ಪ್ರಧಾನ ಮಂತ್ರಿಯವರ ಕಛೇರಿ
ಜಪಾನ್ ರಕ್ಷಣಾ ಸಚಿವರಿಂದ ಪ್ರಧಾನಮಂತ್ರಿ ಮೋದಿ ಭೇಟಿ
ಜಪಾನಿನ ಪ್ರಧಾನಮಂತ್ರಿ ಸನಾಯ್ ತಕಾಯಿಚಿ ಅವರ ಇತ್ತೀಚಿನ ಭಾರತ ಭೇಟಿಯ ಸಮಯದಲ್ಲಿ ನಡೆದ ಫಲಪ್ರದ ಚರ್ಚೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ
'ಮೇಕ್-ಇನ್-ಇಂಡಿಯಾ' ಅಡಿಯಲ್ಲಿ ರಕ್ಷಣಾ ಕ್ಷೇತ್ರದ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯಲ್ಲಿ ಭಾರತೀಯ ಕಂಪನಿಗಳು ಹಾಗೂ ನವೋದ್ಯಮಗಳೊಂದಿಗೆ ಜಪಾನ್ ಪಾಲುದಾರರಾಗಲು ಇರುವ ಅವಕಾಶಗಳನ್ನು ಒತ್ತಿಹೇಳಿದ ಪ್ರಧಾನಮಂತ್ರಿ
प्रविष्टि तिथि:
20 AUG 2026 9:08PM by PIB Bengaluru
ಪ್ರಸ್ತುತ ಭಾರತಕ್ಕೆ ಅಧಿಕೃತ ಭೇಟಿಯಲ್ಲಿರುವ ಜಪಾನ್ ರಕ್ಷಣಾ ಸಚಿವರಾದ ಶ್ರೀ ಶಿಂಜಿರೊ ಕೊಯಿಜುಮಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಜುಲೈ 2026 ರಲ್ಲಿ ನಡೆದ 16 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಪ್ರಧಾನಮಂತ್ರಿ ಸಾನಾಯ್ ತಕಾಯಿಚಿ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಅವರೊಂದಿಗೆ ನಡೆಸಿದ ವಿವರವಾದ ಚರ್ಚೆಗಳನ್ನು ಪ್ರಧಾನಮಂತ್ರಿಗಳು ಸ್ಮರಿಸಿದರು ಮತ್ತು ಭಾರತ ಹಾಗೂ ಜಪಾನ್ ನಡುವಿನ ರಕ್ಷಣಾ ಸಹಕಾರದ ಸ್ಥಿರ ವೇಗವನ್ನು ಶ್ಲಾಘಿಸಿದರು.
ಭಾರತ ಮತ್ತು ಜಪಾನ್ ನಡುವಿನ 'ವಿಶೇಷ ಆಯಕಟ್ಟಿನ ಮತ್ತು ಜಾಗತಿಕ ಪಾಲುದಾರಿಕೆ'ಯನ್ನು ಮತ್ತಷ್ಟು ಬಲಪಡಿಸುವ ತಮ್ಮ ದೃಷ್ಟಿಕೋನವನ್ನು ಪ್ರಧಾನಮಂತ್ರಿಯವರು ಮಂಡಿಸಿದರು. ಅಲ್ಲದೆ ಇಂಡೋ-ಪೆಸಿಫಿಕ್ ವಲಯ ಹಾಗೂ ಅದರಾಚೆಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಭಾರತ-ಜಪಾನ್ ರಕ್ಷಣಾ ಮತ್ತು ಭದ್ರತಾ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ, ವಿಶೇಷವಾಗಿ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗಾಗಿ ರಕ್ಷಣಾ ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳು ಮತ್ತು ನವೋದ್ಯಮಗಳೊಂದಿಗೆ ಪಾಲುದಾರರಾಗಲು ಜಪಾನ್ ಗೆ ಇರುವ ಅವಕಾಶಗಳನ್ನು ಪ್ರಧಾನಮಂತ್ರಿಗಳು ವಿವರಿಸಿದರು.
ದ್ವಿಪಕ್ಷೀಯ ರಕ್ಷಣಾ ಸಹಕಾರದ ಪ್ರಗತಿಯ ಕುರಿತು ಜಪಾನಿನ ರಕ್ಷಣಾ ಸಚಿವರಾದ ಕೊಯಿಜುಮಿ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು ಮತ್ತು ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಜಪಾನ್ ಸರ್ಕಾರದ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದರು.
*****
(रिलीज़ आईडी: 2301976)
आगंतुक पटल : 17
इस विज्ञप्ति को इन भाषाओं में पढ़ें:
Assamese
,
Malayalam
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Telugu