಲವರು ಸ್ವಾಭಾವಿಕವಾಗಿ ನಾಚಿಕೆ ಸ್ವಭಾವದವರಾಗಿರುತ್ತಾರೆ; ಇನ್ನು ಕೆಲವರು ಅಪಾರ ಪ್ರತಿಭೆಯನ್ನು ಹೊಂದಿದ್ದರೂ ಆತ್ಮವಿಶ್ವಾಸದ ಕೊರತೆಯನ್ನು ಹೊಂದಿರುತ್ತಾರೆ; ಮತ್ತು ಕೆಲವರು ವಿಶೇಷ ಅಗತ್ಯವುಳ್ಳ ಮಕ್ಕಳಾಗಿರುತ್ತಾರೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಒತ್ತಿಹೇಳಿದರು. ಅಂತಹ ಯಾವುದೇ ಕಾರಣಕ್ಕಾಗಿ ಕೀಳರಿಮೆಯ ಭಾವನೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಮತ್ತು ಅವರನ್ನು ಮೇಲಕ್ಕೆತ್ತುವುದು ಶಿಕ್ಷಕರ ವಿಶೇಷ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಶ್ರೇಷ್ಠತೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಅಪಾರ ಮಹತ್ವವನ್ನು ಹೊಂದಿವೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಹೇಳಿದರು. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯಾಗಿ ಸ್ಥಾಪಿಸುವುದು ಮತ್ತು ಅದನ್ನು ಜ್ಞಾನದ ಸೂಪರ್ ಪವರ್ ಆಗಿ ಪರಿವರ್ತಿಸುವುದು ನಮ್ಮ ರಾಷ್ಟ್ರೀಯ ಆದ್ಯತೆಗಳಲ್ಲಿ ಸೇರಿದೆ.

ನಾವು 'ವಿಕಸಿತ ಭಾರತ' ನಿರ್ಮಾಣದ ಗುರಿಯತ್ತ ಸಾಗುತ್ತಿದ್ದೇವೆ ಮತ್ತು ವಿಶ್ವದರ್ಜೆಯ ಶಿಕ್ಷಣ ವ್ಯವಸ್ಥೆಯ ಮೂಲಕ ಮಾತ್ರ ಈ ಗುರಿಯನ್ನು ಸಾಧಿಸಲು ಸಾಧ್ಯ ಎಂದು ರಾಷ್ಟ್ರಪತಿಯವರು ಹೇಳಿದರು. ನಮ್ಮ ಶಿಕ್ಷಕರು ಶಿಕ್ಷಣ ವ್ಯವಸ್ಥೆಗೆ ಜೀವ ತುಂಬುತ್ತಾರೆ. ನಮ್ಮ ದೇಶದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣದ ಅವಕಾಶಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ನಾವು ಶ್ರಮಿಸಬೇಕು. ನಮ್ಮ ಶಿಕ್ಷಕರು ತಮ್ಮ ವಾತ್ಸಲ್ಯ ಮತ್ತು ಬದ್ಧತೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳಲ್ಲಿ ಜ್ಞಾನ, ಪ್ರೇರಣೆ, ನೈತಿಕತೆ ಮತ್ತು ಸಂವೇದನಾಶೀಲತೆಯನ್ನು ತುಂಬಬೇಕು ಎಂದು ಅವರು ಒತ್ತಿಹೇಳಿದರು.

ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

 

*****


(ಪ್ರಕಟಣೆ ಐ.ಡಿ.: 2306979) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati , Tamil