ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದಿಂದ ನೇಪಾಳದಲ್ಲಿ ಭಾಷಿಣಿ ಸಂಗಮ ಕಾರ್ಯಾಗಾರ ಆಯೋಜನೆ; ಬಹುಭಾಷಾ ಎಐ ಕುರಿತು ಭಾರತ-ನೇಪಾಳ ಸಹಯೋಗ ಬಲವರ್ಧನೆ
ಅಂತಾರಾಷ್ಟ್ರೀಯ ಒಳಗೊಳ್ಳುವಿಕೆಯ ಕಾರ್ಯಾಗಾರದಿಂದ ಭಾರತ ಮತ್ತು ನೇಪಾಳದಾದ್ಯಂತ ಸಹ-ಸೃಷ್ಟಿ, ಭಾಷಾ ಸಂರಕ್ಷಣೆ ಮತ್ತು ಅಂತರ್ಗತ ಭಾಷಾ ಎಐ ಮುನ್ನಡೆ
ಪ್ರಕಟಣಾ ದಿನಾಂಕ:
01 SEP 2026 3:54PM by PIB Bengaluru
ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಅಡಿಯಲ್ಲಿ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ (DIBD), ಕಠ್ಮಂಡುವಿನಲ್ಲಿರುವ ಭಾರತ ರಾಯಭಾರ ಕಚೇರಿ ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಠ್ಮಂಡುವಿನಲ್ಲಿ ಭಾಷಿನಿ ಸಂಗಮ: ಅಂತಾರಾಷ್ಟ್ರೀಯ ಒಳಗೊಳ್ಳುವಿಕೆಯ ಕಾರ್ಯಾಗಾರವನ್ನು ನೇಪಾಳದ ಕಠ್ಮಂಡುವಿನಲ್ಲಿ ಆಯೋಜಿಸಿತು. ಕಾರ್ಯಾಗಾರವು ಬಹುಭಾಷಾ ಮತ್ತು ಧ್ವನಿ-ಮೊದಲ ಕೃತಕ ಬುದ್ಧಿಮತ್ತೆ (AI) ಯ ಸಾಮರ್ಥ್ಯವನ್ನು ಅನ್ವೇಷಿಸಲು ಸರ್ಕಾರ, ಶೈಕ್ಷಣಿಕ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳ ಪಾಲುದಾರರನ್ನು ಒಗ್ಗೂಡಿಸಿತು.
ಭಾಷಾ ತಂತ್ರಜ್ಞಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸಹಯೋಗಕ್ಕಾಗಿ ಡಿಐಬಿಡಿ ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ನಡುವಿನ ತಿಳಿವಳಿಕೆ ಒಪ್ಪಂದವನ್ನು ಆಧರಿಸಿ ಭಾಷಾ ಎಐ ನಲ್ಲಿ ಭಾರತ-ನೇಪಾಳ ಸಹಯೋಗವನ್ನು ಬಲಪಡಿಸುವಲ್ಲಿ ಕಾರ್ಯಾಗಾರವು ಒಂದು ಪ್ರಮುಖ ಹೆಜ್ಜೆಯಾಗಿದೆ. ಎರಡೂ ದೇಶಗಳ ಸಮುದಾಯಗಳ ಭಾಷಾ ಅಗತ್ಯಗಳಿಗೆ ಸ್ಪಂದಿಸುವ ತಂತ್ರಜ್ಞಾನ, ಡೇಟಾಸೆಟ್‌ಗಳು ಮತ್ತು ಸ್ಥಳೀಯವಾಗಿ ಸಂಬಂಧಿತ ಅನ್ವಯಿಕೆಗಳ ಸಹ-ಸೃಷ್ಟಿ ಮೂಲಕ ಈ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವತ್ತ ಈ ಒಳಗೊಳ್ಳುವಿಕೆಯು ಹೆಚ್ಚು ಗಮನಹರಿಸಿತು.
ಭಾಷಾ ಸಂಗಮ್ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದ ಅಂತಾರಾಷ್ಟ್ರೀಯ ಒಳಗೊಳ್ಳುವಿಕೆಯ ಉಪಕ್ರಮವಾಗಿದ್ದು, ಇದು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಭಾಷಾ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಅನ್ವೇಷಿಸಲು ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು, ಅಭಿವೃದ್ದಿಕಾರರು, ನವೋದ್ಯಮಗಳು, ಭಾಷಾ ತಜ್ಞರು ಮತ್ತು ಸಮುದಾಯಗಳನ್ನು ಒಗ್ಗೂಡಿಸುತ್ತದೆ. ಈ ಉಪಕ್ರಮವು ದೇಶಗಳು ಮತ್ತು ಸಮುದಾಯಗಳೊಂದಿಗೆ ಭಾಷಾ ಎಐ ಅನ್ನು ಸಹ-ಸೃಷ್ಟಿ ಮಾಡುವುದು, ಅವುಗಳ ಭಾಷಾ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಬೇರೂರಿರುವ ಪರಿಹಾರಗಳನ್ನು ನಿರ್ಮಿಸಲು ತಂತ್ರಜ್ಞಾನ ಮತ್ತು ಸ್ಥಳೀಯ ಜ್ಞಾನ ಒಗ್ಗೂಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಡಿಜಿಟಲ್ ಯುಗದಲ್ಲಿ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ, ಭಾಷೆಗಳು ಹೊತ್ತೊಯ್ಯುವ ಧ್ವನಿಗಳು, ಜ್ಞಾನ ಮತ್ತು ಗುರುತುಗಳನ್ನು ನಾಳಿನ ತಂತ್ರಜ್ಞಾನಗಳಲ್ಲಿ ಪ್ರತಿನಿಧಿಸಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಅಂತಹ ತೊಡಗಿಸಿಕೊಳ್ಳುವಿಕೆಗಳ ಮೂಲಕ ಭಾಷಿಣಿ ಸಂಗಮ್ ಹಂಚಿಕೆಯ ಭಾಷಾ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹಂಚಿಕೆಯ ನಾವೀನ್ಯತೆ, ಸಹ-ಸೃಷ್ಟಿ ಮತ್ತು ಬಲವಾದ ಪಾಲುದಾರಿಕೆಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಗಡಿಗಳಲ್ಲಿ ಹೆಚ್ಚು ಅಂತರ್ಗತ ಬಹುಭಾಷಾ AI ಪರಿಸರ ವ್ಯವಸ್ಥೆಯನ್ನು ಮುನ್ನಡೆಸುತ್ತದೆ.
ಭಾಷಿಣಿ ತಂಡವು ತನ್ನ ಬಹುಭಾಷಾ AI ಸಾಮರ್ಥ್ಯಗಳ ಪ್ರಾತ್ಯಕ್ರಿಕೆಗಳ ಪ್ರದರ್ಶನ ನಡೆಸಿತು, ಭಾಷಣ ಗುರುತಿಸುವಿಕೆ, ನೈಜ-ಸಮಯದ ಅನುವಾದ, ಧ್ವನಿ-ಸಕ್ರಿಯಗೊಳಿಸಿದ ಸಂವಹನ ಮತ್ತು ದಾಖಲೆ ಸಂಸ್ಕರಣೆಯನ್ನು ಪ್ರದರ್ಶಿಸಿತು, ಜೊತೆಗೆ ಭಾಷಾ AI ಡಿಜಿಟಲ್ ಪ್ರವೇಶವನ್ನು ಹೇಗೆ ಹೆಚ್ಚು ನೈಸರ್ಗಿಕ ಮತ್ತು ಸಮಗ್ರವಾಗಿಸುತ್ತದೆ ಎಂಬುದನ್ನು ಉಲ್ಲೇಖಿಸಿತು.
ಪ್ರಾತಿನಿಧಿಕ ಎಐ ಅನ್ನು ರೂಪಿಸುವಲ್ಲಿ ಭಾಷಾ ದತ್ತಾಂಶ ಮತ್ತು ಸಮುದಾಯದ ಭಾಗವಹಿಸುವಿಕೆಯ ಪಾತ್ರಕ್ಕೆ ನಿರ್ದಿಷ್ಟವಾದ ಭಾಷಾದಾನ ಗೋಷ್ಠಿಯು ನಡೆಯಿತು, ಭಾಗವಹಿಸಿದವರು ಭಾಷಣ, ಪಠ್ಯ ಮತ್ತು ಚಿತ್ರದಾದ್ಯಂತ ಕೊಡುಗೆಗಳನ್ನು ಅನ್ವೇಷಿಸಿದರು.
ಭಾರತ ಮತ್ತು ನೇಪಾಳದ ಸಮುದಾಯಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾಶಿನಿಯ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿ ನೇಪಾಳಿ ಮತ್ತು ಇತರ ಭಾಷೆಗಳಲ್ಲಿ ಸ್ಥಳೀಯ ಅಪ್ಲಿಕೇಶನ್‌ಗಳನ್ನು ಕಾರ್ಯಾಗಾರವು ಅನ್ವೇಷಿಸಿತು.
ಕಠ್ಮಂಡುವಿನ ಭಾರತದ ರಾಯಭಾರ ಕಚೇರಿಯ ಮೊದಲ ಕಾರ್ಯದರ್ಶಿ ಶ್ರೀ ಸುಮನ್ ಶೇಖರ್, "ಡಿಐಬಿಡಿ ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ನಡುವಿನ ಒಪ್ಪಂದವು ಈ ಸಹಯೋಗವನ್ನು ಮುಂದಕ್ಕೆ ಕೊಂಡೊಯ್ಯಲು ಭದ್ರ ಅಡಿಪಾಯವನ್ನು ಹಾಕಿಕೊಡುತ್ತದೆ. ಒಟ್ಟಾರೆ, ನೇಪಾಳಿ, ಮೈಥಿಲಿ ಮತ್ತು ಇತರ ಭಾಷೆಗಳಲ್ಲಿ ಸ್ಥಳೀಯ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲು ನಮಗೆ ಅವಕಾಶವಿದೆ, ಅದು ಭಾರತ ಮತ್ತು ನೇಪಾಳದಾದ್ಯಂತ ಜನರಿಗೆ ಅರ್ಥಪೂರ್ಣ ಮೌಲ್ಯವನ್ನು ಸೃಷ್ಟಿಸುತ್ತದೆ." ಎಂದರು.

ಡಿಜಿಟಲ್ ಇಂಡಿಯಾ ಭಾಶಿನಿ ವಿಭಾಗದ ಸಿಇಒ ಶ್ರೀ ಅಮಿತಾಭ್ ನಾಗ್, "ಭಾರತ ಮತ್ತು ನೇಪಾಳ ಭಾಷೆಗಳು, ಸಮುದಾಯಗಳು ಮತ್ತು ಆಳವಾದ ಸಾಂಸ್ಕೃತಿಕ ಸಂಪರ್ಕವನ್ನು ಹಂಚಿಕೊಳ್ಳುತ್ತವೆ, ಭಾಷಾ ಎಐ ಅನ್ನು ಒಟ್ಟಿಗೆ ರೂಪಿಸಲು ಒಂದು ಅನನ್ಯ ಅವಕಾಶವನ್ನು ಸೃಷ್ಟಿಸುತ್ತವೆ. ತಂತ್ರಜ್ಞಾನವು ನೇಪಾಳಿ, ನೇವಾರಿ ಮತ್ತು ಮೈಥಿಲಿಯನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ, ಈ ಭಾಷೆಗಳು, ಅವರ ಸಮುದಾಯಗಳು ಮತ್ತು ಅವುಗಳನ್ನು ಮಾತನಾಡುವ ಜನರೊಂದಿಗೆ ನಿರ್ಮಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.

ಕಾರ್ಯಾಗಾರವು ಸಂಶೋಧಕರು, ವಿದ್ಯಾರ್ಥಿಗಳು, ಭಾಷಾ ತಜ್ಞರು, ಡೆವಲಪರ್‌ಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಟ್ಟುಗೂಡಿಸಿ ಭಾಷಾ ಡೇಟಾಸೆಟ್‌ಗಳು, ಸಂಶೋಧನೆ ಮತ್ತು ನೈಜ-ಪ್ರಪಂಚದ ಭಾಷಾ AI ಪರಿಹಾರಗಳ ಸುತ್ತ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಹಯೋಗವನ್ನು ಅನ್ವೇಷಿಸಲು ನೆರವಾಯಿತು.
ಭಾಷಿಣಿ ಸಂಗಮ: ಅಂತಾರಾಷ್ಟ್ರೀಯ ಒಳಗೊಳ್ಳುವಿಕೆ ಕಾರ್ಯಾಗಾರ (ನೇಪಾಳ) ಹಂಚಿಕೊಂಡ ಭಾರತ-ನೇಪಾಳ ಭಾಷಾ ಎಐ ಪೂರಕ ವ್ಯವಸ್ಥೆಯತ್ತ ಒಂದು ಹೆಜ್ಜೆಯನ್ನು ಸೂಚಿಸುತ್ತದೆ, ಭಾಷೆಯನ್ನು ಡಿಜಿಟಲ್ ಸೇರ್ಪಡೆಗೆ ಸೇತುವೆಯನ್ನಾಗಿ ಮಾಡಲು ತಂತ್ರಜ್ಞಾನ, ಶೈಕ್ಷಣಿಕ, ಸರ್ಕಾರ ಮತ್ತು ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ.
ಡಿಜಿಟಲ್ ಇಂಡಿಯಾ ಭಾಶಿನಿ ವಿಭಾಗ (ಡಿಐಬಿಡಿ) ಕುರಿತು
ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC), ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅಡಿಯಲ್ಲಿ ಬರುವ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ (DIBD), AI ಆಧರಿಸಿದ ಬಹುಭಾಷಾ ಡಿಜಿಟಲ್ ಸೇರ್ಪಡೆಗಾಗಿ ಭಾರತದ ರಾಷ್ಟ್ರೀಯ ವೇದಿಕೆಯಾಗಿದೆ. ಭಾಷಿಣಿ 36 ಭಾರತೀಯ ಪಠ್ಯ ಭಾಷೆಗಳು, 23 ಭಾರತೀಯ ಧ್ವನಿ ಭಾಷೆಗಳು ಮತ್ತು 35 ಅಂತಾರಾಷ್ಟ್ರೀಯ ಭಾಷೆಗಳನ್ನು ಬೆಂಬಲಿಸುತ್ತದೆ, 800ಕ್ಕೂ ಅಧಿಕ ಸರ್ಕಾರಿ ವೆಬ್‌ಸೈಟ್‌ಗಳಿಗೆ ಶಕ್ತಿ ನೀಡುತ್ತದೆ, 9 ಬಿಲಿಯನ್+ ಸಂಚಿತ AI ತೀರ್ಮಾನಗಳನ್ನು ಸಕ್ರಿಯಗೊಳಿಸಿದೆ ಮತ್ತು ಪ್ರತಿದಿನ 24 ಮಿಲಿಯನ್+ AI ತೀರ್ಮಾನಗಳನ್ನು ಪ್ರಕ್ರಿಯೆಗೊಳಿಸುತ್ತದೆ, ಭಾಷಾ ಎಐ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೆಚ್ಚು ಲಭ್ಯವಾಗುವಂತೆ ಮಾಡಲು ಸಹಾಯಕವಾಗುತ್ತದೆ.
*****
(ಪ್ರಕಟಣೆ ಐ.ಡಿ.: 2305548)
ವಿಸಿಟರ್ ಕೌಂಟರ್ : 15