ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಶೇ. 7.8 ರ ಜಿಡಿಪಿ ಬೆಳವಣಿಗೆ ಶ್ಲಾಘಿಸಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 31 AUG 2026 5:09PM by PIB Bengaluru

ಹಣಕಾಸು ವರ್ಷ 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಶೇ.7.8 ರಷ್ಟು ಜಿಡಿಪಿ ಬೆಳವಣಿಗೆ "ಅದ್ಭುತ ಸಾಧನೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ತೈಲ ಬೆಲೆ ಆಘಾತಗಳು, ಪೂರೈಕೆ ಸರಪಳಿ ಅಡೆತಡೆಗಳು ಮತ್ತು ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಈ ಸಾಧನೆಯು ಭಾರತದ ಜನರ ಸಾಮೂಹಿಕ ಶಕ್ತಿ ಮತ್ತು ಸ್ಥಿರವಾಗಿ ಚೇತರಿಕೆಯಾಗಬಲ್ಲ ಚೈತನ್ಯವನ್ನು ಪ್ರತಿಬಿಂಬಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಹಣಕಾಸು ವರ್ಷ 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಮಾದರಿ ಜಿಡಿಪಿ ಬೆಳವಣಿಗೆ ಶೇ.7.8% ರಷ್ಟಾಗಿದ್ದು, ಇದು ಅಮೋಘ ಸಾಧನೆಯಾಗಿದೆ.

ಜಾಗತಿಕ ಅನಿಶ್ಚಿತತೆಯ ನಡುವೆ ತೈಲ ಬೆಲೆ ಆಘಾತಗಳು ಮತ್ತು ಪೂರೈಕೆ ಸರಪಳಿ ಸಮಸ್ಯೆಗಳ ಹೊರತಾಗಿಯೂ ನಮ್ಮ ಜನರ ಸಾಮೂಹಿಕ ಶಕ್ತಿಯಿಂದಾಗಿ ಭಾರತವು ಈ ಮಹತ್ವದ ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು.

ಕೆಟ್ಟದ್ದನ್ನು ಬಯಸುವವರು ನಾಶವಾದರು ಮತ್ತು ಭಾರತ ಅರಳಿದೆ… ಮತ್ತೆ ವಿಕಸನಗೊಂಡಿದೆ!

 

*****


(ಪ್ರಕಟಣೆ ಐ.ಡಿ.: 2305282) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Assamese , Gujarati , Tamil , Telugu , Malayalam