ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ ಸಕ್ಕರೆ ವಿತರಕರ ಸಕ್ಕರೆ ದಾಸ್ತಾನು ಮಿತಿ 2,000 ಕ್ವಿಂಟಾಲ್‌ಗೆ ಇಳಿಸಿದ ಕೇಂದ್ರ ಸರ್ಕಾರ
ಹೊಸ ದಾಸ್ತಾನು ಮಿತಿಯು ಅಕ್ರಮ ದಾಸ್ತಾನ ಸಂಗ್ರಹಕ್ಕೆ ತಡೆ ಮತ್ತು ಊಹಾತ್ಮಕ ವ್ಯಾಪಾರ ನಿಗ್ರಹ, ಸಾಕಷ್ಟು ಲಭ್ಯತೆ ಮತ್ತು ಬೆಲೆ ಸ್ಥಿರತೆ ಖಾತ್ರಿಪಡಿಸಿಕೊಳ್ಳುವ ಮೂಲಕ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಗುರಿ
ಪ್ರಕಟಣಾ ದಿನಾಂಕ:
01 SEP 2026 1:57PM by PIB Bengaluru
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ ಖಾತ್ರಿಪಡಿಸಿಕೊಳ್ಳಲು ಮತ್ತು ಸಕ್ಕರೆಯ ಅಕ್ರಮ ದಾಸ್ತಾನು ಮತ್ತು ಊಹಾತ್ಮಕ ವ್ಯಾಪಾರವನ್ನು ತಡೆಗಟ್ಟಲು ಭಾರತ ಸರ್ಕಾರವು , 2026ರ ಸೆಪ್ಟೆಂಬರ್ 15 ರಿಂದ 2026ರ ನವೆಂಬರ್ 30 ರವರೆಗೆ ಜಾರಿಗೆ ಬರುವಂತೆ ಸಕ್ಕರೆ ವಿತರಕರ ದಾಸ್ತಾನು ಮಿತಿಯನ್ನು 4,000 ಕ್ವಿಂಟಾಲ್‌ಗಳಿಂದ 2,000 ಕ್ವಿಂಟಾಲ್‌ಗಳಿಗೆ ಇಳಿಕೆ ಮಾಡಿದೆ. ಸದ್ಯ ದೇಶಾದ್ಯಂತ ಸಕ್ಕರೆ ವಿತರಕರ 4,000 ಕ್ವಿಂಟಾಲ್‌ಗಳ ದಾಸ್ತಾನು ಮಿತಿಯು 2026ರ ಆಗಸ್ಟ್ 1 ರಿಂದ ಜಾರಿಗೆ ಬಂದಿದೆ. ಸರ್ಕಾರವು ಇದೀಗ ದಾಸ್ತಾನು ಮಿತಿಯನ್ನು 2,000 ಕ್ವಿಂಟಾಲ್‌ಗಳಿಗೆ ಇಳಿಸುವ ಮೂಲಕ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ.
ತಿದ್ದುಪಡಿ ಮಾಡಿದ ನಿಬಂಧನೆಗಳ ಅಡಿಯಲ್ಲಿ 2026ರ ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ, ಸಕ್ಕರೆ ವ್ಯಾಪಾರಿಯು:
- ಅಂತಹ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳನ್ನು ಮೀರಿದ ಅವಧಿಗೆ ಯಾವುದೇ ದಾಸ್ತಾನು ಹೊಂದಿರಬಾರದು.
- ದೇಶಾದ್ಯಂತ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ 2,000 ಕ್ವಿಂಟಾಲ್‌ಗಿಂತ ಹೆಚ್ಚಿನ ಸಕ್ಕರೆಯನ್ನು ದಾಸ್ತಾನು ಇಡಬಾರದು.
- ಆದರೂ ಪ್ರದೇಶದ ನಿರ್ದಿಷ್ಟ ಮಾರುಕಟ್ಟೆ ಅವಶ್ಯಕತೆಗಳನ್ನು ಪರಿಗಣಿಸಿ, ಕೋಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶಗಳಿಗೆ ದಾಸ್ತಾನು ಮಿತಿ 4,000 ಕ್ವಿಂಟಾಲ್‌ಗಳಾಗಿ ಉಳಿಯುತ್ತದೆ.
- ಕೋಲ್ಕತ್ತಾ ಪ್ರದೇಶವು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆ ಪಡೆಯುತ್ತಿದೆ ಮತ್ತು ಈಶಾನ್ಯ ಪ್ರದೇಶ ಸೇರಿದಂತೆ ದೇಶದ ಪೂರ್ವ ಭಾಗಕ್ಕೆ ಸರಬರಾಜು ಮಾಡುತ್ತಿದೆ. ಆದ್ದರಿಂದ, ಕೋಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶಗಳಿಗೆ ಅಸ್ತಿತ್ವದಲ್ಲಿರುವ 4,000 ಕ್ವಿಂಟಾಲ್‌ಗಳ ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ದಾಸ್ತಾನನ್ನು ಮತ್ತಷ್ಟು ನಿಗ್ರಹಿಸುವುದು, ಊಹಾತ್ಮಕ ವ್ಯಾಪಾರ ನಿರುತ್ಸಾಹಗೊಳಿಸುವುದು ಮತ್ತು ಸಕ್ಕರೆ ದಾಸ್ತಾನುಗಳ ಅತಿಯಾದ ಸಂಗ್ರಹವನ್ನು ತಡೆಯುವ ಗುರಿಯನ್ನು ಈ ಕ್ರಮ ಹೊಂದಿದೆ. ಇದು ಪೂರೈಕೆ ಸರಣಿಯ ಮೂಲಕ ಸಕ್ಕರೆಯ ಕ್ರಮಬದ್ಧ ರವಾನೆಯನ್ನು ಸುಗಮಗೊಳಿಸುತ್ತದೆ ಮತ್ತು ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಅದರ ನಿರಂತರ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ.
ತೀವ್ರ ನಿಗಾ ಮತ್ತು ಭೌತಿಕ ಪರಿಶೀಲನೆ
ಸರ್ಕಾರವು ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು ಮತ್ತು ವ್ಯಾಪಾರಿಗಳನ್ನು ಒಳಗೊಂಡಂತೆ ಸಕ್ಕರೆ ದಾಸ್ತಾನುಗಳ ತೀವ್ರ ಮೇಲ್ವಿಚಾರಣೆ ಮತ್ತು ಭೌತಿಕ ಪರಿಶೀಲನೆ ಕೈಗೊಂಡಿದೆ. ಈ ಪ್ರಕ್ರಿಯೆಯಿಂದಾಗಿ ಸಕ್ಕರೆ ದಾಸ್ತಾನುಗಳ ಹೆಚ್ಚುವರಿ ಹಿಡುವಳಿ, ಬಹಿರಂಗಪಡಿಸದಿರುವುದು ಮತ್ತು ಸಾಗಣೆ ಮತ್ತು ಮಾರಾಟದಲ್ಲಿ ಅಕ್ರಮಗಳ ನಿದರ್ಶನಗಳನ್ನು ಗುರುತಿಸಲು ಸಹಾಯ ಮಾಡಿದೆ.
ಈ ಮಧ್ಯಸ್ಥಿಕೆಗಳು ಮತ್ತು ಸುಧಾರಿತ ಮಾರುಕಟ್ಟೆ ಲಭ್ಯತೆಯ ಪರಿಣಾಮವಾಗಿ, ಸಕ್ಕರೆಯೊಳಹೆ ಸಕ್ಕರೆ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಸುಮಾರು ಶೇ.20 ರಷ್ಟು ಕಡಿಮೆಯಾಗಿದೆ. ex-mill sugar prices have declined by around 20% in recent days ಚಿಲ್ಲರೆ ಬೆಲೆಗಳು ಸಹ ಇಳಿಕೆಯ ಪ್ರವೃತ್ತಿಯನ್ನು ತೋರಿಸಲು ಆರಂಭಿಸಿವೆ ಮತ್ತು ಎಕ್ಸ್-ಮಿಲ್ ಬೆಲೆಗಳಲ್ಲಿನ ಕಡಿತವನ್ನು ಅನುಸರಿಸುವ ನಿರೀಕ್ಷೆಯಿದೆ.
ನಿಗದಿತ ದಾಸ್ತಾನು ಘೋಷಣೆ ಮತ್ತು ನಿರಂತರ ಮೇಲ್ವಿಚಾರಣೆ
ಕೇಂದ್ರ ಸರ್ಕಾರವು ಸಕ್ಕರೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್ ಪೋರ್ಟಲ್ ಮೂಲಕ ಸಕ್ಕರೆ ದಾಸ್ತಾನುಗಳ ನಿಗದಿತ ಘೋಷಣೆ ಮತ್ತು ನವೀಕರಣಕ್ಕಾಗಿ ಕಾರ್ಯವಿಧಾನವನ್ನು ಸಹ ಜಾರಿಗೆ ತಂದಿದೆ. ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು ಮತ್ತು ವ್ಯಾಪಾರಿಗಳನ್ನು ಒಳಗೊಂಡಂತೆ ದೇಶಾದ್ಯಂತ ಸಕ್ಕರೆ ದಾಸ್ತಾನುಗಳ ಭೌತಿಕ ಪರಿಶೀಲನೆಯು ಮುಂಬರುವ ವಾರಗಳಲ್ಲಿ ಮುಂದುವರಿಯುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಾಕಷ್ಟು ಲಭ್ಯತೆ, ಕ್ರಮಬದ್ಧ ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ಗ್ರಾಹಕರಿಗೆ ಭರವಸೆ ನೀಡುತ್ತದೆ, ಆದರೆ ನಿಜವಾದ ವ್ಯಾಪಾರ ಮತ್ತು ವಿತರಣಾ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2305478)
ವಿಸಿಟರ್ ಕೌಂಟರ್ : 12