ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 01 SEP 2026 8:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ (X) ವೇದಿಕೆಯ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"यस्य कृत्यं न जानन्ति मन्त्रं वा मन्त्रितं परे।

कृतमेवास्य जानन्ति स वै पण्डित उच्यते॥"

ಯಾರ ಯೋಜನೆಗಳು ಮತ್ತು ಕಾರ್ಯಗಳು ಪೂರ್ಣಗೊಳ್ಳುವವರೆಗೂ ಇತರರಿಗೆ ತಿಳಿಯುವುದಿಲ್ಲವೋ, ಅವರೇ ನಿಜವಾದ ಜ್ಞಾನಿ. ಅಂತಹ ಶಿಸ್ತುಬದ್ಧ, ವಿವೇಚನಾಶೀಲ ಮತ್ತು ಚಿಂತನಶೀಲ ವ್ಯಕ್ತಿಯನ್ನು ನಿಜವಾದ ಪಂಡಿತನೆಂದು ಪರಿಗಣಿಸಿರುವುದು ಸರಿಯಷ್ಟೇ.

 

*****


(ಪ್ರಕಟಣೆ ಐ.ಡಿ.: 2305343) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Gujarati , Tamil , Telugu , Malayalam