ಪ್ರಧಾನ ಮಂತ್ರಿಯವರ ಕಛೇರಿ
ಬಾಹ್ಯಾಕಾಶ ಸ್ಟಾರ್ಟ್ ಅಪ್ ಸಿಇಒಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ
प्रविष्टि तिथि:
23 AUG 2026 11:42AM by PIB Bengaluru
ಪ್ರಧಾನಮಂತ್ರಿ: ನೀವು ಹೊಸ ಕ್ಷೇತ್ರದಲ್ಲಿ ಧೈರ್ಯ ತೋರಿಸಿದ್ದೀರಿ. ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಸರ್ಕಾರದ ಮಾತನ್ನು ನಂಬಿದ್ದೀರಿ. ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ, ನಾವು ಅವುಗಳಲ್ಲಿ ಸ್ಥಿರವಾಗಿರಬೇಕು, ನಾವು ಅವುಗಳನ್ನು ಮತ್ತೆ ಮತ್ತೆ ಬದಲಾಯಿಸಬಾರದು ಎಂಬುದು ನನ್ನ ಅಭಿಪ್ರಾಯ. ಇದರಿಂದಾಗಿ ಅಪಾಯ ಸ್ವೀಕರಿಸಲು ಬಯಸುವ ಯಾರಾದರೂ ನಂಬಿಕೆ ಅಥವಾ ವಿಶ್ವಾಸ ಹೊಂದಬಹುದು, ಸರಿ, ಏನಾದರೂ ತಪ್ಪಾದಲ್ಲಿ ಅದು ನನ್ನ ತಪ್ಪಿನಿಂದಾಗಿರುತ್ತದೆ, ಆದರೆ ಯಾರೂ ನನ್ನನ್ನು ಕೈಬಿಡುವುದಿಲ್ಲ. ಇದು ನಮ್ಮ ಪ್ರಯತ್ನವಾಗಿತ್ತು - ಆ ನಂಬಿಕೆ ಮತ್ತು ವಿಶ್ವಾಸವನ್ನು ಸೃಷ್ಟಿಸುವುದು.
ಸಿಇಒ: ನಾವು ಭಾರತದ ಮೊದಲ ಬಾಹ್ಯಾಕಾಶ ತಂತ್ರಜ್ಞಾನ ಯುನಿಕಾರ್ನ್ ಹೊಂದಿದ್ದೇವೆ. ಜುಲೈ 18ರಂದು ನಾವು ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದ್ದೇವೆ, ಉಪಗ್ರಹಗಳ ಉಡಾವಣೆ ಮಾಡಿದ್ದೇವೆ. ಇದು ಕೇವಲ ಆರಂಭ. ಸಾಮಾನ್ಯವಾಗಿ, ಇದು ಸ್ಕೈರೂಟ್‌ಗೆ ಮಾಡುವ ಒಂದು ಪೂರ್ವಸಿದ್ಧತಾ ಅಭ್ಯಾಸವಷ್ಟೆ, ಇದು ಕೇವಲ ಆರಂಭ. ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ನಾವು ತಿಂಗಳಿಗೆ ಒಂದು ಉಡಾವಣೆ ನಡೆಸುತ್ತೇವೆ. ಈ ವಲಯವನ್ನು ಖಾಸಗಿ ರಂಗಕ್ಕೆ ತೆರೆದಿರುವುದಕ್ಕೆ ನಿಮಗೆ ಧನ್ಯವಾದಗಳು ಸರ್. ಈಗಾಗಲೇ 3 ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ನಾವು ಈಗಾಗಲೇ ತಿಂಗಳಿಗೆ ಒಂದು ರಾಕೆಟ್ ಸಾಮರ್ಥ್ಯವನ್ನು ಹೊಂದಿದ್ದೇವೆ. ಇದು ಸಹ ಕೇವಲ ಆರಂಭ. ನಮ್ಮ ಭವಿಷ್ಯದ ಕನಸು ವಾರಕ್ಕೆ ಒಂದು ಉಡಾವಣೆ ಮತ್ತು ದಿನಕ್ಕೆ ಹಲವಾರು ಉಡಾವಣೆಗಳನ್ನು ಮಾಡುವ ಉದ್ದೇಶ ಹೊಂದಿದ್ದೇವೆ.
ಸಿಇಒ: ನಾವು ವಿಶ್ವದ ಅತ್ಯಾಧುನಿಕ ಎಂಜಿನ್‌ಗಳಲ್ಲಿ ಒಂದಾದ ಎಂಜಿನ್ ತಯಾರಿಸಿದ್ದೇವೆ. ಸರ್, ನಾವು ಅದನ್ನು ಸಿದ್ಧಪಡಿಸಿದ್ದೇವೆ ಮತ್ತು ಅದರ ಪರೀಕ್ಷೆ ನಡೆಯುತ್ತಿದೆ.
ಪ್ರಧಾನಮಂತ್ರಿ: ಹೂಡಿಕೆದಾರರಿಗೆ ನಂಬಿಕೆ, ವಿಶ್ವಾಸ ಮೂಡಿದೆಯೇ?
ಸಿಇಒ: ಸರ್, ಸ್ಕೈರೂಟ್‌ನ ಮೊದಲ ಉಡಾವಣೆಯ ನಂತರ ಅವರ ವಿಶ್ವಾಸ ಹೆಚ್ಚಾಗಿದೆ.
ಪ್ರಧಾನಮಂತ್ರಿ: ಒಳ್ಳೆಯದು. ಆ ಮಾರ್ಗವು ನಿಮಗೆ ಸಹಾಯ ಮಾಡುತ್ತಿದೆಯೇ?
ಸಿಇಒ: ಇದು ಬಹಳಷ್ಟು ಸಹಾಯ ಮಾಡುತ್ತಿದೆ.
ಪ್ರಧಾನಮಂತ್ರಿ: ಈಗ ಜಗತ್ತು ಭಾರತದ ಸ್ಟಾರ್ಟ್ ಅಪ್ ಗಳನ್ನು ಹುಡುಕುತ್ತಿರಬಹುದು, ಇದರ ಹಿಂದೆ ಯಾರಿದ್ದಾರೆ ಎಂದು ಆಶ್ಚರ್ಯ ಪಡುತ್ತಿರಬಹುದು. ಏಕೆಂದರೆ ಏನೇ ಒಂದು ಪ್ರಗತಿ ಆದಾಗ, ತಕ್ಷಣ ಜನರ ಗಮನ ಅಲ್ಲಿಗೆ ಹೋಗುತ್ತದೆ.
ಸಿಇಒ: ಬಾಹ್ಯಾಕಾಶ ಉದ್ಯಮವು ತೆರೆದುಕೊಂಡ ನಂತರ, ನಾವು ಒಂದು ಉತ್ತಮ ಪ್ರವೃತ್ತಿಯನ್ನು ನೋಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅಮರಿಕ ಮತ್ತು ಯುರೋಪಿನಲ್ಲಿರುವ ನಮ್ಮ ನಾಗರಿಕರು ಮತ್ತೆ ನಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದಾರೆ.
ಪ್ರಧಾನಮಂತ್ರಿ: ನಾವು ಅನೇಕ ಜನರನ್ನು ಸಂಪರ್ಕಿಸಬೇಕು. ಮೆಹ್ತಾ ಹೇಳಿದಂತೆ, ಈಗ ವಿದೇಶಕ್ಕೆ ಹೋಗಿದ್ದ ಜನರು ಹಿಂತಿರುಗುತ್ತಿದ್ದಾರೆ. ವಿಶ್ವಾದ್ಯಂತ ಜನರು ತಮ್ಮ ಜೀವನ ಕಂಡುಕೊಳ್ಳಲು ಬಯಸಿದರೆ, ಅವರು ಭಾರತಕ್ಕೆ ಬರಬೇಕು ಎಂದು ಭಾವಿಸುವಂತಹ ಪ್ರಭಾವಲಯವನ್ನು ನಾವು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ. ಯಾವುದಾದರೂ ಭಾರತೀಯ ಸ್ಟಾರ್ಟಪ್‌ಗೆ ಸೇರಿ. ಯಾವುದಾದರೂ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಸೇರಿ. ಇಡೀ ಪ್ರತಿಭಾನ್ವಿತ ಗುಂಪನ್ನು ಒಂದು ಆಯಸ್ಕಾಂತದಂತೆ, ನಿಮ್ಮ ಕಾರಣದಿಂದಾಗಿ ನಾವು ಆಕರ್ಷಿಸಬಹುದು, ಅದು ನಮಗೆ ಬಹಳ ದೊಡ್ಡ ಶಕ್ತಿಯಾಗಬಹುದು ಎಂದು ನಾನು ದೃಢವಾಗಿ ನಂಬುತ್ತೇನೆ.
ಸಿಇಒ: ಮುಂದಿನ 18 ತಿಂಗಳಲ್ಲಿ ನಾವು ಜಾಗತಿಕ ಮಟ್ಟದ ನಿಲ್ದಾಣ ಜಾಲವನ್ನು ಸ್ಥಾಪಿಸಲು ಬಯಸುತ್ತೇವೆ ಎಂಬುದು ನಮ್ಮ ದೃಷ್ಟಿಯಾಗಿದೆ.
ಸಿಇಒ: 5 ವರ್ಷ ಅಥವಾ 15 ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ಉಪಗ್ರಹಗಳು ಬಳಸುವ ಎಂಜಿನ್‌ಗಳನ್ನು ನಾವು ತಯಾರಿಸುತ್ತೇವೆ. ಜಾಗತಿಕವಾಗಿ ನಮಗೆ ಉತ್ತಮ ಸ್ಪಂದನೆ ಅಥವಾ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್, ನಿಮ್ಮ ಪ್ರಯತ್ನವು ಇದರಲ್ಲಿಯೂ ಬಹಳ ಮುಖ್ಯವಾಗಿದೆ, ಏಕೆಂದರೆ ಈಗ ಭಾರತೀಯ ಕಂಪನಿಗಳು ರಫ್ತಿಗೆ ಸರ್ಕಾರದ ಬೆಂಬಲ ಪಡೆಯುತ್ತಿವೆ.
ಪ್ರಧಾನಮಂತ್ರಿ: ವೆಚ್ಚದ ವಿಷಯದಲ್ಲಿ ನಾವು ತುಂಬಾ ಸ್ಪರ್ಧಾತ್ಮಕವಾಗಿದ್ದೇವೆ, ಪ್ರತಿಭೆಯಲ್ಲಿ ಯಾವುದೇ ಪ್ರಶ್ನೆಯಿಲ್ಲ, ನಮ್ಮ ಜನರ ಅಪಾಯ ಸ್ವೀಕರಿಸುವ ಸಾಮರ್ಥ್ಯ ಹೇಗಾದರೂ ಹೆಚ್ಚಾಗಿದೆ. ಅದರಿಂದ ನಾವು ಬೇಗನೆ ನಮ್ಮ ಸ್ಥಾನವನ್ನು ಪಡೆಯಬಹುದು.
ಸಿಇಒ: ಈ ರೋಬೋಟಿಕ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶಕ್ಕೆ ಹೋಗುತ್ತದೆ, ನಿಷ್ಕ್ರಿಯ ಅಥವಾ ಸತ್ತ ಉಪಗ್ರಹವನ್ನು ಭೌತಿಕವಾಗಿ ಸೆರೆಹಿಡಿಯುತ್ತದೆ ಮತ್ತು ಅದನ್ನು ಕಕ್ಷೆಯಿಂದ ಹೊರಹಾಕುತ್ತದೆ.
ಸಿಇಒ: ಬಾಹ್ಯಾಕಾಶದಲ್ಲಿ ಇಂಧನ ಕೇಂದ್ರವನ್ನು ಸ್ಥಾಪಿಸುವ ದೃಷ್ಟಿಯೊಂದಿಗೆ ಡಾಕಿಂಗ್ ಮತ್ತು ಇಂಧನ ತುಂಬುವ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಿರುವ ಮೊದಲ ಭಾರತೀಯ ಕಂಪನಿ ನಾವಾಗಿದ್ದೇವೆ.
ಸಿಇಒ: ನನ್ನ ಹೆಸರು ಅಂತರಿಕ್ಷ್, ನನ್ನ ಸಹ-ಸಂಸ್ಥಾಪಕಿ ಮೋನಿಕಾ ಕೂಡ ಇಲ್ಲಿದ್ದಾರೆ. ಸರ್, ನಾವು ಭಾರತದ ಮೊದಲ ಬಾಹ್ಯಾಕಾಶ ಫಾರ್ಮಾ ಸ್ಟಾರ್ಟ್ ಅಪ್. ನಾವು ಬಾಹ್ಯಾಕಾಶಕ್ಕೆ ಹೋಗಬಹುದಾದ, ಅಲ್ಲಿ ಔಷಧಗಳನ್ನು ತಯಾರಿಸಬಹುದಾದ ಮತ್ತು ಬಾಹ್ಯಾಕಾಶದಿಂದ ಹಿಂದಿರುಗಬಹುದಾದ ಉಪಗ್ರಹಗಳನ್ನು ತಯಾರಿಸುತ್ತಿದ್ದೇವೆ.
ಪ್ರಧಾನಮಂತ್ರಿ: ನಿಮ್ಮ ಹೆಸರು ಅಂತರಿಕ್ಷ್-ನಿಮ್ಮ ಕುಟುಂಬ ಈಗಾಗಲೇ ಈ ಕ್ಷೇತ್ರದಲ್ಲಿದೆಯೇ?
ಸಿಇಒ: ಇಲ್ಲ ಸರ್, ನನ್ನ ತಾಯಿ ನನಗೆ ಈ ಹೆಸರು ಇಟ್ಟಿದ್ದಾರೆ.
ಸಿಇಒ: ಒಂದು ಉಡಾವಣೆಯ ನಂತರ, ಕಳೆದ 1 ತಿಂಗಳಲ್ಲಿ ನಾವು 8 ಉಡಾವಣಾ ಗುತ್ತಿಗೆ ಒಪ್ಪಂದಗಳನ್ನು ಪಡೆದಿದ್ದೇವೆ.
ಪ್ರಧಾನಮಂತ್ರಿ: ಒಳ್ಳೆಯದು, ಒಳ್ಳೆಯದು.
ಸಿಇಒ: ಹೆಚ್ಚಾಗಿ ಅವೆಲ್ಲವೂ ಅಂತಾರಾಷ್ಟ್ರೀಯ ಒಪ್ಪಂದಗಳಾಗಿವೆ.
ಸಿಇಒ: ಸರ್, ಇದೀಗ ನಾವು 1 ದಶಲಕ್ಷ ರೈತರೊಂದಿಗೆ ಈ ನಾವೀನ್ಯತೆಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ.
ಸಿಇಒ: ಸರ್ ಇದು ನಿಮಗಾಗಿ, ಆದ್ದರಿಂದ ಒಂದು ನೆನಪು ಉಳಿಯುತ್ತದೆ.
ಪ್ರಧಾನಮಂತ್ರಿ: ಅದ್ಭುತ.
ಸಿಇಒ: ನೀವು ಖಾಸಗಿ ರಂಗಕ್ಕೆ ಬಾಹ್ಯಾಕಾಶ ವಲಯವನ್ನು ತೆರೆದಿದ್ದರಿಂದ ಖಾಸಗಿ ಉಪಗ್ರಹಗಳು ಈಗ ಭಾರತದ ಸೌಂದರ್ಯವನ್ನು ತೋರಿಸುತ್ತಿವೆ.
*****
(रिलीज़ आईडी: 2302492)
आगंतुक पटल : 10