ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

DNT ಸಮುದಾಯಗಳ ಸೇರ್ಪಡೆ, ಸಬಲೀಕರಣ ಮತ್ತು ಪ್ರಗತಿಯನ್ನು ಆಚರಿಸಲು ಸಮವೇಶ ಉತ್ಸವ


SEED ಯೋಜನೆಯಡಿಯಲ್ಲಿ ಯಶೋಗಾಥೆಯ ಪ್ರಸ್ಥಾವನೆ ಮತ್ತು DNT ಕುಶಲಕರ್ಮಿಗಳ ಸಾಂಪ್ರದಾಯಿಕ ಕೌಶಲ್ಯಗಳು, ಕರಕುಶಲತೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸುವ ಕಾರ್ಯಕ್ರಮ

ಸುಮಾರು 700 ಸಮುದಾಯ ಸದಸ್ಯರು, ನಾಯಕರು, ಕುಶಲಕರ್ಮಿಗಳು ಮತ್ತು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ

ಪ್ರಕಟಣಾ ದಿನಾಂಕ: 31 AUG 2026 5:12PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿಯಲ್ಲಿ ಬರುವ ಅಧಿಸೂಚನೆಯಿಂದ ಹೊರಗುಳಿದ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯು (DWBDNC), ದೇಶದ ರಾಜಧಾನಿಯಾದ ದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ (DAIC) ಭೀಮ್ ಹಾಲ್‌ನಲ್ಲಿ ನಾಳೆ "ಸಮಾವೇಶ ಉತ್ಸವ"ವನ್ನು ಆಯೋಜಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಅವರು ಭಾಗವಹಿಸಲಿದ್ದಾರೆ. ಸದಸ್ಯರಾದ ಶ್ರೀ ಭರತ್‌ಭಾಯ್ ಬಾಬುಭಾಯ್ ಪಟ್ನಿ ಮತ್ತು ಶ್ರೀ ಪ್ರವೀಣ್ ಶಿವಾಜಿರಾವ್ ಘುಗೆ ಸೇರಿದಂತೆ DWBDNC ಯ ಹಿರಿಯ ಪ್ರತಿನಿಧಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಮುದಾಯದ ಮುಖಂಡರು, ಕುಶಲಕರ್ಮಿಗಳು ಮತ್ತು ಫಲಾನುಭವಿಗಳು ಸೇರಿದಂತೆ DNT ಸಮುದಾಯಗಳ ಸುಮಾರು 700 ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ಕಾರ್ಯಕ್ರಮವು ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ (DNT) ಸಮುದಾಯಗಳ ಸೇರ್ಪಡೆ, ಸಬಲೀಕರಣ ಮತ್ತು ಪ್ರಗತಿಯನ್ನು ಖಚಿತಪಡಿಸಿಕೊಳ್ಳುವ ಉಪಕ್ರಮಗಳ ಒಂದು ಭಾಗವಾಗಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ DNT ಕುಶಲಕರ್ಮಿಗಳ ಮಳಿಗೆಗಳನ್ನು ಮತ್ತು ಭಾರತ-ತುಲಿಪ್ ಹೆರಿಟೇಜ್ ಸ್ಟೋರ್ ಅನ್ನು ಸ್ಥಾಪಿಸಲಾಗುವುದು. DNT ಗಳ ಆರ್ಥಿಕ ಸಬಲೀಕರಣ ಯೋಜನೆಯ (SEED) ಅಡಿಯಲ್ಲಿನ ಯಶಸ್ಸಿನ ಕಥೆಗಳು, ಈ ಸಮುದಾಯಗಳಿಗೆ ಸೇರಿದ ಕುಶಲಕರ್ಮಿಗಳ ಸಾಂಪ್ರದಾಯಿಕ ಕೌಶಲ್ಯಗಳು, ಕರಕುಶಲತೆ ಮತ್ತು ಉತ್ಪನ್ನಗಳು, ಈ ಕಾರ್ಯಕ್ರಮದ ಇತರ ವೈಶಿಷ್ಟ್ಯಗಳಾಗಿವೆ. DNT ಸಮುದಾಯಗಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಕೈಗೊಂಡ ಇತರ ಉಪಕ್ರಮಗಳನ್ನು ಸಹ ಈ ಸಂದರ್ಭದಲ್ಲಿ ಉಲ್ಲೇಖಿಸಿ ಹೈಲೈಟ್ ಮಾಡಲಾಗುತ್ತದೆ.

21 ಫೆಬ್ರವರಿ 2019 ರಂದು ಒಂದು ಪ್ರಮುಖ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳಿಗೆ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು (DWBDNC) ರಚಿಸಿತು.

ನಂತರ ಅವರಿಗಾಗಿ ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ವಸತಿ ಕ್ಷೇತ್ರಗಳಲ್ಲಿ DNT ಸಮುದಾಯಗಳ ಸಮಗ್ರ ಕಲ್ಯಾಣವನ್ನು ಬೆಂಬಲಿಸಲು ಸರ್ಕಾರವು DNT ಗಳ ಆರ್ಥಿಕ ಸಬಲೀಕರಣ ಯೋಜನೆಯನ್ನು (SEED) ಪ್ರಾರಂಭಿಸಿತು. ಈ ಯೋಜನೆಯನ್ನು ಎಂಟು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಎಲ್ಲಾ ಎಂಟು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು DNT ಪ್ರಮಾಣಪತ್ರಗಳನ್ನು ನೀಡುತ್ತಿವೆ.

 

*****


(ಪ್ರಕಟಣೆ ಐ.ಡಿ.: 2305273) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil