ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಟಲಿಯ ಯುದ್ಧಾನಂತರದ ಇತಿಹಾಸದಲ್ಲಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 04 SEP 2026 1:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಯುದ್ಧಾನಂತರದ ಇತಿಹಾಸದಲ್ಲಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರನ್ನು ಅಭಿನಂದಿಸಿದ್ದಾರೆ.

ಈ ಮೈಲಿಗಲ್ಲು ಇಟಲಿಯ ಜನರು ಅವರ ನಾಯಕತ್ವದಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ-ಇಟಲಿ ವಿಶೇಷ ಕಾರ್ಯತಾಂತ್ರಿಕ  ಪಾಲುದಾರಿಕೆ ಬಲವರ್ಧನೆಯಲ್ಲಿ ಅವರ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ ಎಂದ ಅವರು,ಎರಡೂ ದೇಶಗಳ ಜನರಿಗೆ ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಅವರ ನಿಕಟ ಸಹಕಾರ ಮುಂದುವರಿಸಲು ತಾವು ಎದುರು ನೋಡುತ್ತಿರುವುದಾಗಿ ಹೇಳಿದರು. ಮುಂಬರುವ ವರ್ಷಗಳಲ್ಲಿ ಅವರ ನಿರಂತರ ಯಶಸ್ಸಿಗೆ ಪ್ರಧಾನಮಂತ್ರಿ ತಮ್ಮ ಶುಭಾಶಯಗಳನ್ನು ಕೋರಿದರು.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಇಟಲಿಯ ಯುದ್ಧಾನಂತರದ ಇತಿಹಾಸದಲ್ಲಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನನ್ನ ಸ್ನೇಹಿತೆ ಪ್ರಧಾನಮಂತ್ರಿ ಮೆಲೋನಿ ಅವರಿಗೆ ಅಭಿನಂದನೆಗಳು. ಈ ಮೈಲಿಗಲ್ಲು ಇಟಲಿಯ ಜನರು ಅವರ ನಾಯಕತ್ವದಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ.

ಭಾರತ-ಇಟಲಿ ವಿಶೇಷ ಕಾರ್ಯತಾಂತ್ರಿಕ ಪಾಲುದಾರಿಕೆ ಬಲವರ್ಧನೆಯಲ್ಲಿ ಅವರ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ ಮತ್ತು ನಮ್ಮ ದೇಶಗಳ ಜನರಿಗೆ ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ನಮ್ಮ ನಿಕಟ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.

ಮುಂಬರುವ ವರ್ಷಗಳಲ್ಲಿ ನಿಮ್ಮ ನಿರಂತರ ಯಶಸ್ಸಿಗೆ ನನ್ನ ಶುಭಾಶಯಗಳು.

@GiorgiaMeloni"

 

*****


(ಪ್ರಕಟಣೆ ಐ.ಡಿ.: 2306678) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Gujarati , Telugu , Malayalam