ರಕ್ಷಣಾ ಸಚಿವಾಲಯ
ದೇಶೀಯ ಉತ್ಪಾದನೆ ಉತ್ತೇಜಿಸಲು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕ್ಷಿಪಣಿ ವ್ಯವಸ್ಥೆಗಳ ತಂತ್ರಜ್ಞಾನವನ್ನು ಭಾರತೀಯ ರಕ್ಷಣಾ ಉದ್ಯಮಕ್ಕೆ ವರ್ಗಾಯಿಸಲು ರಕ್ಷಣಾ ಸಚಿವರ ಅನುಮೋದನೆ
प्रविष्टि तिथि:
25 AUG 2026 1:02PM by PIB Bengaluru
ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯ ದೂರದೃಷ್ಟಿಯನ್ನು ಸಾಧಿಸುವ ಮಹತ್ವದ ಹೆಜ್ಜೆಯಾಗಿ, ಡಿ ಆರ್ ಡಿ ಒ ಅಭಿವೃದ್ಧಿಪಡಿಸಿರುವ ಎಲ್ಲಾ ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಗಳ ತಂತ್ರಜ್ಞಾನಗಳನ್ನು ದೇಶೀಯ ಉತ್ಪಾದನೆಗಾಗಿ ಭಾರತೀಯ ರಕ್ಷಣಾ ಉದ್ಯಮಕ್ಕೆ ವರ್ಗಾಯಿಸಲು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ಅನ್ವಯವಾಗುವ ಅರ್ಹತೆಗಳು, ಪ್ರಮಾಣೀಕರಣಗಳು ಮತ್ತು ನಿಯಂತ್ರಣ ಅವಶ್ಯಕತೆಗಳ ಪ್ರಕಾರ ದೇಶೀಯ ಉತ್ಪಾದನೆಯನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಮೂಲಕ ರಕ್ಷಣಾ ವ್ಯವಸ್ಥೆಯಲ್ಲಿ ದೇಶೀಯ ಕೈಗಾರಿಕೆಗಳ ಹೆಚ್ಚಿನ ಉತ್ತೇಜನ ನೀಡುವಿಕೆಯಕಲ್ಲಿ ಈ ತಂತ್ರಜ್ಞಾನ ವರ್ಗಾವಣೆಯು ಪ್ರಮುಖ ಮೈಲಿಗಲ್ಲಿ ಎಂದು ಗುರುತಿಸಲ್ಪಡುತ್ತದೆ.
ಈ ನಿಬಂಧನೆಯು ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿಯನ್ನು ಕೈಗಾರಿಕಾ ಉತ್ಪಾದನೆಗೆ ಯಶಸ್ವಿಯಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ, ಇದು ಸುಧಾರಿತ ರಕ್ಷಣಾ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ತಯಾರಿಕೆಗಾಗಿ ಭಾರತೀಯ ಉದ್ಯಮದ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಡಿ ಆರ್ ಡಿ ಒ ಸಂಸ್ಥೆಯ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ರಕ್ಷಣಾ ಕೈಗಾರಿಕಾ ನೆಲೆಯನ್ನು ಬಲವರ್ಧನೆ ಮತ್ತು ಪೂರೈಕೆ ಸರಣಿಯಲ್ಲಿ ಭಾರತೀಯ ಎಂಎಸ್‌ಎಂಇಗಳು ಮತ್ತು ಇತರ ತಂತ್ರಜ್ಞಾನ ಪಾಲುದಾರರ ಭಾಗವಹಿಸುವಿಕೆಗೆ ಅವಕಾಶಗಳನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಉಪಕ್ರಮವು ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು, ಆಮದು ಅವಲಂಬನೆ ತಗ್ಗಿಸುವುದು ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಳ ಮಾಡುವುದು ಮತ್ತು ಭಾರತದ ರಕ್ಷಣಾ ಉತ್ಪಾದನಾ ವಲಯದ ಬೆಳವಣಿಗೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಮುಂದುವರಿದ ರಕ್ಷಣಾ ತಂತ್ರಜ್ಞಾನಗಳ ವರ್ಗಾವಣೆ ಮತ್ತುಅವುಗಳ ಅಳವಡಿಕೆಯನ್ನು ಸುಗಮಗೊಳಿಸಲು ಮತ್ತು ದೇಶದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಉದ್ಯಮದೊಂದಿಗೆ ನಿಕಟವಾಗಿ ಕೆಲಸ ಮಾಡಲು ಡಿ ಆರ್ ಡಿ ಒ ಸಂಸ್ಥೆ ಬದ್ಧವಾಗಿದೆ.
*****
(रिलीज़ आईडी: 2303049)
आगंतुक पटल : 11